ಮುಖ್ಯ ಸುದ್ದಿ
DCC ಬ್ಯಾಂಕ್ ಚುನಾವಣೆ | ಶಾಸಕ ಟಿ.ರಘುಮೂರ್ತಿ ನಾಮಪತ್ರ ತಿರಸ್ಕøತ
CHITRADURGA NEWS | 06 SEPTEMBER 2024
ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(DCC) ಚುನಾವಣೆ ನಿರ್ದೇಶಕ ಸ್ಥಾನಕ್ಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸಲ್ಲಿಸಿದ್ದ ನಾಮಪತ್ರ ತಿರಸ್ಕøತಗೊಂಡಿದೆ.
ಬ್ಯಾಂಕಿನ ಬೈಲಾ ಕಾರಣಕ್ಕೆ ಜಿಲ್ಲೆಯ ಸುಮಾರು 200 ಸಹಕಾರ ಸಂಘಗಳು ಮತದಾನ ಮತ್ತು ಚುನಾವಣೆ ಸ್ಪರ್ಧೆಗೆ ಅನರ್ಹವಾಗಿವೆ.
ಇದನ್ನೂ ಓದಿ: ಎತ್ತಿನಹೊಳೆ ಪ್ರಾಜೆಕ್ಟ್ ಬಟನ್ ಹೊಡೆಯಿರಿ | ಜನರಿಗೆ ಸುಳ್ಳು ಹೇಳಬೇಡಿ | ಸಂಸದ ಗೋವಿಂದ ಕಾರಜೋಳ
ಈ ಪಟ್ಟಿಯಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಪ್ರತಿನಿಧಿಸುವ ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕೂಡಾ ಸೇರಿತ್ತು.
ಈ ಅನರ್ಹತೆ ಪ್ರಶ್ನಿಸಿ ಶಾಸಕ ಟಿ.ರಘುಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಸೆ.9ಕ್ಕೆ ವಿಚಾರಣೆ ಬಾಕಿ ಇರಿಸಿ, ರಘುಮೂರ್ತಿ ಅವರ ನಾಮಪತ್ರ ಅಂಗೀಕರಿಸುವಂತೆ ಚುನಾವಣಾಧಿಕಾರಿಗೆ ಸೂಚನೆ ನೀಡಿತ್ತು.
ಇದನ್ನೂ ಓದಿ: ವಾಣಿವಿಲಾಸ ಸಾಗರದತ್ತ ಎತ್ತಿನಹೊಳೆ | ಇಲ್ಲಿದೆ ನೋಡಿ ಯೋಜನೆಯ ಕಂಪ್ಲೀಟ್ ಡೀಟೆಲ್ಸ್
ಸೆ.5 ರಂದು ನಡೆದ ನಾಮಪತ್ರಗಳ ಪರಿಶೀಲನೆ ವೇಳೆ ಶಾಸಕರಾದ ಟಿ.ರಘುಮೂರ್ತಿ ಅವರ ನಾಮಪತ್ರ ಕುರಿತು ವಿಚಾರಣೆ ನಡೆಸಿದ ಚುನಾವಣಾಧಿಕಾರಿಗಳು ಅವರಿಗೆ ಹಿಂಬರಹ ನೀಡಿ ತಿರಸ್ಕøತಗೊಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಬಳಿ ಹಾಕಿರುವ ನೋಟೀಸ್‍ನಲ್ಲಿ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 24620/2024(CS-ELM) ಉಲ್ಲೇಖಿಸಿ, ಈ ಅಂಶವಯ ಹೈಕೋರ್ಟ್ ನೀಡುವ ಆದೇಶಕ್ಕೆ ಒಳಪಟ್ಟಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ಕಾರ್ತಿಕ್ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ತಹಶೀಲ್ದಾರ್ ಜೀಪ್‍ಗೆ ಬೆಂಕಿ ಹಚ್ಚಿದ ಪೃಥ್ವಿರಾಜ್
ತಿರಸ್ಕøತಗೊಂಡವರ ಪೈಕಿ ಶಾಸಕ ಟಿ.ರಘುಮೂರ್ತಿ, ಬೆನಕನಹಳ್ಳಿಯ ಅರುಣ್‍ಕುಮಾರ್, ಗೊಡಬನಹಾಳ್ ಕೆ.ಪಿ.ಮಂಜುನಾಥ್, ಸಿಂಗಾಪುರದ ಡಿ.ಎಸ್.ಶಶಿಧರ್, ಮೊಗಲಹಳ್ಳಿ ಆರ್.ರಾಮರೆಡ್ಡಿ ಇನ್ನಿತರೆ ನಾಮಪತ್ರಗಳು ತಿರಸ್ಕøತವಾಗಿವೆ.