ಮುಖ್ಯ ಸುದ್ದಿ
ಆಹ್ವಾನ ಪತ್ರಿಕೆಯಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಕ್ರಿಡಾಂಗಣವೆಂದೇ ನಮೂದಿಸಿ
CHITRADURGA NEWS | 24 JANUARY 2025
ಚಿತ್ರದುರ್ಗ: ಗಣರಾಜ್ಯೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಎಂದು ನಮೂದಿಸಿದ್ದು, ಇದು ಸರಿಯಲ್ಲ, ಕ್ರೀಡಾಂಗಣದ ನಿಜವಾದ ಹೆಸರು ಶ್ರೀ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣವಾಗಿದ್ದು, ಇದನ್ನೇ ಮುದ್ರಣ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಆಹ್ವಾನ ಪತ್ರಿಕೆ ಮುದ್ರಣವಾಗಿದ್ದು, ಅದನ್ನು ಹಿಂಪಡೆದು ಕ್ರಿಡಾಂಗಣಕ್ಕೆ ನಾಮಕರಣ ಮಾಡಿರುವ ಹೆಸರನ್ನೇ ಮುದ್ರಿಸಬೇಕು ಎಂದು ಶ್ರೀ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಣಿವೆ ಮಾರಮ್ಮನ ಪೋಟೋ ಕ್ಲಿಕ್ಕಿಸಿಕೊಂಡ ಡಿಕೆಶಿ
ನಗರದ ಚಳ್ಳಕೆರೆ ಟೋಲ್‍ಗೇಟ್ ಬಳಿಯಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಕ್ರೀಡಾಂಗಣಕ್ಕೆ ಅಂದಿನ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರು, 1962 ರಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿ ಕ್ರೀಡಾಂಗಣ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಿದ್ದಾರೆ.
ಅಂದಿನಿಂದ ಈ ಕ್ರೀಡಾಂಗಣದ ಹೆಸರನ್ನು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣವೆಂದು ಕರೆಯಲಾಗುತ್ತಿದೆ. ಅಲ್ಲಿ ನಡೆಯುವ ಕಾರ್ಯಕ್ರಮಗಳ ಆಹ್ವಾನಪತ್ರಿಕೆಯಲ್ಲೂ ಸಹ ಇದೇ ಹೆಸರು ನಮೂದಿಸಲಾಗಿದೆ.
ಇದನ್ನೂ ಓದಿ: ಪ್ರವಾಸೋದ್ಯಮ ಇಲಾಖೆ | ಹೋಟೆಲ್, ರೆಸ್ಟೋರೆಂಟ್, ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ
ಆದರೆ, ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಆಹ್ವಾನಪತ್ರಿಕೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಎಂದು ನಮೂದಿಸಿ ಸ್ವಾಮೀಜಿಗಳ ಹೆಸರನ್ನು ಬಿಟ್ಟಿರುವುದು ಖಂಡನೀಯ ಮತ್ತು ಇದು ತ್ರಿವಿದ ದಾಸೋಹಿಗಳಾದ ಪರಮಪೂಜ್ಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಜೀಗಳ ಭಕ್ತರಿಗೆ ನೋವುಂಟು ಮಾಡಿದೆ.
ತಕ್ಷಣ ಈಗ ಮುದ್ರಿಸಿರುವ ಆಹ್ವಾನಪತ್ರಿಕೆಯನ್ನು ಹಿಂಪಡೆದು ಶ್ರೀಗಳ ಹೆಸರನ್ನು ಮುದ್ರಿಸಬೇಕು ಎಂದು ಸಮಿತಿಯ ಅಧ್ಯಕ್ಷ ಎನ್.ಜೀತೇಂದ್ರ, ಎ.ಬಿ.ಮಂಜುನಾಥ್, ರುದ್ರೇಶ್, ಅಭಿಲಾಶ್, ಯರಿಸ್ವಾಮಿ, ಛಲವಾದಿ ತಿಪ್ಪೇಸ್ವಾಮಿ ಮತ್ತಿತರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.