Connect with us

    ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ಎದುರಿನಲ್ಲಿ ಕರುನಾಡಿನ ಶ್ರೀಗಳು

    ಅಯೋಧ್ಯೆ ಶ್ರೀರಾಮ ಮಂದಿರದ ಮುಂಭಾಗದಲ್ಲಿ ಮಾದಾರ ಚನ್ನಯ್ಯ ಶ್ರೀ, ನಿರ್ಮಲಾನಂದನಾಥ ಶ್ರೀ, ಸುತ್ತೂರು ಶ್ರೀ, ಕಾಗಿನೆಲೆ ಶ್ರೀಗಳು.

    ಮುಖ್ಯ ಸುದ್ದಿ

    ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದ ಎದುರಿನಲ್ಲಿ ಕರುನಾಡಿನ ಶ್ರೀಗಳು

    CHITRADURGA NEWS | 22 JANUARY 2024

    ಚಿತ್ರದುರ್ಗ: ಇಡೀ ದೇಶದ ಗಮನ ಅಯೋಧ್ಯೆಯ ಮೇಲೆ ನೆಟ್ಟಿದೆ. ಅಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳನ್ನು ದೇಶದ ಜನತೆ ನೋಡುತ್ತಿದ್ದಾರೆ.

    ದೇಶದ ಗಣ್ಯರು, ಅತೀ ಗಣ್ಯರು ಹಾಗೂ ಸಾಧು ಸಂತರಿಗೆ ಮಾತ್ರ ಶ್ರೀರಾಮ ಮಂದಿರದ ಲೋಕಾರ್ಪಣೆ ಹಾಗೂ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

    ಈ ಸಂದರ್ಭದಲ್ಲಿ ಕರ್ನಾಟಕದ ಹಲವು ಗಣ್ಯರು ಹಾಗೂ ನಾಡಿನ ವಿವಿಧ ಪ್ರಮುಖ ಮಠಾಧೀಶರು ಭಾಗಿಯಾಗಿದ್ದಾರೆ.

    ಇದನ್ನೂ ಓದಿ: ಹಳ್ಳಿ ಹಳ್ಳಿಗಳಲ್ಲೂ ರಾಮೋತ್ಸವಕ್ಕೆ ಭರ್ಜರಿ ಸಿದ್ಧತೆ

    ಪ್ರಮುಖವಾಗಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಠದ ಶ್ರೀಗಳು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳು, ಹಾವೇರಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ದಾವಣಗೆರೆ ಜಿಲ್ಲೆಯ ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಭಾಗವಹಿಸಿದ್ದಾರೆ.

    ಅಯೋಧ್ಯೆ ಶ್ರೀರಾಮ ಮಂದಿರದ ಮುಂಭಾಗದಲ್ಲಿ ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

    ಅಯೋಧ್ಯೆ ಶ್ರೀರಾಮ ಮಂದಿರದ ಮುಂಭಾಗದಲ್ಲಿ ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

    ಇದರಲ್ಲಿ ವಿಶೇಷವಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ, ಮಧುರೆ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸೇರಿದಂತೆ ಸಂಘ ಪರಿವಾರದ ನಾಯಕರು ಕೂಡಾ ಭಾಗವಹಿಸಿದ್ದಾರೆ.

    ಸಂಘ ಪರಿವಾರದ ಹಿರಿಯರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಕಾಂತಾರಾ ಖ್ಯಾತಿಯ ರಿಷಬ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಕರ್ನಾಟಕದಿಂದ ಭಾಗಿಯಾಗಿದ್ದಾರೆ.

    ಒಂದು ದಿನ ಮೊದಲೇ ಅಯೋಧ್ಯೆ ತಲುಪಿರುವ ಶ್ರೀಗಳು ಅಯೋಧ್ಯೆಯ ಹಲವು ಪುಣ್ಯ ಕ್ಷೇತ್ರಗಳನ್ನು ದರ್ಶನ ಮಾಡಿ ಮಾಹಿತಿ ಒದಗಿಸಿದ್ದಾರೆ.

    ಇದನ್ನೂ ಓದಿ: ಅಯೋಧ್ಯೆ ತಲುಪಿದ ಕೋಟೆನಾಡಿನ ಮಠಾಧೀಶರು ಏನು ಹೇಳಿದ್ದಾರೆ ಗೊತ್ತಾ..?

    ಸೋಮವಾರ ಬೆಳಗ್ಗೆ ಶ್ರೀರಾಮ ಮಂದಿರದ ಮುಂಭಾಗಕ್ಕೆ ಎಲ್ಲ ಗಣ್ಯರನ್ನು ಬಿಡಲಾಗಿದೆ. ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಎಲ್ಲ ಶ್ರೀಗಳು ಸಾಕ್ಷಿಯಾಗಲಿದ್ದಾರೆ.

    ಆನಂತರ ನಡೆಯಲಿರುವ ವೇದಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂದಿರದ ಮುಂಭಾಗದಲ್ಲಿ ವ್ಯವಸ್ಥೆ ಮಾಡಿದ್ದು, ಅಲ್ಲಿ ಕರುನಾಡಿನ ಶ್ರೀಗಳು ನೆರೆದಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top