ಮುಖ್ಯ ಸುದ್ದಿ
BREAKING NEWS – ಮುರುಘಾ ಶರಣರಿಗೆ ಜಾಮೀನು | ಹೈಕೋರ್ಟ್ ವಿಧಿಸಿದ ಷರತ್ತುಗಳೇನು
ಚಿತ್ರದುರ್ಗ ನ್ಯೂಸ್.ಕಾಂ: ಪೋಕ್ಸೋ ಪ್ರಕರಣದಲ್ಲಿ ಕಳೆದ ಒಂದು ವರ್ಷ ಎರಡು ತಿಂಗಳಿಂದ ಜಿಲ್ಲಾ ಕಾರಾಗೃಹದಲ್ಲಿದ್ದ ಮುರುಘಾ ಮಠದ ಪೀಠಾಧಿಪತಿ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಷರತ್ತುಬದ್ಧ ಜಾಮೀನು ವಿಧಿಸಿರುವ ನ್ಯಾಯಾಲಯ, ಮೊದಲನೆಯದಾಗಿ ಮುರುಘಾ ಮಠ ಇರುವ, ಚಿತ್ರದುರ್ಗ ಜಿಲ್ಲೆಗೆ ಶ್ರೀಗಳು ಭೇಟಿ ನೀಡುವಂತಿಲ್ಲ ಎನ್ನುವುದು ಮೊದಲನೇ ಹಾಗೂ ಪ್ರಮುಖ ಷರತ್ತಾಗಿದೆ.
ಶ್ರೀಗಳ ಪಾಸ್‍ಪೋರ್ಟ್ ಅನ್ನು ವಶಕ್ಕೆ ನೀಡಬೇಕು. ಹಾಗೂ ನ್ಯಾಯಾಲಯದ ವಿಚಾರಣೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ಮುರುಘಾ ಶರಣರಿಗೆ ಜಾಮೀನು ಮಂಜೂರು
ನ್ಯಾಯಾಲಯ ವಿಧಿಸಿರುವ ಇತರೆ ಏಳು ಷರತ್ತುಗಳು:
- ಪ್ರಕರಣದ ವಿಚಾರಣೆ ಮುಗಿಯುವವರೆಗೆ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ ಮಾಡಬಾರದು
- ಎರಡು ಲಕ್ಷ ರೂ. ವೈಯಕ್ತಿಕ ಬಾಂಡ್ ನೀಡಬೇಕು.
- ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು.
- ಸಾಕ್ಷಿಗಳನ್ನು ಬೆದರಿಸಬಾರದ
- ಜಾಮೀನು ಮಂಜೂರಾತಿ ಆದೇಶವನ್ನು ಶರಣರು ದುರ್ಬಳಕೆ ಮಾಡಿಕೊಳ್ಳಬಾರದು.
- ಸಾಕ್ಷಿ ನಾಶಕ್ಕೆ ಯತ್ನಿಸಬಾರದು
- ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ತನ್ನಂದ ತಾನೇ ರದ್ದಾಗಲಿದೆ.