ಹೊಳಲ್ಕೆರೆ
ರೈತರಿಂದ KEB ಸ್ಟೇಷನ್ ಮುತ್ತಿಗೆ | ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
CHITRADURGA NEWS | 24 JANUARY 2025
ಹೊಳಲ್ಕೆರೆ: ತಾಲೂಕಿನ ರಾಮಗಿರಿ ವಿದ್ಯುತ್ ಮರು ಪ್ರಸರಣಾ ಕೇಂದ್ರಕ್ಕೆ ಶುಕ್ರವಾರ ರೈತರು ದಿಡೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Also Read: ಟೌನ್ ಕೋ-ಆಪರೇಟಿವ್ ಬ್ಯಾಂಕ್ ಚುನಾವಣೆ | ನಿಶಾನಿ ಜಯ್ಯಣ್ಣ ಟೀಮ್ ನಾಮಪತ್ರ ಸಲ್ಲಿಕೆ
ವಿದ್ಯುತ್ ಸರಭರಾಜಿನಲ್ಲಿ ಆಗುತ್ತಿರುವ ವ್ಯತ್ಯಯ ಹಾಗೂ ಸಮಸ್ಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ತಾಳಕಟ್ಟ, ಜಿ.ವಡೇರಹಳ್ಳಿ, ಉಪ್ಪಾರಹಟ್ಟಿ ಗ್ರಾಮದ ರೈತರು ಅಗ್ರಹಿಸಿದರು.
ರಾಮಗಿರಿ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ ಎಲ್ಲಾ ಫೀಡರ್, ಲೈನ್‌ಗಳ ಪೈಕಿ ತಾಳಕಟ್ಟ ಕಡೆ ಸಪ್ಲೆ ನೀಡುವ ಎಪ್ 1ಎ. ನಲ್ಲಿ ಮಾತ್ರ ಪ್ರತಿ ನಿತ್ಯ ಸಮಸ್ಯೆ ಕಂಡು ಬರುತ್ತಿದೆ.
ಬೇರೆ ಪೀಡರ್, ಲೈನ್ ಗಳಲ್ಲಿ ಸಮಸ್ಯೆ ಬರುತ್ತಿಲ್ಲ. ನಮ್ಮ ಲೈನ್ ನಲ್ಲಿಯೇ ಏಕೆ ಸಮಸ್ಯೆ ಎಂದು ಪ್ರಶ್ನಿಸಿದರು.
60 ವರ್ಷ ಹಳೆಯ ಲೈನ್ :
ತಾಳಕಟ್ಟ ಕಡೆ ಹಾಕಲಾಗಿರುವ ಲೈನ್‌ನಲ್ಲಿರುವ ವೈರ್ 60 ವರ್ಷದಷ್ಟು ಹಳೆಯದಾಗಿದೆ. ಹಿಂದೆ ಹಲವು ಬಾರಿ ಹೋರಾಟ ಮಾಡಿ ಹೊಸ ಲೈನ್ ಮಾಡಿಸಿದ್ದೆವು. ಆದರೆ ಕೆಲ ಲೈನ್ ಮ್ಯಾನ್‌ಗಳು ಅದನ್ನು ಅರಭಗಟ್ಟ ಕಡೆ ತಿರುಗಿಸಿ ನಮಗೆ ಮೋಸ ಮಾಡಿದ್ದಾರೆ. ಇದರಿಂದಾಗಿ ನಾವು ಮತ್ತೆ ಸಮಸ್ಯೆ ಅನುಭವಿಸುವಂತಾಗಿದೆ ಎಂದು ದೂರಿದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ತೋಟಗಳು ಒಣಗುತ್ತಿವೆ:
ರೈತರಿಗೆ ನೀಡಲು ವಿದ್ಯುತ್ ಕೊರತೆಯಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ ಇಲ್ಲಿ ಸರಿಯಾದ ರೀತಿಯಲ್ಲಿ ವಿದ್ಯುತ್ ನೀಡದ ಕಾರಣ ಅಡಿಕೆ, ತೆಂಗು, ಬಾಳೆ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. ಇನ್ನು ಚಳಿಗಾಲದಲ್ಲಿಯೇ ಹೀಗಾದರೆ ಬೇಸಿಗೆಗೆ ರೈತರ ಗತಿ ಏನು? ಕಳೆದ ವರ್ಷ ನೀರಿಲ್ಲದೆ ತೋಟಗಳು ಒಣಗಿ ಹೋಗಿವೆ. ಈ ಬಾರಿ ಸರಿಯಾಗಿ ವಿದ್ಯುತ್ ನೀಡದ ಕಾರಣ ತೋಟಗಳು ಒಣಗುವ ಪರಿಸ್ಥಿತಿಗೆ ಬಂದಿವೆ ಎಂದು ಆರೋಪಿಸಿದರು.
ಸುಟ್ಟು ಹೋದ 140 ಮೋಟಾರ್ :
ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಸರಭರಾಜಿನಲ್ಲಿ ಲೋಪಗಳು ಕಾಣಿಸಿಕೊಳ್ಳುತ್ತಿರುವ ಕಾರಣ ತಾಳಕಟ್ಟ, ಜಿ.ವಡೇರಹಳ್ಳಿ, ಉಪ್ಪಾರಹಟ್ಟಿ, ರಾಮಗಿರಿ ಕೆಲ ಭಾಗದ ತೋಟಗಳಲ್ಲಿಯ 140ಕ್ಕೂ ಹೆಚ್ಚು ಕೊಳವೆ ಬಾವಿ ಮೋಟಾರ್‌ಗಳು ಸುಟ್ಟು ಹೋಗಿವೆ. ಒಮ್ಮೆ ಮೋಟಾರ್ ಸುಟ್ಟುಹೋದಲ್ಲಿ ಕನಿಷ್ಠವೆಂದರೂ 8 ರಿಂದ 10 ಸಾವಿರ ರೂ ಖರ್ಚು ಬರುತ್ತಿದೆ.
ಕೆಲವು ಕಡೆ ಒಂದೇ ಮೋಟಾರ್ ಎರಡ್ಮೂರು ಬಾರಿ ಸುಟ್ಟು ಹೋಗಿವೆ ಇದರಿಂದ ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ. ಈಗಿರುವ ಲೈನ್ ಮ್ಯಾನ್ ಅನುಭವಿಯಲ್ಲದ ಕಾರಣ ಸಮಸ್ಯೆ ಬಗೆಹರಿಯುತ್ತಿಲ್ಲ. ಹಾಗಾಗಿ ಲೈನ್ ಮ್ಯಾನ್ ಕೂಡ ಬದಲಿಸಬೇಕು. ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸದಿದ್ದಲ್ಲಿ ರೈತರು ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
Also Read: ಆಹ್ವಾನ ಪತ್ರಿಕೆಯಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಕ್ರಿಡಾಂಗಣವೆಂದೇ ನಮೂದಿಸಿ
ಶಿವಗಂಗ ಬೆಸ್ಕಾಂ ಎಸ್‌ಓ ಮನೋಹರ್ ಮಾತನಾಡಿ, ಮಲ್ಲಾಡಿಹಳ್ಳಿ ಎಸ್‌ಓ ರಜೆಯಲ್ಲಿರುವ ಕಾರಣ ನಾನು ಎರವಲು ಸೇವೆಯಲ್ಲಿದ್ದೇನೆ. ತಾಳಕಟ್ಟ ಸಮಸ್ಯೆ ನನಗೆ ಮನವರಿಕೆ ಇಲ್ಲ. ಆದರೂ ಶನಿವಾರ ಸ್ಥಳಕ್ಕೆ ಫವರ್‌ಮ್ಯಾನ್ ನೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುತ್ತೇನೆ. ಅಗತ್ಯವಿದ್ದಲ್ಲಿ ಲೈನ್ ಬದಲಾವಣೆಗೆ ಯೋಜನೆ ರೂಪಿಸಿ ಕಳಿಸಿಕೊಡುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ತಾಳಕಟ್ಟ, ಜಿ.ವಡೇರಹಳ್ಳಿ, ಉಪ್ಪಾರಹಟ್ಟಿ, ಜನತಾ ಕಾಲೂನಿಯ ಸುಮಾರು 50 ಕ್ಕೂ ರೈತರು ಭಾಗವಹಿಸಿದ್ದರು.