ಮುಖ್ಯ ಸುದ್ದಿ
Murugha Mutt: ಮುರುಘಾ ಶ್ರೀಗಳ ಬೆಳ್ಳಿ ಪುತ್ಥಳಿ ಕಳ್ಳತನ | ದಾಖಲಾಯ್ತು ದೂರು | ದೂರು ಕೊಟ್ಟಿದ್ಯಾರು ?
CHITRADURGA NEWS | 12 JULY 2024
ಚಿತ್ರದುರ್ಗ: ನಗರದ ಮುರುಘಾ ಮಠದಲ್ಲಿ (ಒuಡಿughಚಿ ಒuಣಣ) ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಪುತ್ಥಳಿ ನಾಪತ್ತೆ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಠದ ದರ್ಬಾರ್ ಹಾಲ್‌ನಲ್ಲಿದ್ದ 22 ಕೆ.ಜಿ. ತೂಕದ ಬೆಳ್ಳಿ ಪುತ್ಥಳಿ ಕಳ್ಳತನವಾಗಿರುವ ಬಗ್ಗೆ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಗುರುವಾರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಠದ ಸಿಬ್ಬಂದಿಯೊಬ್ಬರು ಬುಧವಾರ ದರ್ಬಾರ್ ಹಾಲ್‌ಗೆ ತೆರಳಿದಾಗ ಪುತ್ಥಳಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಜುಲೈ 4ರಂದು ಕಡೆಯದಾಗಿ ಪ್ರತಿಮೆ ನೋಡಿದ್ದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಮಠದಲ್ಲಿ ಆಂತರಿಕ ತನಿಖೆ ನಡೆಸಿದಾಗ ಪುತ್ಥಳಿ ಕುರಿತ ಯಾವುದೇ ಮಾಹಿತಿ ಲಭ್ಯವಾಗಿಲ್ಲ.21 ಇಂಚು ಎತ್ತರದ ಪುತ್ಥಳಿಯು ₹ 16 ಲಕ್ಷ ಮೌಲ್ಯ ಹೊಂದಿದೆ.
ಕ್ಲಿಕ್ ಮಾಡಿ ಓದಿ: ಮುರುಘಾ ಮಠದಲ್ಲಿ ಕಳ್ಳರ ಕೈಚಳಕ | ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಪುತ್ಥಳಿ ಕಳವು
ಘಟನೆ ಬಗ್ಗೆ ಮುರುಘಾ ಮಠದ ಟ್ರಸ್ಟ್ ಮತ್ತು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ನಿರ್ವಹಣಾ ಸಮಿತಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಅವರ ಮೌಖಿಕ ಸೂಚನೆ ಮೇರೆಗೆ ಬಸವ ಕುಮಾರ ಸ್ವಾಮೀಜಿ ಗುರುವಾರ ಗ್ರಾಮಾಂತರ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: Car accident: ಹೆದ್ದಾರಿಯಲ್ಲಿ ಕಾರು ಅಪಘಾತ | ಕೃಷಿ ಪತ್ತಿನ ಸಹಕಾರ ಸಂಘದ ಮೂವರು ಮೃತ
ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣದ ರಜತೋತ್ಸವ ಸಮಾರಂಭದಲ್ಲಿ ವಿವಿಧ ಮಠಾಧೀಶರು ಸ್ವಾಮೀಜಿ ಅವರಿಗೆ ಬೆಳ್ಳಿ ಪುತ್ಥಳಿ ಅರ್ಪಿಸಿದ್ದರು. ಈ ಸಂಭ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಸಾಕ್ಷಿಯಾಗಿದ್ದರು.