ಮುಖ್ಯ ಸುದ್ದಿ
ವಿವಿ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ | ಒಳ ಹರಿವಿನ ಪ್ರಮಾಣವೆಷ್ಟು
Published on
CHITRADURGA NEWS | 25 MAY 2024
ಚಿತ್ರದುರ್ಗ: ಕೃತಿಕಾ ಮಳೆಯಿಂದಾಗಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಕಳೆದೊಂದು ವಾರದಿಂದ ಉತ್ತಮ ಒಳ ಹರಿವು ಇತ್ತು.
ಮಳೆ ಕಡಿಮೆಯಾದಂತೆ ಕ್ರಮೇಣ ಒಳಹರಿವಿನ ಪ್ರಮಾಣವೂ ಕಡಿಮೆ ಆಗಿದ್ದು, ಮೇ.25 ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ ವಿವಿ ಸಾಗರಕ್ಕೆ 780 ಕ್ಯೂಸೆಕ್ ಒಳಹರಿವು ಕಂಡುಬಂದಿದೆ.
ಇದನ್ನೂ ಓದಿ: ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ಗೊತ್ತಾ | ಮೂರು ದಿನದ ಬಳಿಕ ಮತ್ತೆ ಹಾಜರಾದ ಮಳೆರಾಯ
135 ಅಡಿ ಎತ್ತರದ, 30 ಟಿಎಂಸಿ ಸಾಮಥ್ರ್ಯದ ವಿವಿ ಸಾಗರ ಜಲಾಯಶದಲ್ಲಿ ಸದ್ಯ 113.85 ಅಡಿ ನೀರು ಸಂಗ್ರಹವಾಗಿದೆ. ಡೆಡ್ ಸ್ಟೋರೇಜ್ ಸೇರಿದಂತೆ ಒಟ್ಟು 18.16 ಟಿಎಂಸಿ ನೀರು ಜಲಾಶಯದಲ್ಲಿದೆ.
ಮೇ.24 ರಂದು ಕೂಡಾ 780 ಕ್ಯೂಸೆಕ್ ನೀರು ಸಂಗ್ರಹವಾಗಿದ್ದು, ಮರು ದಿನವೂ ಅದೇ ಸ್ಥಿತಿ ಮುಂದುವರೆದಿದೆ.
ಮೇ.24 ಸಂಜೆ ಜಿಲ್ಲೆಯಲ್ಲಿ ಮತ್ತೆ ಮಳೆಯಾಗಿದ್ದು, ಮೇ.26 ರ ವರದಿಯಲ್ಲಿ ಹೆಚ್ಚುವರಿ ಒಳಹರಿವು ಗೊತ್ತಾಗಲಿದೆ.
Continue Reading
You may also like...
Related Topics:Chitradurga, Chitradurga news, Hiriyur, Kannada News, Reservoir Level, Vanivilasa Sagar Reservoir, VV Sagar, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಜಲಾಶಯ ಮಟ್ಟ, ವಾಣಿವಿಲಾಸ ಸಾಗರ ಜಲಾಶಯ, ವಿವಿ ಸಾಗರ, ಹಿರಿಯೂರು
Click to comment