ಹಿರಿಯೂರು
Teru Malleshwara: ತೇರುಮಲ್ಲೇಶ್ವರ ಸ್ವಾಮಿ ಸನ್ನಿಧಾನದಲ್ಲಿ ದಸರಾ ವೈಭವ | ಅದ್ದೂರಿ ಆಚರಣೆಗೆ ತಯಾರಿ
CHITRADURGA NEWS | 30 SEPTEMBER 2024
ಚಿತ್ರದುರ್ಗ: ದಕ್ಷಿಣ ಕಾಶಿ ಹಿರಿಯೂರಿನ ತೇರುಮಲ್ಲೇಶ್ವರ ಸ್ವಾಮಿ ಸನ್ನಿಧಾನದಲ್ಲಿ ದಸರಾ ವೈಭವ ಕಳೆಗಟ್ಟಿದ್ದು, ಅದ್ದೂರಿ ಆಚರಣೆಗೆ ತಯಾರಿ ನಡೆಸಲಾಗಿದೆ.
ಅ.11 ರಂದು ಆಯುಧಪೂಜೆ, 12 ರಂದು ಅಂಬಿನೋತ್ಸವ, 13 ರಂದು ಮೈಲಾರಲಿಂಗೇಶ್ವರಸ್ವಾಮಿಯ ಸರಪಳಿ ಪವಾಡ ನಡೆಯಲಿದೆ. ಹಬ್ಬವನ್ನು ಭಕ್ತಿ–ಭಾವದೊಂದಿಗೆ ಅದ್ದೂರಿಯಾಗಿ ಆಚರಿಸಲು ತೇರುಮಲ್ಲೇಶ್ವರ ದೇಗುಲದಲ್ಲಿ ತಹಶೀಲ್ದಾರ್ ರಾಜೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ದಸರಾ ಹಬ್ಬವನ್ನು ಸುಸೂತ್ರವಾಗಿ ಆಚರಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ದೇವಾಲಯಗಳ ಮುಖ್ಯಸ್ಥರು, ಭಕ್ತರು ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಮನವಿ ಮಾಡಿದರು. ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸದಸ್ಯರಾದ ಶಿವರಂಜನಿ ಯಾದವ್, ಸದಸ್ಯ ಬಾಲಕೃಷ್ಣ, ಪೌರಾಯುಕ್ತ ಎ. ವಾಸೀಂ, ಎಸ್‌ಐ ಶಶಿಕಲಾ, ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ಅಶೋಕ್, ಪ್ರಸನ್ನ ಜೋಯಿಸ್, ವಿಶ್ವನಾಥಾಚಾರ್ಯ, ನಾಗರಾಜಾಚಾರ್ಯ, ಭೋಜಣ್ಣ, ಕಂದಾಯ ಇಲಾಖೆಯ ಶರಣಬಸವೇಶ್ವರ, ಸ್ವಾಮಿ, ಚನ್ನಬಸವರಾಜ್, ಬೆಸ್ಕಾಂ ಎಇ ರವಿಕುಮಾರ್, ಅರಣ್ಯಾಧಿಕಾರಿ ವಿನಯ್, ಅಗ್ನಿಶಾಮಕ ಸುಬಾನ್ ಸಾಬ್ ಹಾಗೂ ಬನ್ನಿಮಂಟಪ ಆಂಜನೇಯಸ್ವಾಮಿ ದೇಗುಲದ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.