ಕ್ರೈಂ ಸುದ್ದಿ
Molakalmuru: ಬೆಳ್ಳಂ ಬೆಳಗ್ಗೆ ಸರಣಿ ಅಪಘಾತ | 4 ಎತ್ತುಗಳು, ಓರ್ವ ವ್ಯಕ್ತಿ ಸಾವು
CHITRADURGA NEWS | 05 DECEMBER 2024
ಮೊಳಕಾಲ್ಮೂರು: ಇಂದು ನಸುಕಿನ 5.30 ರ ವೇಳೆಗೆ ಮೊಳಕಾಲ್ಮೂರು ಬಳಿ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 4 ಎತ್ತುಗಳು ಹಾಗೂ ಓರ್ವ ವ್ಯಕ್ತಿ ದುರ್ಮರಣ ಹೊಂದಿರುವ ಭೀಕರ ಘಟನೆ ನಡೆದಿದೆ.
ಮೊಳಕಾಲ್ಮೂರು(Molakalmuru) ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಭೈರಾಪುರ ಬಳಿ ಈ ಅಪಘಾತ ನಡೆದಿದ್ದು, ಟಿಪ್ಪರ್ ಲಾರಿಯೊಂದು ಮೂರು ಎತ್ತಿನ ಬಂಡಿಗಳಿಗೆ ಡಿಕ್ಕಿಯಾಗಿದೆ.
ಇದನ್ನೂ ಓದಿ: ದಿನ ಭವಿಷ್ಯ | 05 ಡಿಸೆಂಬರ್ | ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ, ಆರ್ಥಿಕ ಲಾಭ, ಶುಭ ಸುದ್ದಿ
ಅಪಘಾತದ ರಭಸಕ್ಕೆ ಸ್ಥಳದಲ್ಲೇ ನಾಲ್ಕು ಎತ್ತುಗಳು ಪ್ರಾಣ ಬಿಟ್ಟಿವೆ. ಎತ್ತಿನ ಬಂಡಿಗಳು ಚೆಲ್ಲಾಪಿಲ್ಲಿಯಾಗಿವೆ.
ಟಿಪ್ಪರ್ ಚಾಲಕ ಇಮ್ರಾನ್ ಕೂಡಾ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅದೃಷ್ಟವಶಾತ್ ಎತ್ತಿನ ಬಂಡಿ ಓಡಿಸುತ್ತಿದ್ದ ರೈತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಹಿಂದುಗಳ ಪರ ಚಿತ್ರದುರ್ಗದಲ್ಲಿ ಹೋರಾಟ | RSSನ ಪಟ್ಟಾಭಿರಾಮ್, ಮಾದಾರ ಚನ್ನಯ್ಯ ಶ್ರೀ ಭಾಗೀ
ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಪೊಲೀಸ್ ಠಾಣೆ ಪಿಎಸೈ ಪಾಂಡುರಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.