Connect with us

ಎಸ್.ನಿಜಲಿಂಗಪ್ಪ ಮನೆಗೆ ಡಿಸಿ ಭೇಟಿ | ಮನೆಯ ಕೀ ಹಸ್ತಾಂತರ | ನವೀಕರಣ ಪ್ರಕ್ರಿಯೆ ಆರಂಭ

DC Visit SN House

ಮುಖ್ಯ ಸುದ್ದಿ

ಎಸ್.ನಿಜಲಿಂಗಪ್ಪ ಮನೆಗೆ ಡಿಸಿ ಭೇಟಿ | ಮನೆಯ ಕೀ ಹಸ್ತಾಂತರ | ನವೀಕರಣ ಪ್ರಕ್ರಿಯೆ ಆರಂಭ

CHITRADURGA NEWS | 16 DECEMBER 2024

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ಕನಸಿನ ಮನೆ, ಚಿತ್ರದುರ್ಗದ ವೈಟ್ ಹೌಸ್ ಈಗ ಅಧಿಕೃತವಾಗಿ ಸರ್ಕಾರದ ಸ್ವತ್ತಾಗಿದೆ.

ಮನೆಯ ಖರೀಧಿ ನಂತರ ಮೊದಲ ಬಾರಿಗೆ ಇಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಸ್ಸೆನ್ ಮನೆ ‘ವಿನಯ’ಗೆ ಭೇಟಿ ನೀಡಿ ಸಂಪೂರ್ಣವಾಗಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ವಾಣಿವಿಲಾಸ ಸಾಗರ ಭರ್ತಿಗೆ ಅರ್ಧ TMC ಬಾಕಿ

ಈ ವೇಳೆ ಎಸ್.ನಿಜಲಿಂಗಪ್ಪ ಸ್ಮಾರಕ ಟ್ರಸ್ಟ್ ಸಂಯೋಜಕ ಎಸ್.ಷಣ್ಮುಖಪ್ಪ ಹಾಜರಿದ್ದು, ಎಸ್ಸೆನ್ ಮನೆಯ ಕೀಲಿಯನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.

ಎಸ್ಸೆನ್ ಮನೆಯ ಕೀ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರ

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ ವಾಸವಿದ್ದ ಮನೆಯನ್ನು ಸರ್ಕಾರದಿಂದ ಖರೀದಿ ಮಾಡಿ ಸಂರಕ್ಷಣೆ ಮಾಡಿ, ಸ್ಮಾರಕ ಮಾಡಬೇಕು ಎಂಬ ಬೇಡಿಕೆ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕಳೆದ ವಾರ ಸರ್ಕಾರದಿಂದ ಖರೀದಿ ಮಾಡಲಾಗಿದೆ. ವೈಟ್‌ಹೌಸ್ ಎಂದೇ ಕರೆಯುವ ಈ ಮನೆಯ ಪುನರುಜ್ಜೀವನ ಮಾಡುವ ಉದ್ದೇಶದಿಂದ ಎಸ್.ನಿಜಲಿಂಗಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀದಿ ಮಾಡಿದ ಸರ್ಕಾರ | ದಶಕಗಳ ಗೊಂದಲಕ್ಕೆ ಇತಿಶ್ರೀ | ತಹಶೀಲ್ದಾರ್ ಹೆಸರಿಗೆ ನೊಂದಣಿ

ಎಸ್.ನಿಜಲಿಂಗಪ್ಪ ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡುವ ನಿಟ್ಟಿನಲ್ಲಿ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ, ಮೊದಲು ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ನಂತರ ಸರ್ಕಾರದೊಂದಿಗೆ ಚರ್ಚಿಸಿ, ಮುಂದಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು.

ಎಸ್.ನಿಜಲಿಂಗಪ್ಪ ಮನೆಗೆ ಡಿಸಿ ಭೇಟಿ

ಸ್ಮಾರಕ ಮಾಡುವ ನಿಟ್ಟಿನಲ್ಲಿ ತುರ್ತಾಗಿ ಎಸ್ಟಿಮೆಟ್ ಮಾಡಲು ಇಂಜಿನಿಯರ್‌ಗಳಿಗೆ ಸೂಚಿಸಲಾಗಿದ್ದು, ತಕ್ಷಣದಿಂದಲೇ ಪರಿಶೀಲನೆ ನಡೆಸಿ, ದುರಸ್ಥಿ ಕಾರ್ಯ ಕೈಗೊಳ್ಳುವರು ಎಂದು ಹೇಳಿದರು.

ಇದನ್ನೂ ಓದಿ: ವಿದ್ಯುತ್ ವ್ಯತ್ಯಯ | ಚಿತ್ರದುರ್ಗ ನಗರ, ತಾಲೂಕಿನಲ್ಲಿ ನಾಳೆ ಕರೆಂಟ್ ಕಟ್

ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಅಂದಾಜಿಸಿದAತೆ ರೂ.4,18,49,016 ಗಳಿಗೆ ದಿ.ಎಸ್.ನಿಜಲಿಂಗಪ್ಪನವರ ವಾರಸುದಾರರಿಂದ ಮನೆ ಖರೀದಿ ಮಾಡಲಾಗಿದ್ದು, ಇನ್ನೂ ರೂ.80 ಲಕ್ಷ ಅನುದಾನ ಉಳಿದಿದೆ. ಈ ಅನುದಾನದಲ್ಲಿ ಸಿವಿಲ್ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗುವುದು. ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದರೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಎಸ್‌.ನಿಜಲಿಂಗಪ್ಪ ಮನೆ ಹೇಗಿದೆ ವೀಡಿಯೋ ನೋಡಿ: Video Link:https://youtu.be/oqgdKy7wJiI

ಎಸ್.ನಿಜಲಿಂಗಪ್ಪ ಅವರ ನಿವಾಸದಲ್ಲಿ ಅವರಿಗೆ ಸಂಬಂಧಪಟ್ಟ ಫೋಟೋಗ್ರಾಫಿ, ಉಡುಗೊರೆಗಳು ಹಾಗೂ ಅವರು ಉಪಯೋಗಿಸುತ್ತಿದ್ದ ವಸ್ತುಗಳು ಇದ್ದು, ಅವುಗಳನ್ನು ಯಥಾವತ್ತಾಗಿ ಪ್ರಾಚ್ಯ ವಸ್ತು ಸಂಗ್ರಾಲಯದ ಸಹಯೋಗದೊಂದಿಗೆ ಸಂರಕ್ಷಣೆ ಮಾಡಿ, ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ, ಸಾರ್ವಜನಿಕರ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version