CHITRADURGA NEWS | 22 OCTOBER 2024
ಚಿತ್ರದುರ್ಗ: ಸೋಮವಾರ ರಾತ್ರಿ ಸುರಿದ ಮಳೆ(Rain)ಗೆ ಚಳ್ಳ ಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ 60.2 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ 120 ಮನೆ( House) ಹಾನಿ(damage)ಯಾಗಿದೆ.
ಕ್ಲಿಕ್ ಮಾಡಿ ಓದಿ: ಲಾರಿ ಡಿಕ್ಕಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 27.7 ಮಿ.ಮೀ, ನಾಯಕನಹಟ್ಟಿ 60.2 ಮಿ.ಮೀ, ಪರಶುರಾಂಪುರ 29.7 ಮಿ.ಮೀ, ತಳಕು 32.7 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 20.5 ಮಿ.ಮೀ, ಭರಮಸಾಗರ 19.3 ಮಿ.ಮೀ, ಹಿರೇಗುಂಟನೂರು 28.2 ಮಿ.ಮೀ, ತುರುವನೂರು 26.1 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರು 30.4 ಮಿ.ಮೀ, ಐಮಂಗಲ 14.8 ಮಿ.ಮೀ, ಧರ್ಮಪುರ 17 ಮಿ.ಮೀ, ಜವನಗೊಂಡನಹಳ್ಳಿ 19.7 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 7.7 ಮಿ.ಮೀ, ಬಿ.ದುರ್ಗ 5.6 ಮಿ.ಮೀ, ರಾಮಗಿರಿ 6.8 ಮಿ.ಮೀ, ತಾಳ್ಯ 21.8 ಮಿ.ಮೀ ಮಳೆಯಾಗಿದೆ.
ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | 12 ಸಾವಿರ ಗಡಿ ದಾಟಿದ ಹತ್ತಿ ರೇಟ್
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 12.8 ಮಿ.ಮೀ, ಮಾಡದಕೆರೆ 40.3 ಮಿ.ಮೀ, ಮತ್ತೋಡು 44.7 ಮಿ.ಮೀ, ಶ್ರೀರಾಂಪುರ 40.5 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 16.8 ಮಿ.ಮೀ ಹಾಗೂ ದೇವಸಮುದ್ರದಲ್ಲಿ 27 ಮಿ.ಮೀ ಮಳೆಯಾಗಿದೆ.
120 ಮನೆಗಳು ಭಾಗಶಃ ಹಾನಿ: ಸೋಮವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 120 ಮನೆಗಳು ಭಾಗಶಃ ಹಾನಿಯಾಗಿದ್ದು, 51 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ, 7 ಸಣ್ಣ ಜಾನುವಾರು ಹಾನಿ ಹಾಗೂ 10 ಹೆಕ್ಟೇರ್ ಕೃಷಿ ಬೆಳೆ ಹಾಗೂ 8 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಭರ್ಜರಿ ನೀರು | ಮೈದುಂಬಿ ಹರಿಯುತ್ತಿರುವ ವೇದಾವತಿ
ಚಿತ್ರದುರ್ಗ ತಾಲ್ಲೂಕಿನಲ್ಲಿ 35 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 40 ಮನೆಗಳು ಹಾಗೂ 7 ಸಣ್ಣ ಜಾನುವಾರು ಹಾನಿ, 50 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ, 10 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 8 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
ಹೊಳಲ್ಕೆರೆ 13 ಮನೆಗಳು, ಹೊಸದುರ್ಗ 9 ಮನೆಗಳು ಭಾಗಶಃ ಹಾನಿ ಹಾಗೂ 1 ಮನೆಗೆ ನೀರು ನುಗ್ಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 11 ಮನೆಗಳು ಭಾಗಶಃ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 12 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

