ಮುಖ್ಯ ಸುದ್ದಿ
ವಿವಿ ಸಾಗರ ಕೋಡಿ ಬಿದ್ದರೂ ಭದ್ರಾ ನೀರು ಹರಿಸುವುದೇಕೆ | ದಾವಣಗೆರೆ ರೈತರ ಅಸಮಧಾನ
CHITRADURGA NEWS | 16 JANUARY 2025
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯ ತುಂಬಿ ಕೋಡಿ ಬಿದ್ದಿದ್ದರೂ, ಭದ್ರಾ ಜಲಾಶಯದಿಂದ ಅನಗತ್ಯವಾಗಿ ನೀರು ಹರಿಸಿ ಪೋಲು ಮಾಡಲಾಗುತ್ತಿದೆ ಎಂದು ದಾವಣಗೆರೆ ರೈತರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಎಚ್.ಆರ್.ಲಿಂಗರಾಜ ಶಾಮನೂರು ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಡಿಸೆಂಬರ್ ಮೊದಲ ವಾರದಿಂದ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಗ್ರಾಮ ಆಡಳಿತಾಧಿಕಾರಿ ಹುದ್ದೆ | 1:3 ಆಯ್ಕೆಪಟ್ಟಿ ಪ್ರಕಟ | ಆಕ್ಷೇಪಣೆಗೆ ಅವಕಾಶ
ಜನವರಿ 18 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿ ಸಾಗರಕ್ಕೆ ಬಾಗೀನ ಅರ್ಪಿಸಲು ಬರುತ್ತಿದ್ದಾರೆ. ಇದಕ್ಕಾಗಿ ದಿನವೂ ನೀರು ಹರಿಸಲಾಗುತ್ತಿದೆ. ಹೀಗೆ ಕಾನೂನು ಬಾಹೀರವಾಗಿ ಭದ್ರಾ ನೀರು ಹರಿಸಿದರೆ ಮುಂದೆ ದಾವಣಗೆರೆ ರೈತರಿಗೆ ತೊಂದರೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭದ್ರಾ ಜಲಾಶಯದಲ್ಲಿ 71.355 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯವಿದ್ದು, ಈಗ ಜಲಾಶಯದಲ್ಲಿ 61.503 ಟಿಎಂಸಿ ನೀರಿದೆ. ಇದರಲ್ಲಿ ಕುಡಿಯಲು, ಕೈಗಾರಿಕೆಗಳಿಗೆ, ಡೆಡ್ ಸ್ಟೋರೇಜ್ ಸೇರಿದಂತೆ ಎಲ್ಲವೂ ಕಳೆದು ರೈತರಿಗೆ ಸಿಗುವುದೇ 15 ರಿಂದ 18 ಟಿಎಂಸಿ ನೀರು ಎಂದು ವಿವರಿಸಿದರು.
ಇದನ್ನೂ ಓದಿ: ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಮತ್ತೆ ಜಿಗಿತ
ಭದ್ರಾ ಮೇಲ್ದಂಡೆ ಯೋಜನೆಗೆ ಕಾಡಾದವರೇ ನೀರು ಹರಿಸಬೇಕು. ಆದರೆ, ಇವರು ಭದ್ರಾ ಮೇಲ್ದಂಡೆ ಅಧಿಕಾರಿಗಳ ಕೈಗೆ ಕೀ ಕೊಟ್ಟಿದ್ದು, ಅವರು ಬೇಕಾಬಿಟ್ಟಿಯಾಗಿ ನೀರು ಹರಿಸುತ್ತಿದ್ದಾರೆ. ಹೀಗೆ ಬೇಕಾಬಿಟ್ಟಿಯಾಗಿ ನೀರು ಬಿಟ್ಟುಕೊಳ್ಳುವುದಾದರೆ ಕಾಡಾ ಏಕೆ ಬೇಕು ಎಂದು ಲಿಂಗರಾಜ್ ಪ್ರಶ್ನಿಸಿದ್ದಾರೆ.
ಎಸ್. ಮಿಟ್ಯಾನಾಯ್ಕ
16 January 2025 at 21:44
ಭದ್ರ ಮೇಲ್ದಂಡೆ ನೀರಿನಿಂದ ವಿ ವಿ ಸಾಗರದ ಕೋಡಿ ಬಿದ್ದಿದೆ ಅದು ನಮ್ಮ ಚಿತ್ರದುರ್ಗ ಜಿಲ್ಲೆಯ ರೈತರ ಕನಸು ಜೊತೆಗೆ ನಮ್ಮ ಕನಸು ಕೂಡ ಇದೆ
ದಾವಣಗೆರೆ ಜಿಲ್ಲೇ ರೈತ ಮುಖಂಡರು ಸ್ವಲ್ಪ ತಾಳ್ಮೆಯಿಂದ ಇರಬೇಕು ಭದ್ರ ಮೇಲ್ದಂಡೆ ನೀರು ನಿಲ್ಲೇ ನಿಲ್ಲುತ್ತದೆ
ನಾವೆಲ್ಲರೂ ಕರ್ನಾಟಕ ರಾಜ್ಯದ ರೈತರು
ನಮ್ಮೆಲರೀಗೂ ಒಳ್ಳೇದು ಆದರೆ ಸಾಕು