ಮುಖ್ಯ ಸುದ್ದಿ
CRIME: ತಹಶೀಲ್ದಾರ್ ಜೀಪ್‌ಗೆ ಬೆಂಕಿ ಹಚ್ಚಿದ ಪೃಥ್ವಿರಾಜ್ | ಅನಾಹುತ ತಪ್ಪಿಸಿದ ಸಿಬ್ಬಂದಿ
CHITRADURGA NEWS |05 SEPTEMBER 2024
ಚಿತ್ರದುರ್ಗ: ತನ್ನ ತಾಯಿ ನೀಡಿದ ದೂರು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಆಡಳಿತ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆ ಮೇಲೆ ಅಸಮಾಧಾನ ವ್ಯಕ್ತಪಡಿಸಿ ವಿಧಾನ ಸೌಧದ ಮುಂಭಾಗ ತನ್ನ ಸ್ಕೂಟರ್‌ಗೆ ಬೆಂಕಿ ಹಾಕಿದ್ದ ಚಳ್ಳಕೆರೆಯ ಪೃಥ್ವಿರಾಜ್ ಇದೀಗ ಸರ್ಕಾರಿ ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ.
ಚಳ್ಳಕೆರೆ ನಗರದ ತಾಲ್ಲೂಕು ಕಚೇರಿ ಮುಂದೆ ನಿಂತಿದ್ದ ತಹಶೀಲ್ದಾರ್ ಜೀಪ್‌ಗೆ ಗುರುವಾರ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ಎಂದಿನಂತೆ ತಹಶೀಲ್ದಾರ್ ಕರ್ತವ್ಯಕ್ಕೆ ತಮ್ಮ ಸರ್ಕಾರಿ ವಾಹನದಲ್ಲಿ ಬಂದು ತಾಲ್ಲೂಕು ಕಚೇರಿ ಮುಂದೆ ನಿಲ್ಲಿಸಿ ಒಳಹೋಗಿದ್ದಾರೆ. ಕೆಲ ಕ್ಷಣಕ್ಕೆ ಏಕಾಏಕಿ ಕಚೇರಿ ಆವರಣಕ್ಕೆ ಬಂದ ಪೃಥ್ವಿರಾಜ್ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಕ್ಲಿಕ್ ಮಾಡಿ ಓದಿ:ದಿನ ಭವಿಷ್ಯ | ಸೆಪ್ಟೆಂಬರ್ 05 | ಹಠಾತ್ ಪ್ರಯಾಣ, ಹೊಸ ವಸ್ತ್ರ, ಆಭರಣ ಖರೀದಿ
ಬೆಂಕಿ ಹಚ್ಚಿದ ಕೆಲವೇ ಕ್ಷಣಗಳಲ್ಲಿ ಸಾರ್ವಜನಿಕರು, ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಪೃಥ್ವಿರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.