CHITRADURGA NEWS | 07 JANUARY 2026
ಚಿತ್ರದುರ್ಗ: ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸಬೇಕು. ಸರ್ಕಾರಿ ಶಾಲೆಗಳನ್ನು ಸಬಲೀಕರಣ ಮಾಡಬೇಕು ಎನ್ನುವ ಉಮೇದು ಅನೇಕ ಶಿಕ್ಷಕರು ಹಾಗೂ ಪೋಷಕರಲ್ಲಿದೆ.
ಈ ಪ್ರಯತ್ನದ ಭಾಗವಾಗಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ 20 ಮಕ್ಕಳು ವಿಮಾನವನ್ನೇರಿ ಎರಡು ದಿನಗಳ ಕಾಲ ದೆಹಲಿ ಪ್ರವಾಸು ಕೈಗೊಂಡಿದ್ದಾರೆ.
ಇದನ್ನೂ ಓದಿ: ವೇದಾವತಿಯಲ್ಲಿ ತೆಪ್ಪ ಮಗುಚಿ ಯುವಕ ಮೃತ | ಮೀನು ಹಿಡಿಯಲು ಹೋಗಿದ್ದಾಗ ಘಟನೆ
ಸರ್ಕಾರಿ ಶಾಲೆ ಮಕ್ಕಳಿಗೆ ವಿಮಾನ ಪ್ರಯಾಣದ ಅನುಭವ ನೀಡುವ ನಿಟ್ಟಿನಲ್ಲಿ ಅನೇಕ ಶಾಲೆಗಳು ಕಳೆದ ಕೆಲ ವರ್ಷಗಳಿಂದ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಈಗ ಈ ಸಾಲಿಗೆ ಕೋಟೆನಾಡು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಗೊರ್ಲತ್ತು ಸರ್ಕಾರಿ ಶಾಲೆಯೂ ಸೇರ್ಪಡೆಯಾಗಿದೆ.
ಗ್ರಾಮಸ್ಥರು, ಪೋಷಕರು, ದಾನಿಗಳ ನೆರವಿನಿಂದ ಗೊರ್ಲತ್ತು ಸರ್ಕಾರಿ ಶಾಲೆಯ ೨೦ ಮಕ್ಕಳು ಫ್ಲೈಟ್ ಹತ್ತಿ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ಈ 5 ಹೂವುಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿಯಂತೆ
ಮುಖ್ಯ ಶಿಕ್ಷಕ ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ದೆಹಲಿಯಲ್ಲಿ ಪಾರ್ಲಿಮೆಂಟ್, ಸುಪ್ರೀಂ ಕೋರ್ಟ್, ಇಂಡಿಯಾ ಗೇಟ್, ಅಕ್ಷರಧಾಮ, ಕುತುಬ್ ಮಿನಾರ್ ಮತ್ತಿತರೆ ಪ್ರವಾಸಿ ತಾಣಗಳನ್ನು ವೀಕ್ಷಣೆ ಮಾಡಲಿದ್ದಾರೆ.
ಜ.7 ರಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟ ಮಕ್ಕಳು 10.45ಕ್ಕೆ ದೆಹಲಿ ತಲುಪಿದ್ದಾರೆ.
ಕೇಂದ್ರ ಸಚಿವ ಎಚ್‌ಡಿಕೆ ನೆರವು:
ಚಳ್ಳಕೆರೆ ತಾಲೂಕಿನ ಮಕ್ಕಳು ದೆಹಲಿ ಪ್ರವಾಸಕ್ಕೆ ತೆರಳಿದ್ದು, ದೆಹಲಿಯಲ್ಲಿ ಮಕ್ಕಳು ಎರಡು ದಿನ ಓಡಾಟ ನಡೆಸಲು ಕೇಂದ್ರ ಸಚಿವ, ಕನ್ನಡಿಗ ಎಚ್.ಡಿ.ಕುಮಾರಸ್ವಾಮಿ ಬಸ್ ಹಾಗೂ ಊಟದ ವ್ಯವಸ್ಥೆ ಮಾಡಿದ್ದಾರೆ.
ದೆಹಲಿ ಕರ್ನಾಟಕ ಸಂಘದಿಂದ ಐಎಎಸ್ ಅಧಿಕಾರಿ ಕೃಪಾಕರ್ ಮಕ್ಕಳಿಗೆ ವಸತಿ ವ್ಯವಸ್ತೆ ಕಲ್ಪಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

