
CHITRADURGA NEWS | 07 JANUARY 2026
ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಈಚಘಟ್ಟ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸುವುದನ್ನು ವಿರೋಧಿಸಿ ಗ್ರಾಮಸ್ಥರು, ರೈತರು ಹಾಗೂ ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಜನವರಿ 07 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಈಚಘಟ್ಟದ ಸರ್ಕಾರಿ ಭೂಮಿ, ಹುಲ್ಲುಬನ್ನಿ ಖರಾಬು ಭೂಮಿಗಳಲ್ಲಿ ಸೊಲ್ಲಾರ್ ಪ್ಲಾಂಟ್ ಅಳವಡಿಕೆಗೆ ಅಥವಾ ಅನ್ಯ ಬಳಕೆಗೆ ಭೂಮಿ ನೀಡಬಾರದು 2024 ಮಾರ್ಚ್ 30 ರಂದೇ ರೈತರು ಮನವಿ ಸಲ್ಲಿಸಿದ್ದೆವು. ಆದಾಗ್ಯ ಸೋಲಾರ್ ಪ್ಲಾಂಟ್ ಅಳವಡಿಕೆಗೆ ರಿ.ಸ.ನಂ.6ರಲ್ಲಿ 52 ಎಕರೆ ನಿಗಧಿ ಮಾಡಿರುವುದು ಸರಿಯಲ್ಲ. ಈಗಾಗಲೇ ಖಾಸಗಿ ಕಂಪನಿಯವರು ಕೆಲಸ ಪ್ರಾರಂಭಿಸಿದ್ದು ತಕ್ಷಣ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಈಗ ಇರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಭೂಮಿ ಕಡಿಮೆ ಇದೆ ಎಂದು ಜಿಲ್ಲಾಧಿಕಾರಿಗಳೇ ತಿಳಿಸಿದ್ದಾರೆ. ಇದೇ ಭೂಮಿಯಲ್ಲಿ ನಮ್ಮದೇ ಗ್ರಾಮದ ಹಲವು ಕುಟುಂಬಗಳು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ಅಲ್ಲಿ ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಸಹಕಾರ ನೀಡಲಾಗಿದೆ. ಸದರಿ ಭೂಮಿ ಗ್ರಾಮಕ್ಕೆ ಹೊಂದಿಕೊಂಡಿದ್ದು ಜನಜಾನುವಾರುಗಳಿಗೆ ಅಗತ್ಯವಾಗಿದೆ.
ಆದ್ದರಿಂದ ಸೋಲಾರ್ ಪ್ಲಾಂಟ್ ಅಳವಡಿಕೆಗೆ ನೀಡಿರುವ ಆದೇಶ ರದ್ದು ಮಾಡಿ ಜನ, ಜಾನುವಾರುಗಳ ಅನುಕೂಲಕ್ಕೆ ಮೀಸಲಿಡಲು ಒತ್ತಾಯಿಸಲಾಯಿತು.
ಇದನ್ನೂ ಓದಿ: ಅಬಕಾರಿ ಲೈಸೆನ್ಸ್ ಇ-ಹರಾಜು | ಒಂದು ಅರ್ಜಿ ಶುಲ್ಕ ಎಷ್ಟು ಗೊತ್ತಾ ?
ಈ ವೇಳೆರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ.ಮಲ್ಲಿಕಾರ್ಜುನ್ ಕೊಗುಂಡೆ ರವಿ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಮಲ್ಲಿಕಾರ್ಜುನ್, ಸಿದ್ದರಾಮಣ್ಣ, ರವಿಕುಮಾರ್, ರಾಮಣ್ಣ, ಶಿವಮೂರ್ತಿ, ನಿರಂಜನಮೂರ್ತಿ, ಹನುಮಂತ್ ರೆಡ್ಡಿ, ಸಂಜೀವಪ್ಪ, ಲಕ್ಷ್ಮಣ, .ರುದ್ರಪ್ಪ, ಕರಿಯಪ್ಪ, ವೀರೇಶ್, ಮಲ್ಲೇಶಪ್ಪ, ತಿಪ್ಪೇಸ್ವಾಮಿ, ಕಲ್ಲೇಶ್, ಕನ್ನೇಶ್, ವೀರಭದ್ರಪ್ಪ, ಮದ್ದೂರ್ ಮಂಜುನಾಥ್, ಮಹಾರುದ್ರಪ್ಪ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
