ಮುಖ್ಯ ಸುದ್ದಿ
ವಾಣಿವಿಲಾಸ ಸಾಗರ ಜಲಾಶಯ ಇಂದಿನ ಮಟ್ಟ 129.90 ಅಡಿ
CHITRADURGA NEWS | 09 January 2025
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಇನ್ನು ಕಾಲು ಅಡಿ ಭಾಗದಷ್ಟು ಬರಬೇಕಿದೆ. ಈಗ ಭದ್ರಾ ಜಲಾಶಯದಿಂದ ಪ್ರತಿ ದಿನ 693 ಕ್ಯೂಸೆಕ್ ನೀರು ಮಾತ್ರ ಹರಿದು ಬರುತ್ತಿದೆ.
ಜನವರಿ 9 ಗುರುವಾರ ಬೆಳಗ್ಗೆ ವೇಳೆಗೆ 693 ಕ್ಯೂಸೆಕ್ ನೀರು ಹರಿದು ಬಂದಿದೆ. ವಾಣಿವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ 129.90 ಅಡಿ ತಲುಪಿದೆ.
ಕ್ಲಿಕ್ ಮಾಡಿ ಓದಿ: ಬಸ್ ಪ್ರಯಾಣ ದರ ಏರಿಕೆ | ಹಿಂಪಡೆಯುವಂತೆ ಜೆಡಿಎಸ್ ಆಗ್ರಹ
135 ಅಡಿ ಎತ್ತರ ಇರುವ ಮಾರಿಕಣಿವೆ ಡ್ಯಾಂ 131 ಅಡಿ ದಾಟುವ ಮೊದಲೇ ನೀರು ಬಂದ ತಕ್ಷಣ ಕೋಡಿ ಬೀಳಲಿದೆ.
30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯಕ್ಕೆ ಈವರೆಗೆ 30.33 ಟಿಎಂಸಿ ಅಡಿ ನೀರು ಬಂದಿದೆ.
ಇನ್ನೂ ಅರ್ಧ ಅಡಿ ನೀರು ಬರುವುದು ಬಾಕಿಯಿದೆ.