ಕ್ರೈಂ ಸುದ್ದಿ
thief; ವೃದ್ದೆ ಬಳಿ 2.25 ಲಕ್ಷ ಮೌಲ್ಯದ ಚಿನ್ನದ ಸರ ಎಗರಿಸಿ ಪರಾರಿಯಾದ ಕಳ್ಳರು
CHITRADURGA NEWS | 01 SEPTEMBER 2024
ಚಿತ್ರದುರ್ಗ: ಅಂಗಡಿಗೆ ಟೀ ಪೌಡರ್ ತರಲು ತೆರಳುತ್ತಿದ್ದ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಎಗರಿಸಿ, ಖತರ್ನಾಕ್ ಕಳ್ಳ(thief)ರು ಎಸ್ಕೇಪ್ ಆಗಿರುವ ಘಟನೆ ಸೆ.1 ಬೆಳಿಗ್ಗೆ 7 ಗಂಟೆಗೆ ಬೆಳಕಿಗೆ ಬಂದಿದೆ.
ಚಿತ್ರದುರ್ಗ ನಗರದ ಎಸ್ಪಿ ಕಚೇರಿ ಸಮೀಪದಲ್ಲೇ ಈ ಕೃತ್ಯ ಜರುಗಿದೆ.
ಕ್ಲಿಕ್ ಮಾಡಿ ಓದಿ: Kannada Novel: 1 ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿ ಯುವಕರು ಈ ಕೃತ್ಯ ಎಸಗಿದ್ದಾರೆ. ನಗರದ ಮುನ್ಸಿಪಲ್ ಕಾಲೋನಿಯ ಅನ್ನ ಪೂರ್ಣಮ್ಮ ಎಂಬ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಎಗರಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.
45 ಗ್ರಾಂ ತೂಕದ ಅಂದಾಜು 2.25 ಲಕ್ಷ ಮೌಲ್ಯದ ಚಿನ್ನದ ಸರ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪಿಎಸ್ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.