ಕ್ರೈಂ ಸುದ್ದಿ
Adike: ಅಡಿಕೆ ವ್ಯಾಪಾರಿ ಆತ್ಮಹತ್ಯೆ | ಡೆತ್ ನೋಟ್ ಪತ್ತೆ
CHITRADURGA NEWS | 14 NOVEMBER 2024
ಚಿತ್ರದುರ್ಗ: ಅಡಿಕೆ (Adike) ಸಂಗ್ರಹಿಸಿಡುವ ಗೋಡಾನ್ ಒಳಗೆ ಅಡಿಕೆ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆಯಲ್ಲಿ 50 ಸಾವಿರ ದಾಟಿದ ರಾಶಿ
ಸಿದ್ದಾಪುರದ ಅಡಿಕೆ ವ್ಯಾಪಾರಿ ಶೈಲೇಶ್(42) ಮೃತ ವ್ಯಕ್ತಿ.
ಗೋಡಾನ್ ನಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕೃಷಿ ಹೊಂಡ, ಬದು ನಿರ್ಮಾಣದಲ್ಲಿ ಅಕ್ರಮ | ವರದಿ ಸಲ್ಲಿಸಲು ಶಾಸಕ ವೀರೇಂದ್ರ ಪಪ್ಪಿ ಸೂಚನೆ
ಡೆತ್ ನೋಟ್ ನಲ್ಲಿ ಏನು ಬರೆದಿದ್ದಾರೆ ಎನ್ನುವ ಅಂಶ ಬಹಿರಂಗವಾದರೆ, ಸಾವಿಗೆ ಕಾರಣ ಗೊತ್ತಾಗಲಿದೆ.
ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.