By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    Prasanna Ganapathi Procession
    ಅದ್ದೂರಿಯಾಗಿ ನಡೆದ 69ನೇ ವರ್ಷದ ಪ್ರಸನ್ನ ಗಣಪತಿ ಮೆರವಣಿಗೆ | ಚಂದ್ರವಳ್ಳಿಯಲ್ಲಿ ಗಣಪತಿ ವಿಸರ್ಜನೆ
    7 hours ago
    ವಿಕಲಚೇತನರ 14 ಫಲಾನುಭವಿ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
    8 hours ago
    Power Cut chitradurga News (3)
    ಚಿತ್ರದುರ್ಗ, ಹೊಳಲ್ಕೆರೆ ಸೇರಿ ಹಲವು ಗ್ರಾಮಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ
    9 hours ago
    ಅರ್ಜಿ ಅಹ್ವಾನ
    ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
    9 hours ago
    11th National Ayurveda Day Celebration
    ದೀರ್ಘಕಾಲೀನ ರೋಗಗಳ ಚಿಕಿತ್ಸೆಯಲ್ಲಿ ಆಯುರ್ವೇದ ಪರಿಣಾಮಕಾರಿ | ಡಾ.ಚಂದ್ರಕಾಂತ್
    9 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    1 month ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    1 month ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    3 months ago
  • ತಾಲೂಕು
    ತಾಲೂಕುShow More
    A tribute was paid to Shantaveera Shree on behalf of the Kadugolla Association
    ಕಾಡುಗೊಲ್ಲರಿಗಿದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ | ಶ್ರೀ ಶಾಂತವೀರ ಸ್ವಾಮೀಜಿ
    2 weeks ago
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    3 weeks ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    1 month ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    2 months ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
    3 weeks ago
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    3 weeks ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    3 weeks ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    3 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    4 months ago
  • Dina Bhavishya
    Dina BhavishyaShow More
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 25 | ಹಠಾತ್ ಆರ್ಥಿಕ ಲಾಭ, ಅರೋಗ್ಯದಲ್ಲಿ ಜಾಗೃತಿ ವಹಿಸಿ
    20 hours ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 24 | ಆದಾಯಕ್ಕಿಂತ ಖರ್ಚು ಹೆಚ್ಚು, ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ
    2 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 23 | ಹಠಾತ್ ಆರ್ಥಿಕ ಲಾಭ, ಶ್ರಮಕ್ಕೆ ತಕ್ಕ ಪ್ರತಿಫಲ
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 22 | ಉದ್ಯೋಗದಲ್ಲಿ ಬಡ್ತಿ, ದೂರದ ಪ್ರಯಾಣ ಬೇಡ
    4 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 21 | ಮನೆಯಲ್ಲಿ ಶುಭ ಕಾರ್ಯಗಳು, ಬಾಲ್ಯದ ಗೆಳೆಯರ ಭೇಟಿ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 25 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್ ಎಷ್ಟಿದೆ?
    11 hours ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 24 | ಹತ್ತಿ ರೇಟ್
    2 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 23 | ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 22 | ಹತ್ತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 21 | ರಾಗಿ, ಶೇಂಗಾ ರೇಟ್ ಎಷ್ಟಿದೆ?
    4 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    3 weeks ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    3 weeks ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    4 weeks ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    1 month ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    2 months ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    6 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    7 months ago
  • ಹೊಸದುರ್ಗ
    ಹೊಸದುರ್ಗShow More
    A tribute was paid to Shantaveera Shree on behalf of the Kadugolla Association
    ಕಾಡುಗೊಲ್ಲರಿಗಿದೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ | ಶ್ರೀ ಶಾಂತವೀರ ಸ್ವಾಮೀಜಿ
    2 weeks ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    1 month ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    2 months ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    2 months ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    3 months ago
  • Life Style
    Life StyleShow More
    Herbal tea
    ತೂಕ ಇಳಿಸಿಕೊಳ್ಳಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಗಿಡಮೂಲಿಕೆ ಚಹಾ ಕುಡಿಯಿರಿ
    19 hours ago
    Smoke from benzoin incense
    ಸಾಂಬ್ರಾಣಿ ಧೂಪದ ಹೊಗೆ ಕೂದಲಿಗೆ ಒಳ್ಳೆಯದೇ? ತಿಳಿಯಿರಿ 
    20 hours ago
    clean and clear skin
    ಕ್ಲೀನ್ ಆ್ಯಂಡ್ ಕ್ಲಿಯರ್ ಸ್ಕಿನ್ ಬೇಕಾ? ಹಾಗಾದ್ರೆ ಮನೆಯಲ್ಲಿಯೇ ತಯಾರಿಸಬಹುದಾದ ಈ ನೈಸರ್ಗಿಕ ಫೇಸ್‌ವಾಶ್ ಬಳಸಿ
    2 days ago
    eat sweets before meals
    ಊಟಕ್ಕೆ ಮೊದಲು ಸಿಹಿತಿಂಡಿಗಳನ್ನು ತಿನ್ನಬೇಕೇ? ಅಥವಾ ಊಟದ ನಂತರ ತಿನ್ನಬೇಕೆ? ತಿಳಿಯಿರಿ
    2 days ago
    blackheads
    ಬ್ಲ್ಯಾಕ್ ಹೆಡ್ಸ್ ತೆಗೆದುಹಾಕಲು ಈ ಮನೆಮದ್ದುಗಳನ್ನು ಬಳಸಿ
    3 days ago
Reading: ಭದ್ರಾ ನೀರು ಹರಿಸಿ ರೈತರ ಬದುಕು ಸುಭದ್ರ ಮಾಡಿದ್ದೇವೆ | ಸಿಎಂ ಡಿ.ಕೆ.ಶಿವಕುಮಾರ್
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಮುಖ್ಯ ಸುದ್ದಿ

ಭದ್ರಾ ನೀರು ಹರಿಸಿ ರೈತರ ಬದುಕು ಸುಭದ್ರ ಮಾಡಿದ್ದೇವೆ | ಸಿಎಂ ಡಿ.ಕೆ.ಶಿವಕುಮಾರ್

News Desk Chitradurga News
Last updated: 24 September 2026 21:06
News Desk Chitradurga News
1 day ago
Share
Inauguration of the Farmers' Felicitation Ceremony
ರೈತರ ಅಭಿನಂದನಾ ಸಮಾರಂಭ ಉದ್ಘಾಟನೆ
SHARE

CHITRADURGA NEWS | 24 SEPTEMBER 2026

ಚಿತ್ರದುರ್ಗ: ಭದ್ರಾ ನದಿ ನೀರು ಹರಿಸಿ ನಿಮ್ಮ ಬದುಕು ಸುಭದ್ರ ಮಾಡಿದ್ದೇವೆ. ಚಿತ್ರದುರ್ಗ ಮಡಿಲಿಗೆ ಭದ್ರಾ ನದಿ ಹರಿಸಿದ್ದು, 60 ವರ್ಷಗಳ ಕನಸು ನನಸಾಗುತ್ತಿದೆ ಎಂದು ಸಿ.ಎಂ.ಡಿ.ಕೆ.ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 24 | ಹತ್ತಿ ರೇಟ್

ನಗರದ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ಗುರುವಾರ ನಡೆದ ರೈತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು,

ಈ ಕೈ ಅಧಿಕಾರಕ್ಕೆ ಬಂದಿರುವ ಕಾರಣ ನಾವು ರಾಜ್ಯಕ್ಕೆ ಐದು ಗ್ಯಾರಂಟಿ ನೀಡಿದ್ದು, ಇವುಗಳ ಜತೆಗೆ ಭೂಮಿ ಹಾಗೂ ನೀರಿನ ಗ್ಯಾರಂಟಿ ನೀಡುತ್ತಿದ್ದೇವೆ. ಭೀಕರ ಬರಗಾಲ ಹಾಗೂ ಕಸ್ತೂರಿ ರಂಗನ್ ವಿಚಾರದಲ್ಲಿ ಬಿಜೆಪಿಯವರಿಗೆ ಆಸಕ್ತಿ ಇಲ್ಲ. ಈ ವಿಚಾರದಲ್ಲಿ ಚರ್ಚೆ ಮಾಡಲು ಅವರಿಗೆ ಬದ್ಧತೆ ಇಲ್ಲ. ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲವಾದರೂ ಅವರಿಂದ ರಾಜೀನಾಮೆ ಪಡೆದೆವು. ಆದರೂ ನೀಚ ರಾಜಕಾರಣಕ್ಕಾಗಿ ಅವರು ಯಾತ್ರೆ ಮಾಡಿದ್ದಾರೆ ಎಂದು ಕಿಡಿಕಾರಿದರು. 

ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಚರಿತ್ರೆ ಇರುವ ಪಕ್ಷ. ಈ ಸರ್ಕಾರ ಯಾವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ಜನ ನೂರು ದಿನಗಳ ಆಡಳಿತದಲ್ಲಿ ಗಮನಿಸಿದ್ದಾರೆ. ಸಂಘರ್ಷದಿಂದ ಪ್ರಯೋಜನವಿಲ್ಲ ಎಂದು ನಾನು ಹೃದಯ ಶ್ರೀಮಂತಿಕೆಯಿಂದ ವಿರೋಧ ಪಕ್ಷದವರನ್ನು ಒಟ್ಟಾಗಿ ಕರೆದೊಯ್ಯಲು ಮುಂದಾದೆ. ಸಂಘರ್ಷಕ್ಕೆ ಈ ಡಿ ಕೆ ಶಿವಕುಮಾರ್ ಆಗಲಿ, ಕಾಂಗ್ರೆಸ್ ಪಕ್ಷವಾಗಲಿ ಹೆದರುವುದಿಲ್ಲ. ರೈತರ ಬೆವರಿನಿಂದ ನಾವು ಬದುಕುತ್ತಿದ್ದೇವೆ. ರೈತರ ಶ್ರಮಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: SRS | 1,181 ವಿದ್ಯಾರ್ಥಿಗಳ ಸಾಮೂಹಿಕ ಶ್ಲೋಕ ಪಠಣಕ್ಕೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಕೇಂದ್ರದಿಂದ 1 ರೂ. ಅನುದಾನ ತರಲಿಲ್ಲ: 

ದೇಶಕ್ಕೆ ಪ್ರಧಾನಮಂತ್ರಿಗಳು ಪ್ರತಿನಿಧಿ, ರಾಜ್ಯಕ್ಕೆ ಮುಖ್ಯಮಂತ್ರಿ ಪ್ರತಿನಿಧಿ, ಶಾಸಕರು ಕ್ಷೇತ್ರಗಳಿಗೆ ಪ್ರತಿನಿಧಿ, ರೈತರು ವಿಶ್ವಕ್ಕೆ ಪ್ರತಿನಿಧಿ. ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಹಣಕಾಸು ಸಚಿವರು, ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಗೋವಿಂದ ಕಾರಜೋಳ ಅವರು ನೀರಾವರಿ ಸಚಿವರಾಗಿದ್ದರು. ಆಗ ಕೇಂದ್ರ ಹಾಗೂ ರಾಜ್ಯ ಬಜೆಟ್ ನಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 5400 ಕೋಟಿ ಘೋಷಣೆ ಮಾಡಿದರು. 

ಬೊಮ್ಮಾಯಿ ಅವರೇ, ಗೋವಿಂದ ಕಾರಜೋಳ ಅವರೇ, ಅಶೋಕಣ್ಣ, ವಿಜಯೇಂದ್ರಣ್ಣ ನಿಮ್ಮಿಂದ ಒಂದೇ ಒಂದು ರೂಪಾಯಿ ಅನುದಾನ ಕೊಡಿಸಲು ಆಗಿಲ್ಲ. ಬಿಜೆಪಿ ನಾಯಕರು ಜನಪ್ರತಿನಿಧಿ ಎಂದು ಹೇಳಿಕೊಳ್ಳುವ ಹಕ್ಕಿಲ್ಲ. ನುಡಿದಂತೆ ನಡೆಯಲು ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಜನರ ಸೇವೆ ಮಾಡುತ್ತಿದೆ. ನಿಜಲಿಂಗಪ್ಪ ಅವರು ಕಂಡ ಭದ್ರಾ ಕನಸನ್ನು ಕೃಷ್ಣ ಅವರು ಚಾಲನೆ ನೀಡಿದರು. ನಿಮ್ಮ ಕೆರೆಗಳನ್ನು ತುಂಬಿಸಲು ಡಿ ಕೆ ಶಿವಕುಮಾರ್ ಸಂಕಲ್ಪ ಮಾಡಿದ್ದಾನೆ. ವೀರೇಂದ್ರ ಪಪ್ಪಿ ಅವರು ತಮ್ಮ ಕ್ಷೇತ್ರದ ಕೆರೆಗಳ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ನಾನು ಅವರಿಗೆ ಹೇಳಿದೆ, ನಾನು ಈಗಲೂ ಮುಖ್ಯಮಂತ್ರಿ, ಮುಂದೆಯೂ ಮುಖ್ಯಮಂತ್ರಿಯಾಗಿರುತ್ತೇನೆ ಚಿಂತಿಸಬೇಡ ಎಂದು ಹೇಳಿರುವೆ. ಗೋವಿಂದಪ್ಪನವರ ಭಾವನೆ, ಗೋಪಾಲಕೃಷ್ಣ ಅವರು ಬೇಡಿಕೆಗಳ ಬಗ್ಗೆ ನಮಗೆ ಅರಿವಿದೆ ಎಂದು ಭರವಸೆ ನೀಡಿದರು. 

ಇದನ್ನೂ ಓದಿ: ಶಿಕ್ಷಣ, ನೀರಾವರಿ ಕ್ಷೇತ್ರಕ್ಕೆ ಶಿವಕುಮಾರ ಶ್ರೀಗಳ ಕೊಡುಗೆ ಅಪಾರ | ಗಣ್ಯರ ಶ್ಲಾಘನೆ

ಭದ್ರಾ ಯೋಜನೆ ಒಂದು ಭಾಗಕ್ಕೆ ಸುಧಾಕರ್ ಹೆಸರಿಡಲು ಮನವಿ ಇದೆ: 

ನನ್ನ ಆತ್ಮೀಯ ಮಿತ್ರ ಡಿ ಸುಧಾಕರ್ ನಮ್ಮ ಜತೆಗಿಲ್ಲ. ಅವರ ಸ್ಥಾನವನ್ನು ರಘುಮೂರ್ತಿ ಅವರು ವಹಿಸಿಕೊಂಡಿದ್ದಾರೆ. ನಾವು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಸುಧಾಕರ್ ಅವರ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯ. ಆ ಮೂಲಕ ನಿಮ್ಮ ಋಣ ತೀರಿಸುತ್ತೇವೆ. ಸುಧಾಕರ್ ಇಂದು ಇದ್ದಿದ್ದರೆ ನನಗೆ ದೊಡ್ಡ ಬಲವಿರುತ್ತಿತ್ತು. 

ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ಸರಿ, ನೀನು ಮುಖ್ಯಮಂತ್ರಿಯಾಗಬೇಕು ಎಂದು ನನಗೆ ಹೇಳುತ್ತಿದ್ದರು. ಭದ್ರಾ ಯೋಜನೆಯ ಒಂದು ಭಾಗಕ್ಕೆ ಅವರ ಹೆಸರಿಡಲು ನಮ್ಮಮುಂದೆ ಬೇಡಿಕೆ ಇದ್ದು, ಇಂದು ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ರೈತರ ಪರವಾಗಿ ನೂರು ದಿನಗಳಲ್ಲಿ ನಾಲ್ಕೈದು ಯೋಜನೆ ಘೋಷಣೆ ಮಾಡಿರುವೆ. ಸಣ್ಣ ರೈತರ ಬದುಕಿಗಾಗಿ ತೇಗದ ಸಿರಿ ಯೋಜನೆ, ಬಡ ರೈತರಿಗೆ ಹೊಲ ಉಳುಮೆ ಮಾಡಿಕೊಡುವ ಯೋಜನೆ, ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ ಘೋಷಣೆ ಮಾಡಲಾಗಿದೆ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸದೇ ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿದರು. 

ಟಿ.ಬಿ. ಜಯಚಂದ್ರ ಅವರು ಎಸ್. ಎಂ. ಕೃಷ್ಣ ಅವರ ಕಾಲದಲ್ಲಿ ಸಚಿವರಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಯನ್ನು ಅವರ ಗಮನಕ್ಕೆ ತಂದರು. ಅನೇಕ ನಾಯಕರು ಸೇರಿ 60 ವರ್ಷದ ಯೋಜನೆ‌ ಕನಸು ನನಸು ಮಾಡುವಂತೆ ಮಾಡಿದ್ದಾರೆ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ, ರೈತನೇ ಈಶ್ವರ. ಅನ್ನದಾತ ಎನ್ನುವ ‌ಪದವಿ ಸುಲಭವಾಗಿ ದೊರೆಯುವುದಿಲ್ಲ.‌ ಅನ್ನ ನೀಡುವ ಕೈಗಳ ಭವಿಷ್ಯ ಭದ್ರ ಮಾಡುವುದೇ ನಮ್ಮ ಸಂಕಲ್ಪ ಎಂದರು.

ಇದನ್ನೂ ಓದಿ: ಚಿತ್ರದುರ್ಗದ ನೂತನ ಎಸ್ಪಿಯಾಗಿ ಕುಶಲ್ ಚೌಕ್ಸೆ ನೇಮಕ

ರೈತ ನಕ್ಕರೇ ಇಡೀ ನಾಡು ನಗುತ್ತದೆ. ರೈತ ದೇಶದ ಬೆನ್ನೆಲುಬು ಎಂದು ಬಾಯಲ್ಲಿ ಹೇಳದೇ ಕಾರ್ಯ ರೂಪಕ್ಕೆ ತರಬೇಕು. ಈ ರಾಜ್ಯದ ಪಾಲಿನ ಒಂದೇ ಒಂದು ಹನಿ ನೀರೂ ಸಹ ಬೇರೆಯವರ ಪಾಲಾಗದಂತೆ ನಾವು ನೋಡಿಕೊಳ್ಳುತ್ತೇವೆ. ನದಿ ಜೋಡಣೆ, ತುಂಗಾಭದ್ರಾ, ಕೃಷ್ಣಾ ನೀರು, ಮಹದಾಯಿ ಹೀಗೆ ಎಲ್ಲಾ ಯೋಜನೆಗಳು ನಮ್ಮ ರೈತರ ಉದ್ದಾರಕ್ಕೆ ಬಳಸಿಕೊಳ್ಳುತ್ತೇವೆ ಎಂದರು‌.

ರೈತರು ಬೀಜ ಬಿತ್ತಿ ಬೆಳೆ ಮಾತ್ರವಲ್ಲ, ಭವಿಷ್ಯ ಬೆಳೆಯುತ್ತಿದ್ದಾರೆ : 

ಬಂಗಾರದ ರಥ ಏರಿ ನಮ್ಮನ್ನು ಕರೆತರಬಹುದು. ಬಂಗಾರದ ರಥಕ್ಕಿಂತ ರೈತರ ಎತ್ತಿನ ಬಂಡಿ ನಮ್ಮ ಪಾಲಿನ ನಿಜವಾದ ರಥ ಎಂದು ಭಾವಿಸಿದ್ದೇವೆ. ಬೀಜ ಬಿತ್ತುವ ಕೈಗಳಲ್ಲಿ ಬೆಳೆ ಮಾತ್ರವಲ್ಲ, ನಮ್ಮ ಭವಿಷ್ಯವನ್ನೇ ಬೆಳೆಸುತ್ತಿದ್ದೀರಿ. ರೈತರ ಪಂಪ್ ಸೆಟ್ ಗೆ ನೀಡುವ ಉಚಿತ ವಿದ್ಯುತ್ ಗೆ 24 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದು ಬಿಜೆಪಿ ಕೊಟ್ಟ ಯೋಜನೆಯೇ? 

ಉಳುವವನಿಗೆ ಭೂಮಿ, ಅರಣ್ಯ ಹಕ್ಕು ಕೊಟ್ಟಿದ್ದು ಬಿಜೆಪಿನಾ? ನೀವು ಬಿಜೆಪಿಯವರಿಗೆ ತಕ್ಕ ಉತ್ತರ ನೀಡಬೇಕು. ಯಡಿಯೂರಪ್ಪ ಅವರ ಕಾಲದಲ್ಲಿ ಸೈಕಲ್, ಸೀರೆ ಕೊಟ್ಟಿದ್ದು ಬಿಟ್ಟರೆ ಬೇರೆ ಯಾವುದಾದರೂ ಕಾರ್ಯಕ್ರಮ ನೀಡಿದ್ದಾರಾ? ನಾವು ರೈತರ ಬದುಕಿನಲ್ಲಿ ಬದಲಾವಣೆಗೆ ಯೋಜನೆ ತಂದಿದ್ದೇವೆ. ಎಲ್ಲಾ ವರ್ಗದ ಜನರ ಬದುಕಿಗೆ ನ್ಯಾಯ ಒದಗಿಸಿದ್ದೇವೆ ಎಂದು ತಿಳಿಸಿದರು.

ದೇಶ ಹಾಗೂ ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದು ನೀವು ನಮಗೆ ಬೆಂಬಲ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ಸುಧಾಕರ್ ಅವರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಅವರ ಚಿಹ್ನೆಯಡಿ ಯಾರು ಸ್ಪರ್ಧಿಸುತ್ತಾರೋ ಅವರಿಗೆ ನೀವು ಬೆಂಬಲ ನೀಡಿ. ನಾವು ರೈತರ ಜೊತೆ ನಿಲ್ಲಬೇಕು ಎಂದು ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಚಿತ್ರದುರ್ಗದ ಮದಕರಿ ನಾಯಕ, ಓಬವ್ವನ ವೀರ ಭೂಮಿಯಲ್ಲಿ ಅನೇಕ ಮಠಮಾನ್ಯಗಳು ಸೇರಿ ಸೇವೆ ಸಲ್ಲಿಸುತ್ತಿವೆ. ನಮ್ಮ ಹಿಂದೆ ಗುರುಗಳು, ಅವರ ಹಿಂದೆ ನಿಮ್ಮ ಬದುಕು ಹಸನಾಗಿಸುವ ಗುರಿ ಇದೆ ಎಂದು ಹೇಳಿದರು.

ಇದನ್ನೂ ಓದಿ: ನಾಗಪುರದ ದೀಕ್ಷಾಭೂಮಿ ಯಾತ್ರೆಗೆ ಅರ್ಜಿ ಆಹ್ವಾನ

ಸೈನಿಕ, ಕಾರ್ಮಿಕ, ಶಿಕ್ಷಕ, ಕೃಷಿಕ ಈ ದೇಶದ ಆಧಾರ ಸ್ತಂಭಗಳು. ದೀಪವನ್ನು ಎಲ್ಲಾ ಕೃಷಿಕರು ಸೇರಿ ಬೆಳಗಿದರು. ಈ ದೀಪ ಕತ್ತಲನ್ನು ಕರಗಿಸುತ್ತದೆ. ಕಾಂಗ್ರೆಸ್ ಸರ್ಕಾರ ಜನರ ಕಷ್ಟಗಳನ್ನು ಕರಗಿಸುತ್ತದೆ ಎಂದರು.

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:Bhadra waterChitradurgaChitradurga newsCM DK Shivukumarಚಿತ್ರದುರ್ಗಚಿತ್ರದುರ್ಗ ನ್ಯೂಸ್ಭದ್ರಾ ನೀರುಸಿಎಂ ಡಿಕೆ ಶಿವುಕುಮಾರ್
Share This Article
Facebook Email Print
Previous Article ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 24 | ಹತ್ತಿ ರೇಟ್
Next Article Meeting of political party representatives regarding the South-East Graduates' Constituency election ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ | ಚಿತ್ರದುರ್ಗ ಜಿಲ್ಲೆಯಲ್ಲಿ 41,358 ಮತದಾರರು | ಅ.23ರಂದು ಮತದಾನ 
Leave a Comment

Leave a Reply Cancel reply

Your email address will not be published. Required fields are marked *

Prasanna Ganapathi Procession
ಅದ್ದೂರಿಯಾಗಿ ನಡೆದ 69ನೇ ವರ್ಷದ ಪ್ರಸನ್ನ ಗಣಪತಿ ಮೆರವಣಿಗೆ | ಚಂದ್ರವಳ್ಳಿಯಲ್ಲಿ ಗಣಪತಿ ವಿಸರ್ಜನೆ
ಮುಖ್ಯ ಸುದ್ದಿ
ವಿಕಲಚೇತನರ 14 ಫಲಾನುಭವಿ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
Power Cut chitradurga News (3)
ಚಿತ್ರದುರ್ಗ, ಹೊಳಲ್ಕೆರೆ ಸೇರಿ ಹಲವು ಗ್ರಾಮಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ಮುಖ್ಯ ಸುದ್ದಿ
ಅರ್ಜಿ ಅಹ್ವಾನ
ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Welcome Back!

Sign in to your account

Username or Email Address
Password

Lost your password?

Not a member? Sign Up