Connect with us

ಗ್ರಾಮ ಆಡಳಿತಾಧಿಕಾರಿ ಹುದ್ದೆ | 1:1 ಆಯ್ಕೆಪಟ್ಟಿ ಪ್ರಕಟ | ಆಕ್ಷೇಪಣೆಗೆ ಅವಕಾಶ

DC Office chitradurga

ಮುಖ್ಯ ಸುದ್ದಿ

ಗ್ರಾಮ ಆಡಳಿತಾಧಿಕಾರಿ ಹುದ್ದೆ | 1:1 ಆಯ್ಕೆಪಟ್ಟಿ ಪ್ರಕಟ | ಆಕ್ಷೇಪಣೆಗೆ ಅವಕಾಶ

CHITRADURGA NEWS | 16 JANUARY 2025

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 32 ಅಡಳಿತ ಅಧಿಕಾರಿಗಳ ಹುದ್ದೆಗಳನ್ನು ನೇಮಕಾತಿ ಮಾಡುವ ಕುರಿತಂತೆ 1:1 ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಜಿಲ್ಲಾಡಳಿತದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.

ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಉಲ್ಲೇಖ (1) ರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ಅರ್ಹರಾದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಉಲ್ಲೇಖ (2) ರಲ್ಲಿ ಜಿಲ್ಲಾವಾರು ಪ್ರಕಟಿಸಿರುತ್ತಾರೆ.

ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಮತ್ತೆ ಜಿಗಿತ

ಉಲ್ಲೇಖ (3)ರಲ್ಲಿ ಸರ್ಕಾರದ ಪತ್ರದಲ್ಲಿ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ)ನಿಯಮಗಳು 2021ರಂತೆ ಚಿತ್ರದುರ್ಗ ಜಿಲ್ಲೆಗೆ ಅರ್ಹತೆ ಪಡೆದಿರುವ ಒಟ್ಟು 1158 ಅಭ್ಯರ್ಥಿಗಳ ಪೈಕಿ ಚಿತ್ರದುರ್ಗ ಜಿಲ್ಲಾ ಕಂದಾಯ ಘಟಕಕ್ಕೆ ಈಗಾಗಲೇ ಅನುಮೋದನೆಯಾಗಿರುವ 32 ಹುದ್ದೆಗಳಿಗೆ ಪ್ರಾಧಿಕಾರ ನೀಡಿರುವ ಮೆರಿಟ್ ಪಟ್ಟಿಯಲ್ಲಿ 1:3 ಅನುಪಾತದಂತೆ ದಾಖಲಾತಿ ಪರಿಶೀಲನೆಗೆ ಆಹ್ವಾನಿಸಿ, ದಾಖಲಾತಿ ಪರಿಶೀಲಿಸಿ 1:1 ಅನುಪಾತದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಆಕ್ಷೇಪಣೆಗಳಿಗೆ ಅವಕಾಶ ನೀಡಿ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಸಿಂಧುತ್ವ ಪ್ರಮಾಣ ಪತ್ರ ಮತ್ತು ಪೆÇಲೀಸ್ ವರದಿ, ಪಿಯುಸಿ/12ನೇ ತರಗತಿ ಅಂಕಪಟ್ಟಿಯ ನೈಜತೆಯನ್ನು ಪರಿಶೀಲಿಸಿಕೊಂಡು ನೇಮಕಾತಿ ಆದೇಶ ನೀಡಲು ನಿರ್ದೇಶನ ನೀಡಿರುತ್ತಾರೆ.

ಇದನ್ನೂ ಓದಿ: ಜ.22 ರಿಂದ 24 ರವರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಜಿಲ್ಲಾ ಪ್ರವಾಸ 

ಆದರಂತೆ ಚಿತ್ರದುರ್ಗ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 32 ಗ್ರಾಮ ಆಡಳಿತ ಅಧಿಕಾರಿಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಗಾಗಿ ಆಯ್ಕೆ ಪಟ್ಟಿಯನ್ನು ಸರ್ಕಾರ ನಿಗಧಿಪಡಿಸಿದ ಮೀಸಲಾತಿ ರೋಸ್ಟರ್ ನಿಯಮದ ಪ್ರಕಾರ ಹಾಗೂ ಉಲ್ಲೇಖ(3) ರಲ್ಲಿನ ಸರ್ಕಾರದ ಸುತ್ತೋಲೆಯಲ್ಲಿನ ನಿರ್ದೇಶನದಂತೆ 32 ಹುದ್ದೆಗಳಿಗೆ 1:3 ಅನುಪಾತದಲ್ಲಿ 96 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸ ಬೇಕಾಗಿದ್ದು, ಪ್ರವರ್ಗ-2ಎ ಮೀಸಲಾತಿಯ ಅಂಗವಿಕಲ ಅಭ್ಯರ್ಥಿಗಳಲ್ಲಿ ಕೇವಲ-2 ಅಭ್ಯರ್ಥಿಗಳು ಮಾತ್ರ ಲಭ್ಯವಿದ್ದು ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಅಂಗವಿಕಲ ಅಭ್ಯರ್ಥಿ ಇಲ್ಲದ ಕಾರಣ ಒಟ್ಟು 92 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ.

ಈ ಪೈಕಿ ಪ.ಜಾತಿ- ಅಂಗವಿಕಲ ಮೀಸಲಾತಿಯ ಅಭ್ಯರ್ಥಿಗಳು ಇಲ್ಲದೇ ಇರುವುದರಿಂದ ಸದರಿ ಹುದ್ದೆಯನ್ನು ಬ್ಯಾಕ್ ಲಾಗ್ ಎಂದು ಪರಿಗಣಿಸಿದೆ.
ಮುಂದುವರೆದು ದಾಖಲಾತಿ ಪರಿಶೀಲನೆಗಾಗಿ 92 ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು ಗೈರು ಹಾಜರಾಗಿದ್ದು ಹಾಜರಾದ 86 ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ.

ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ ಸಿರಿಗೆರೆ ಶ್ರೀ ಅಂಗಳಕ್ಕೆ | ದಶಕಗಳಿಂದ ಕುಂಟುತ್ತಾ ಸಾಗಿರುವ ಯೋಜನೆಗೆ ಹೊಸ ಬೆಳಕು

86 ಅಭ್ಯರ್ಥಿಗಳ ಪೈಕಿ CET NO VAS788716 ಪ್ರಿಯದರ್ಶಿನಿ, ಜಿ.ಎಂ. ಇವರು ಪರಿಶಿಷ್ಟ ಜಾತಿ (ಮಹಿಳಾ-2) ಕೋಟದಾಡಿ ಆಯ್ಕೆಯಾಗಿದ್ದು, ದಿನಾಂಕ:10.01.2025 ರಂದು ಖುದ್ದು ಹಾಜರಾಗಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ರದ್ದುಗೊಳಿಸಿ ಮೂಲ ದಾಖಲಾತಿ ಹಿಂದಿರುಗಿಸುವಂತೆ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಇವರ ಆಯ್ಕೆಯನ್ನು ರದ್ದುಪಡಿಸಿದ್ದು. ಪರಿಶೀಲನೆಯಲ್ಲಿ ಪೂರಕ/ಸಮರ್ಪಕ ದಾಖಲಾತಿಗಳನ್ನು ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ 1:1 ರ ಅನುಪಾತದಲ್ಲಿ 31 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹಾಗೂ 54 ಅಭ್ಯರ್ಥಿಗಳ ಕಾಯ್ದಿರಿಸಿದ ಆಯ್ಕೆ ಪಟ್ಟಿಯೊಂದಿಗೆ ಗೈರುಹಾಜರಿ/ ತಿರಸ್ಕøತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಅಭ್ಯರ್ಥಿಗಳು ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಾಯ್ದಿರಿಸಿದ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ದಿನಾಂಕ: 23.01.2025ರೊಳಗಾಗಿ ಈ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಮೂನೆಯಲ್ಲಿ ಆಕ್ಷೇಪಣೆಗಳನ್ನು ಪುಷೀಕರಿಸುವ ದಾಖಲಾತಿಗಳೊಂದಿಗೆ ಈ ಕಛೇರಿಗೆ ಮುದ್ರಾಂ ಸಲ್ಲಿಸಲು ಸೂಚಿಸಿದೆ.

ಇದನ್ನೂ ಓದಿ: ಅಫಿಶಿಯಲ್ ಪೊಲೀಸ್ ಕ್ರಿಕೆಟ್ ಕಪ್ | ಬೆಸ್ಕಾಂ ತಂಡ ಫಸ್ಟ್, ಪೊಲೀಸ್ ತಂಡ ದ್ವಿತೀಯ 

ತಪ್ಪಿದಲ್ಲಿ ನಿಮ್ಮ ಆಕ್ಷೇಪಣೆಗಳು ಏನು ಇರುವುದಿಲ್ಲವೆಂದು ಭಾವಿಸಿ ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಾಯ್ದಿರಿಸಿದ ಪಟ್ಟಿಯನ್ನೇ ಅಂತಿಮಗೊಳಿಸಲಾಗುವುದು ಎಂದು ತಿಳಿಯಪಡಿಸಿದೆ.

ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಇದ್ದ ಮಾತ್ರಕ್ಕೆ ಅಭ್ಯರ್ಥಿಗಳಿಗೆ ನೇಮಕಾತಿಯ ಬಗ್ಗೆ, ಯಾವುದೇ ಹಕ್ಕು ಸಾಧಿಸಲು ಬರುವುದಿಲ್ಲ. ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಗಳ ದಾಖಲೆಗಳಲ್ಲಿ ಲೋಪದೋಷಗಳೇನಾದರೂ ಕಂಡುಬಂದಲ್ಲಿ ಸದರಿ ಅಭ್ಯರ್ಥಿಗಳನ್ನು ಸಹ ಆಯ್ಕೆ ಪ್ರಕ್ರಿಯೆಯಿಂದ ಕೈ ಬಿಡಲಾಗುವುದು ಎಂಬ ಅಂಶವನ್ನು ತಿಳಿಯಪಡಿಸಿದೆ.

ಇದನ್ನೂ ಓದಿ: ಸೇಂದಿ‌ ಮಾರಾಟ | ಇಬ್ಬರ ಬಂಧನ

ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಕಾಯ್ದಿರಿಸಿದ ಪಟ್ಟಿ ಮತ್ತು ಗೈರುಹಾಜರಿ/ ತಿರಸ್ಕೃತ ಅಭ್ಯರ್ಥಿಗಳ ಪಟ್ಟಿಯನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಛೇರಿ ಅಧಿಕೃತ ವೆಬ್ ಸೈಟ್ https://chitradurga.nic.in.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version