Connect with us

    Madderu: ಮದ್ದೇರಿನಲ್ಲಿ ದೇವಸ್ಥಾನ ಉದ್ಘಾಟನೆ | ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

    Rambhapuri swamiji pallakki uthsava

    ಹೊಳಲ್ಕೆರೆ

    Madderu: ಮದ್ದೇರಿನಲ್ಲಿ ದೇವಸ್ಥಾನ ಉದ್ಘಾಟನೆ | ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ

    CHITRADURGA NEWS | 03 NOVEMBER 2024

    ಹೊಳಲ್ಕೆರೆ: ಹೊಳಲ್ಕೆರೆ ತಾಲೂಕಿನ ಮದ್ದೇರು(Madderu) ಗ್ರಾಮದಲ್ಲಿ ಪುರಾತನ ಈಶ್ವರ ದೇವಸ್ಥಾನ ಮತ್ತು ಬಸವಣ್ಣ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

    ದೇವಸ್ಥಾನದ ಉದ್ಘಾಟನಾ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಹಾಗು ಧಾರ್ಮಿಕ ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಸಂಸ್ಥಾನದ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು.

    Madderu Eshwara temple

    ಮದ್ದೇರು ಈಶ್ವರ ದೇವಸ್ಥಾನ

    ಮದ್ದೇರು ಗ್ರಾಮದ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾದರು.

    ಇದನ್ನೂ ಓದಿ:  ವಿವಿ ಸಾಗರ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ

    ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಮಾತನಾಡುತ್ತಾ, ಆಧುನಿಕ ಕಾಲದಲ್ಲಿ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿವೆ. ಸ್ವಾರ್ಥಯಿಲ್ಲದ ನಿಲುವು ಕಷ್ಟಪಡದೇ ಸಿಗುವ ಹಣ ನಂಬಿಕೆಯಿಲ್ಲದ ಸಂಬಂಧ ಎಂದೆಂದಿಗೂ ಜೀವನದಲ್ಲಿ ತೃಪ್ತಿಯನ್ನು ಕೊಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.

    ಭಾರತ ಧರ್ಮ ಭೂಮಿಯಲ್ಲಿ ಹಲವಾರು ಧರ್ಮಗಳು ಮತ್ತು ಸಂಪ್ರದಾಯಗಳು ಬೆಳೆದುಕೊಂಡು ಬಂದಿವೆ. ಅವೆಲ್ಲ ಧರ್ಮಗಳ ಗುರಿ ಮಾನವ ಜೀವಾತ್ಮರನ್ನು ಉದ್ಧರಿಸುವ ಗುರಿ ಹೊಂದಿವೆ. ಮನುಷ್ಯ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಎಂದಿಗೂ ಮರೆಯಬಾರದು ಎಂದರು.

    ಬದುಕಿಗೆ ಭಗವಂತನ ಕೊಡುಗೆ ಅಪಾರವಾದುದು. ನಂಬಿ ನಡೆದ ಭಕ್ತನಿಗೆ ಕಲ್ಲು ಕೂಡಾ ದೇವರಾಗಿ ಕಾಣುತ್ತದೆ. ನಂಬಿಗೆ ಇಲ್ಲದವರಿಗೆ ಸಾಕ್ಷಾತ್ ದೇವರು ಪ್ರತ್ಯಕ್ಷನಾದರೂ ದೇವರ ಮಹಿಮೆ ಅರಿಯಲಾರ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬದುಕಿ ಬಾಳುವ ಜೀವಾತ್ಮರಿಗೆ ಜೀವನ ದರ್ಶನದ ಹತ್ತು ಅಮೂಲ್ಯವಾದ ಧರ್ಮ ಸೂತ್ರಗಳನ್ನು ಬೋಧಿಸಿದ್ದಾರೆ. ಅವರ ಆ ವಿಚಾರ ಧಾರೆಗಳು ಅಂದಿಗಷ್ಟೇ ಅಲ್ಲ ಇಂದಿಗೂ ಅನ್ವಯಿಸುತ್ತವೆ.

    ಇದನ್ನೂ ಓದಿ: ಡಾಲಿ ಕೈ ಹಿಡಿಯುವ ಡಾಕ್ಟರ್ ಚಿತ್ರದುರ್ಗದವರು | ಮುಂದುವರೆದ ಚಿತ್ರದುರ್ಗದ ಸಿನಿಮಾ ನಂಟು..

    ಮನಸ್ಸನ್ನು ನಿಯಂತ್ರಿಸುವ ಸಾಮಥ್ರ್ಯಯಿದ್ದರೆ ಬದುಕನ್ನು ಬದಲಾಯಿಸುವ ಸಾಮಥ್ರ್ಯ ನಮ್ಮಲ್ಲಿಯೇ ಇರುತ್ತದೆ. ಸಾಧನೆಯಿಂದ ಸಂತೋಷ ಸಿಗುತ್ತದೆ ಎಂದು ಹೇಳಲಾಗದು. ಆದರೆ ಸಂತೋಷವು ಸಾಧನೆಗೆ ದಾರಿಯಾಗುತ್ತದೆ ಎನ್ನುವುದು ಸತ್ಯ. ಮದ್ದೇರು ಗ್ರಾಮದ ಸಕಲ ಸದ್ಭಕ್ತರು ಪುರಾತನವಾದ ಈಶ್ವರ-ಬಸವಣ್ಣ ಜೋಡಿ ದೇವಸ್ಥಾನ ನಿರ್ಮಿಸಿ ಉದ್ಘಾಟಿಸುತ್ತಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು.

    devasthana opening cermony in madderu

    ಮದ್ದೇರಿನಲ್ಲಿ ದೇವಸ್ಥಾನ ಉದ್ಘಾಟನೆ

    ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮದ ದಿಕ್ಸೂಚಿ ಬಾಳಿಗೆ ಬಲವನ್ನು ತಂದು ಕೊಡುತ್ತದೆ. ಜೀವನದ ಆದರ್ಶ ಮೌಲ್ಯಗಳನ್ನು ಪರಿಪಾಲಿಸುವುದರಿಂದ ಸುಖ ಶಾಂತಿ ಪ್ರಾಪ್ತಿಯಗುತ್ತದೆ.

    ಶ್ರೀ ಜಗದ್ಗುರು ರೇಣುಕಾಚಾರ್ಯರು ತೋರಿದ ದಾರಿ ಕೊಟ್ಟ ಸಂದೇಶ ನಮ್ಮೆಲ್ಲರ ಬಾಳ ಬದುಕಿಗೆ ಶ್ರೇಯಸ್ಸನ್ನು ಉಂಟು ಮಾಡುತ್ತದೆ ಎಂದರು. ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ಜೀವನದಲ್ಲಿ ದೇವರು ಮತ್ತು ಮರಣ ಇದೆ ಎಂಬುದನ್ನು ಯಾರೂ ಮರೆಯಬಾರದು. ನಾವು ಮಾಡಿದ ಉಪಕಾರ ಪರರು ಮಾಡಿದ ಅಪಕಾರ ಮರೆತು ಬಾಳುವುದು ಮನಸ್ಸಿನ ನೆಮ್ಮದಿಗೆ ಕಾರಣವಾಗುತ್ತದೆ ಎಂದರು.

    ಇದನ್ನೂ ಓದಿ: ಇಸ್ಪೀಟ್ ಆಡುತ್ತಿದ್ದವರ ಬಂಧನ | ಚಿಕ್ಕಜಾಜೂರು ಪೊಲೀಸರ ಕಾರ್ಯಾಚರಣೆ

    ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮ ಉದಾತ್ತವಾದ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಜೀವನದ ಉನ್ನತಿಗೆ ಅಡಿಪಾಯವಾಗಿವೆ. ಸತ್ಯ ಶುದ್ಧ ಧರ್ಮ ಮಾರ್ಗದಲ್ಲಿ ನಡೆದು ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಬೇಕೆಂದರು.

    ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪಿ.ರಮೇಶ್, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ತಾಲೂಕ ಬಿಜೆಪಿ ಅಧ್ಯಕ್ಷ ಸಿದ್ದೇಶ್, ಮಾಜಿ ಜಿ.ಪಂ. ಅಧ್ಯಕ್ಷ ಶಿವಕುಮಾರ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದರು. ದೇವಸ್ಥಾನ ಸಮಿತಿ ಮುಖ್ಯಸ್ಥ ರಾಜಣ್ಣ ಇವರು ಪ್ರಾಸ್ತಾವಿಕ ಮಾತನಾಡಿದರು.

    ಇದನ್ನೂ ಓದಿ: ನಾಲ್ವರು ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ

    ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು. ಈಶ್ವರ ದೇವಸ್ಥಾನದ ಉದ್ಘಾಟನೆಗೆ ಹಲವು ಗ್ರಾಮಗಳಿಂದ ಹತ್ತಾರು ಗ್ರಾಮ ದೇವರುಗಳನ್ನು ಕರೆತರಲಾಗಿತ್ತು.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top