ಮುಖ್ಯ ಸುದ್ದಿ
ದಾವಣಗೆರೆ ವಿಶ್ವವಿದ್ಯಾನಿಲಯ ಪುರುಷರ ಅಂತರ ಕಾಲೇಜು ಹಾಕಿ ಪಂದ್ಯಾವಳಿ | ಬಸವಪ್ರಭು ಸ್ವಾಮೀಜಿ ಚಾಲನೆ
CHITRADURGA NEWS | 16 DECEMBER 2024
ಚಿತ್ರದುರ್ಗ: ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ವತಿಯಿಂದ ನಗರದ ಶ್ರೀ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಪುರುಷರ ಅಂತರ ಕಾಲೇಜು ಹಾಕಿ ಪಂದ್ಯಾವಳಿ ಹಾಗೂ ತಂಡದ ಆಯ್ಕೆಗೆ ಡಾ.ಬಸವಪ್ರಭು ಸ್ವಾಮಿಗಳು ಚಾಲನೆ ನೀಡಿದರು.
ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್
ನಂತರ ಮಾತನಾಡಿದ ಡಾ.ಬಸವಪ್ರಭು ಸ್ವಾಮೀಜಿ, ಕ್ರೀಡೆ ಎನ್ನುವುದು ಬದುಕಿನಲ್ಲಿ ಸ್ಫೂರ್ತಿ ತುಂಬುತ್ತದೆ. ವಿದ್ಯಾರ್ಥಿಗಳು ಕೇವಲು ಪುಸ್ತಕದ ಹುಳು ಆಗಬಾರದು. ಪುಸ್ತಕದ ಜೊತೆಗೆ ಧ್ಯಾನ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹ ಗಟ್ಟಿಯಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿವಗಂಗೋತ್ರಿ ದಾವಣಗೆರೆ ವಿಶ್ವವಿದ್ಯಾನಿಲಯ, ಎಚ್.ಪಿ.ಸಿ.ಸಿ. ಸರ್ಕಾರಿ ಕಾಲೇಜು ಚಳ್ಳಕೆರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ, ಸಿ.ಸಿ.ಪಿ. ಮಲ್ಲಾಡಿಹಳ್ಳಿ ಮತ್ತು ಸರ್ಕಾರಿ ಪದವಿ ಕಾಲೇಜು ಹೊಸದುರ್ಗ ಹಾಕಿ ತಂಡಗಳು ಭಾಗವಹಿಸಿದ್ದವು.
ಕಾಲೇಜಿನ ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗದಲ್ಲಿ HDK ಜನ್ಮ ದಿನಾಚರಣೆ | ಕೇಕ್ ಕತ್ತರಿಸಿ JDS ಕಾರ್ಯಕರ್ತರ ಸಂಭ್ರಮ
ಎಂ.ಎಸ್. ಪರಮೇಶ್ವರ, ದೈಹಿಕ ಶಿಕ್ಷಣ ನಿರ್ದೇಶಕರಾದ ಮಕ್ಸೂದ್ ಅಹಮದ್, ಪ್ರಸನ್ನಕುಮಾರ್, ಡಾ. ರಾಘವೇಂದ್ರ, ಪ್ರಶಾಂತ್, ಬಿ.ಜಿ. ನಾಗರಾಜ್, ತಿಪ್ಪೇಸ್ವಾಮಿ, ಶಿವಾನಂದಪ್ಪ, ಜಿ.ಎಸ್. ನಾಗರಾಜ್, ಗಿರೀಶ್, ರಮ್ಯ, ಸುಧಾರಾಣಿ, ಶಿವಕುಮಾರ್, ಡಾ.ಶ್ವೇತ ಇದ್ದರು.