Connect with us

    Sandalwood theft: ಖಾಕಿ ಬಲೆಗೆ ಶ್ರೀಗಂಧ ಕಳ್ಳರ ಗ್ಯಾಂಗ್‌ | ಅಬ್ಬಿನಹೊಳೆ ಪೊಲೀಸರ ಕಾರ್ಯಾಚರಣೆ

    ಕ್ರೈಂ ಸುದ್ದಿ

    Sandalwood theft: ಖಾಕಿ ಬಲೆಗೆ ಶ್ರೀಗಂಧ ಕಳ್ಳರ ಗ್ಯಾಂಗ್‌ | ಅಬ್ಬಿನಹೊಳೆ ಪೊಲೀಸರ ಕಾರ್ಯಾಚರಣೆ

    CHITRADURGA NEWS | 11 SEPTEMBER 2024
    ಚಿತ್ರದುರ್ಗ: ಜಮೀನಿನಲ್ಲಿ ಶ್ರೀಗಂಧ ಮರ ಕಳ್ಳತನ ಮಾಡುತ್ತಿದ್ದ ಗ್ಯಾಂಗ್‌ ಅಬ್ಬಿನಹೊಳೆ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

    ಕಲ್ಯಾಣದುರ್ಗ ತಾಲ್ಲೂಕಿನ ವಡ್ಡೆಪಾಳ್ಯಂ ಕುಂದುರ್ಪಿ ಮಂಡಲಂನ ಕೊಟ್ಟುರಪ್ಪ (26), ಓಬಣ್ಣ (43), ಆರ್‌.ಈರಣ್ಣ (27) ಹಾಗೂ ಪರಶುರಾಮಪುರದ ಟಿ.ಸಿದ್ದಣ್ಣ (35) ಬಂಧಿತರು.

    ಹಿರಿಯೂರು ತಾಲ್ಲೂಕು ಶ್ರೀರಂಗ ಬಡಾವಣೆ ಇ-ಕುರುಬರಹಳ್ಳಿ ಗ್ರಾಮದ ವಿ.ರಾಜು ಇಕ್ಕನೂರು ಕುರಬರಹಳ್ಳಿಯ 4 ಎಕರೆ ಜಮೀನಿನಲ್ಲಿ 300 ಶ್ರೀಗಂಧದ ಸಸಿಗಳನ್ನು ಹಾಕಿದ್ದರು. ಸೆ.3 ರಂದು 3 ಶ್ರೀಗಂಧದ ಮರ ಕಳ್ಳತನ ಮಾಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ನಾಲ್ವರನ್ನು ಬಂಧಿಸಿ, ಬಂಧಿತರಿಂದ ₹ 60,000 ಮೌಲ್ಯದ 30 ಕೆ.ಜಿ. 640ಗ್ರಾಂ ತೂಕದ ಶ್ರೀಗಂಧದ ಮರದ ತುಂಡು, ಕೃತ್ಯಕ್ಕೆ ಉಪಯೋಗಿಸಿದ 2 ಗರಗಸ, 1 ಬಾಚಿ, 2 ಮೋಟಾರ್ ಸೈಕಲ್‌ ವಶ ಪಡಿಸಿಕೊಂಡಿದ್ದಾರೆ.

    ಕ್ಲಿಕ್ ಮಾಡಿ ಓದಿ: ಬೆಳೆ ಹಾನಿಯಿಂದ ಹೆಚ್ಚಿದ ಸಾಲದ ಹೊರೆ | ರೈತ ಆತ್ಮಹತ್ಯೆ

    ಅಬ್ಬಿನ ಹೊಳೆ ಪೊಲೀಸ್‌ ಠಾಣೆಯ ಪಿಎಸ್‌ಐ ಬಾಹುಬಲಿ ಎಂ ಪಡನಾಡ, ಜಿ.ಮಂಜುನಾಥ, ಸಿಬ್ಬಂದಿ ನಾಗರಾಜ್‌, ನಿಂಗರಾಜು, ದೇವೆಂದ್ರಪ್ಪ, ದಾದಾ ಖಲಂದರ್‌, ನಾಗಣ್ಣ, ನಾಗರಾಜ ಮತ್ತು ರುದ್ರೇಶ ತಂಡ ಕಾರ್ಯಾಚರಣೆ ನಡೆಸಿದೆ.

    ಸಾಕ್ಷಿದಾರರಾದ ಕುರುಬರಹಳ್ಳಿಯ ಯೋಗೀಶ್ ಹಾಗೂ ತಿಪ್ಪಣ್ಣ ಅವರ ಸಮ್ಮುಖದಲ್ಲಿ ಮುಂದಿನ ತನಿಖೆ ನಡೆಸಲಾಯಿತು.

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top