ಹೊಳಲ್ಕೆರೆ
ಕೊಳಹಾಳು ಬಳಿ 5 ಕೋಟಿ ಮೊತ್ತದ ಚೆಕ್ ಡ್ಯಾಂ ಕಾಮಗಾರಿ | ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ
CHITRADURGA NEWS | 15 DECEMBER 2024
ಹೊಳಲ್ಕೆರೆ: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಭರಮಸಾಗರ ಹೋಬಳಿಯ ಕೊಳಹಾಳ್ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ನೂತನ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಮತ್ತೆ ಆರಂಭವಾಯ್ತು ಒಳಹರಿವು | ಇಂದಿನ ನೀರಿನ ಮಟ್ಟ ಎಷ್ಟು ?
ನಂತರ ಮಾತನಾಡಿದ ಶಾಸಕರು, ಎಲ್ಲಿ ನೀರು ಹರಿಯುತ್ತದೆ ಅಂತಹ ಪ್ರದೇಶಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುವುದರಿಂದ ಅದು ಮುಂದೆ ಜೀವ ನದಿಯಾಗಲಿದೆ. ಚೆಕ್ ಡ್ಯಾಂ ನಿರ್ಮಾಣದಿಂದ ಈ ಭಾಗದ ಜಾನುವಾರುಗಳಿಗೆ ನೀರು ಸಿಗಲಿದೆ, ಅಲ್ಲದೆ ಈ ಭಾಗದ ರೈತರಿಗೆ ನೀರಿನ ಅನುಕೂಲವಾಗಲಿದೆ. ಈ ದೃಷ್ಟಿಯಿಂದ ಇಲ್ಲಿ 5 ಕೋಟಿ ವೆಚ್ಚದಲ್ಲಿ ಚಕ್ ಡ್ಯಾಂನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಈ ಚೆಕ್ ಡ್ಯಾಂ ನಿಂದ ಸುತ್ತಾ-ಮುತ್ತಲ್ಲಿನ 10 ಹಳ್ಳಿಗಳ ಕೊಳವೆಭಾವಿಗಳಿಗೆ ನೀರಾಗಲಿದೆ.
ಈ ಭಾಗದ ಜನತೆ ನಮ್ಮ ಊರಿನ ಕೆರೆಗೆ ಪೈಪುನ ಲೈನ್ ಬಿಟ್ಟು ಹೋಗಿದೆ ಸೇರಿಸುವಂತೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಕೆರೆಗೆ ನೀರನ್ನು ತರುವ ಕಾರ್ಯವನ್ನು ಮಾಡಲಾಗಿದೆ. ಮತ್ತೊಂದು ಕಡೆಯ ಕೆರೆಗೂ ಸಹಾ ಶಾಸಕರ ಅನುದಾನವನ್ನು ನೀಡಿದ್ದೇನೆ. ನೀರಿನ ಸೌಲಭ್ಯದ ಜೊತೆಗೆ ಅಜ್ಜಪ್ಪನ ಹಳ್ಳಿ ಜೊತೆಗೆ 140 ಕೋಟಿ ವೆಚ್ಚದಲ್ಲಿ 10 ಎಕರೆ ಜಮೀನಿನಲ್ಲಿ ವಿದ್ಯುತ್ ಘಟಕವನ್ನು ನಿರ್ಮಾಣ ಮಾಡಲಾಗುತ್ತದೆ. ಮುಂದಿನ 1 ತಿಂಗಳಲ್ಲಿ ಇದರ ಭೂಮಿ ಪೂಜೆ ನಡೆಯಲಿದೆ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ನಿಮ್ಮ ಮೊಬೈಲ್‍ನಲ್ಲಿ ಈ ಆ್ಯಪ್ ಇಟ್ಟುಕೊಳ್ಳಿ | ಕಾಲ ಕಾಲಕ್ಕೆ ನಿಮ್ಮ ಆರೋಗ್ಯಕ್ಕೆ ಸಲಹೆ ಪಡೆಯಿರಿ
ಜೋಗ್ ಪಾಲ್ಸ್ ನಿಂದ ಅಜ್ಜಪ್ಪಹಳ್ಳಿಗೆ ವಿದ್ಯುತ್ ತರಲಾಗುತ್ತಿದೆ. ಮುಂದಿನ 1 ವರ್ಷದಲ್ಲಿ ಇದು ನಿರ್ಮಾಣವಾಗಲಿದೆ, ಇದರಿಂದ ಮುಂದಿನ 40 ವರ್ಷ ವಿದ್ಯುತ್ ಸಮಸ್ಯೆ ಇರುವುದಿಲ್ಲ, ಈಗಾಗಲೇ 50-60 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿದ ಕರೆಗಳು ತುಂಬಿವೆ. ಇನ್ನೂ 3,4 ತಿಂಗಳಲ್ಲಿ ಇನ್ನೂ ಕೆರೆಗಳಿಗೆ ನೀರನ್ನು ತುಂಬಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಈ ಭಾಗದ ರೈತರಿಗೆ ವಿದ್ಯುತ್ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಇದಕ್ಕಾಗಿ 500 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ.
ಕ್ಲಿಕ್ ಮಾಡಿ ಓದಿ: 13. ಮತ್ತೆರಡು ಬಂಡಿ ತಂದರು
ಈ ಸಂದರ್ಭದಲ್ಲಿ ಭರಮಸಾಗರ ಬಿಜೆಪಿ ಮಂಡಲದ ಅಧ್ಯಕ್ಷರಾದ ಶೈಲೇಶ್, ಕೊಳಹಾಳ್ ರಾಜಣ್ಣ ಚಿಕ್ಕಬೆನ್ನೂರು ರಾಜಣ್ಣ ಬಸವರಾಜಣ್ಣ , ಓಬಣ್ಣ, ಪ್ರಕಾಶ್, ನಾಗೇಂದ್ರಣ್ಣ, ಈಶಣ್ಣ, ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಾದ ಮನೋಜ್, ಮತ್ತು ಊರಿನ ಗ್ರಾಮಸ್ಥರು ಇದ್ದರು.