ಮುಖ್ಯ ಸುದ್ದಿ
ವಿವಿ ಸಾಗರ ಜಲಾಶಯ ಭರ್ತಿಗೆ ಇನ್ನೊಂದೇ ಅಡಿ ಬಾಕಿ
CHITRADURGA NEWS | 17 DECEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ನೀರು ಹರಿದು ಬಂದಿದ್ದು, ಡಿಸೆಂಬರ್ 17 ರಂದು ಬೆಳಗ್ಗೆ ವೇಳೆಗೆ 693 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಇದರಿಂದಾಗಿ ಜಲಾಶಯದ ನೀರಿನ ಮಟ್ಟ 128.95 ಅಡಿ ತಲುಪಿದ್ದು, ಇನ್ನು 1 ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗಲಿದೆ.
ಇದನ್ನೂ ಓದಿ: ಅಮೇರಿಕಾ ಯುವತಿ ಜೊತೆ ಸಪ್ತಪದಿ ತುಳಿದ ಕೋಟೆನಾಡಿನ ಯುವಕ
30 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಈಗ 29.54 ಟಿಎಂಸಿ ಅಡಿ ನೀರು ಭರ್ತಿಯಾಗಿದೆ.
ಭದ್ರಾ ಜಲಾಶಯದಿಂದ ಎಲ್ಲ ಅಡೆತಡೆಗಳನ್ನು ಮೀರಿ ನೀರು ಹರಿದು ಬರುತ್ತಿದ್ದು, ವಿವಿ ಸಾಗರ ಜಲಾಶಯ ನಿರ್ಮಾಣವಾದ ನಂತರ ಮೂರನೇ ಬಾರಿಗೆ ಕೋಡಿ ಬೀಳುವುದನ್ನು ಇಂದಿನ ಪೀಳಿಗೆ ಕಣ್ತುಂಬಿಕೊಳ್ಳಲಿದೆ.