CHITRADURGA NEWS | 02 December 2025
ಚಿತ್ರದುರ್ಗ: ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗ, ಕೇಂದ್ರ ಸರ್ಕಾರದ ರಾಷ್ಟ್ರೀಯ ಕೌಶಲ್ಯ ಅಭಿವೃದ್ದಿ ನಿಗಮ (ಎನ್‌ಎಸ್‌ಡಿಸಿ) ಹಾಗೂ ಟಿಯುವಿ ರಿನ್‌ಲ್ಯಾಂಡ್ ಇಂಡಿಯಾ ಪ್ರೈ.ಲಿ.ಕಂಪನಿ ಇವರ ಸಹಯೋಗದೊಂದಿಗೆ ಸೋಲಾರ್ ಪಿವಿ ಇನ್‌ಸ್ಟಾಲರ್ ಟೆಕ್ನಿಶಿಯನ್ ತರಬೇತಿ ನೀಡಲಾಗಿತ್ತು.
ಇದನ್ನೂ ಓದಿ: ಇಂದಿನ ಅಡಿಕೆ ಬೆಲೆ | ಡಿಸೆಂಬರ್ 2 | ಯಾವ ಅಡಿಕೆ ರೇಟ್ ಎಷ್ಟು ?
ಡಾಬಸ್‌ಪೇಟೆಯ ಪ್ರತಿಷ್ಠಿತ ಎಂವೀ (ಇಒಒಗಿಇಇ) ಎನರ್ಜಿ ಪ್ರೈ.ಲಿ ನಡೆಸಿದ ನೇಮಕಾತಿಯಲ್ಲಿ ಒಟ್ಟು 18 ಶಿಬಿರಾರ್ಥಿಗಳು ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ಪಿಯುಸಿ, ಐಟಿಐ, ಡಿಪ್ಲೋಮಾ ಹಾಗು ಪದವಿ ಪಡೆದ ನಿರುದ್ಯೋಗಿಗಳಾಗಿದ್ದವರು. ಇವರ ಈ ಯಶಸ್ಸು ಇನ್ನು ಹೆಚ್ಚಿನ ಗ್ರಾಮೀಣ ಭಾಗದ ಹಾಗೂ ಹಿಂದುಳಿದ ಭಾಗದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ.
ಈ ಯಶಸ್ಸಿಗೆ ಶ್ರಮಿಸಿದ ಸಂಸ್ಥೆಯ ತರಬೇತುದಾರರಿಗೆ, ಮಾರ್ಗದರ್ಶಕರಿಗೆ ಪ್ರಾಂಶುಪಾಲರಾದ ಡಾ.ಪಿ.ಬಿ.ಭರತ್ ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್ -ಕಾರ್ ಡಿಕ್ಕಿ | ಸ್ಥಳದಲ್ಲಿ ಓರ್ವ ಸಾವು
ಸೋಲಾರ್ ಕ್ಷೇತ್ರದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಿರುವ ಈ ವಿದ್ಯಾರ್ಥಿಗಳಿಗೆ ಎಸ್.ಜೆ.ಎಂ.ಆಡಳಿತ ಮಂಡಳಿ ಹಾಗು ಪ್ರಾಂಶುಪಾಲರು, ಇಲಾಖಾ ಮುಖ್ಯಸ್ಥರು ಹಾಗು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
