ಮುಖ್ಯ ಸುದ್ದಿ
ಅಫಿಶಿಯಲ್ ಪೊಲೀಸ್ ಕ್ರಿಕೆಟ್ ಕಪ್ | ಬೆಸ್ಕಾಂ ತಂಡ ಫಸ್ಟ್, ಪೊಲೀಸ್ ತಂಡ ದ್ವಿತೀಯ
CHITRADURGA NEWS | 15 JANUARY 2025
ಚಿತ್ರದುರ್ಗ: ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಅಫಿಶಿಯಲ್ ಪೊಲೀಸ್ ಕ್ರಿಕೆಟ್ ಕಪ್ ನಲ್ಲಿ ಬೆಸ್ಕಾಂ ಇಲಾಖೆ ತಂಡ ಪ್ರಥಮ, ಪೊಲೀಸ್ ಇಲಾಖೆ ತಂಡ ದ್ವಿತೀಯ ಸ್ಥಾನ ಪಡೆದಿದೆ.
Also Read: ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಮತ್ತೆ ಜಿಗಿತ
ದಿನಾಂಕ ಜ.11 ರಿಂದ 13ರವರೆಗೆ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು, ಇದರಲ್ಲಿ ಜಿಲ್ಲೆಯ 14 ಇಲಾಖೆ ತಂಡಗಳು ಭಾಗವಹಿಸಿದ್ದವು.
ಪೊಲೀಸ್ ತಂಡ ಹಾಗೂ ಬೆಸ್ಕಾಂ ತಂಡದ ನಡುವೆ ಫೈನಲ್ ಪಂದ್ಯ ನಡೆದಿದ್ದು, ಇದರಲ್ಲಿ ಬೆಸ್ಕಾಂ ತಂಡ ಜಯಗಳಿಸಿದೆ.
ಬೆಸ್ಕಾಂ ತಂಡ ಅಫಿಶಿಯಲ್ ಪೊಲೀಸ್ ಕ್ರಿಕೆಟ್ ಕಪ್ – 2025 ರಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದೆ.
ಆಲ್ ರೌಂಡರ್ ಆಗಿ ಅರಣ್ಯ ಇಲಾಖೆ ತಂಡದ ರಾಜೇಶ್, ಬೆಸ್ಟ್ ಬ್ಯಾಟ್ಸ್ಮನ್ ಆಗಿ ಪೊಲೀಸ್ ಇಲಾಖೆಯ ಅಂಜನಪ್ಪ, ಬೆಸ್ಟ್ ಬೌಲರ್ ಆಗಿ ಪೊಲೀಸ್ ಇಲಾಖೆಯ ನಿರಂಜನ್ ರವರು ಪಡೆದುಕೊಂಡಿದ್ದಾರೆ.
ಅಫಿಶಿಯಲ್ ಪೊಲೀಸ್ ಕ್ರಿಕೆಟ್ ಕಪ್ ನ ಸಂಪೂರ್ಣ ಉಸ್ತುವಾರಿಯಾಗಿ ಡಿವೈಎಸ್ಪಿ ದಿನಕರ್, ಡಿವೈಎಸ್ಪಿ ಗಣೇಶ್ ವಹಿಸಿಕೊಂಡಿದ್ದರು.
Also Read: ಜ.22 ರಿಂದ 24 ರವರೆಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಜಿಲ್ಲಾ ಪ್ರವಾಸ
ಜಯಗಳಿಸಿದ ತಂಡಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಡಿಸಿ ಕುಮಾರಸ್ವಾಮಿ ಬಹುಮಾನ ವಿತರಣೆ ಮಾಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಪೊಲೀಸ್ ಇಲಾಖೆಯ ವೆಂಕಟಾಚಲ, ಉಸ್ತುವಾರಿ ಸಚಿವರ ಆಪ್ತ ಸಹಾಯಕ ಮಹೇಂದ್ರ ಬಾಬು ಇದ್ದರು.