ಮುಖ್ಯ ಸುದ್ದಿ
ಯುಗಾದಿಯಲ್ಲಿ 4 ರಾಶಿಗೆ ರಾಜಯೋಗ | ಹಬ್ಬದ ಸಂಭ್ರಮದಲ್ಲಿ ಜೊತೆಯಾಗಲಿದೆ ಅದೃಷ್ಟ
CHITRADURGA NEWS | 9 APRIL 2024
ಚಿತ್ರದುರ್ಗ: ಯುಗಾದಿ ಎಂದರೆ ಸಾಕು ನವೋಲ್ಲಾಸ, ಸಂಭ್ರಮ, ಹೊಸ ಕನಸು..ಹೀಗೆ ಶುರುವಾಗುತ್ತದೆ ಪಯಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಪಂಚಾಂಗಕ್ಕೆ ಪೂಜೆ ಸಲ್ಲಿಸಿ ವರ್ಷಾರಂಭ ಮಾಡಲಾಗುತ್ತದೆ.
ಈ ಯುಗಾದಿ ಹಬ್ಬದಿಂದ 4 ರಾಶಿಯವರಿಗೆ ರಾಜಯೋಗ ಶುರುವಾಗಲಿದ್ದು, ಲಕ್ಷ್ಮೀದೇವಿಯ ಅನುಗ್ರಹದೊಂದಿಗೆ ಅದೃಷ್ಟವೂ ಜೊತೆಯಾಗಲಿದೆ. ನಾಲ್ಕು ರಾಶಿಯ ಜೀವನದಲ್ಲಿ ಹಣದ ಮಳೆ ಸುರಿಯಲಿದೆ.
ಯುಗಾದಿಯಲ್ಲಿ ಸರ್ವಾರ್ಧ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ಪ್ರೀತಿ ಯೋಗ ಮೂರು ಸಂಧಿಸಲಿವೆ. ಜ್ಯೋತಿಷ್ಯದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸುವ ಈ ಮೂರು ರಾಜಯೋಗಗಳು ಅನೇಕ ಅನುಕೂಲ ಮಾಡಲಿವೆ. ನಾಲ್ಕು ರಾಶಿಯವರಿಗೆ ಸಂಪತ್ತು ಹೆಚ್ಚುತ್ತದೆ, ಅಂದುಕೊಂಡ ಕಾರ್ಯಗಳೆಲ್ಲವೂ ನೆರವೇರುತ್ತವೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
ಕ್ಲಿಕ್ ಮಾಡಿ ಓದಿ: ಮೇ 14 ರಿಂದ ಉಚ್ಚಂಗಿ ಯಲ್ಲಮ್ಮ ಜಾತ್ರಾ ಮಹೋತ್ಸವ | ದೇವಿಗೆ ಹೊಸ ಬೆಳ್ಳಿ ಮುಖಪದ್ಮ
ಮೇಷ ರಾಶಿಯವರಿಗೆ ಇದು ಅತ್ಯಂತ ಅನುಕೂಲಕರ ಸಮಯ. ಲಕ್ಷ್ಮೀದೇವಿಯ ಕೃಪೆಯಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನೀವು ಬಹಳಷ್ಟು ಸಂಪತ್ತನ್ನು ಪಡೆಯುತ್ತೀರಿ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಲಾಭವಿರುತ್ತದೆ. ವ್ಯಾಪಾರ, ಪ್ರವಾಸಗಳು ಲಾಭದಾಯಕ. ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಬರೆಯುವ ವಿದ್ಯಾರ್ಥಿಗಳಿಗೆ ಜಯ ದೊರೆಯಲಿದೆ.
ಕ್ಲಿಕ್ ಮಾಡಿ ಓದಿ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ | ದೇಶದ ಅಭಿವೃದ್ಧಿ ದೃಷ್ಟಿಯಿಂದ ಎರಡು ಪಕ್ಷಗಳ ಸಮಾಗಮ
ಕ್ಲಿಕ್ ಮಾಡಿ ಓದಿ: ಲೋಕಸಭಾ ಚುನಾವಣೆಗೆ ಚಿಹ್ನೆ ಹಂಚಿಕೆ | ಯಾರಿಗೆ ಯಾವುದು ಸಿಕ್ತು | ಇಲ್ಲಿದೆ ನೋಡಿ ಪೂರ್ಣ ವಿವರ
ಸಿಂಹ ರಾಶಿಯ ಹೊಸ ವರ್ಷವು ಅವರಿಗೆ ಅಮೂಲ್ಯ ಕೊಡುಗೆಯನ್ನು ತರುತ್ತದೆ ಮತ್ತು ನಿರುದ್ಯೋಗಿಗಳಿಗೆ ಉತ್ತಮ ಸಂಬಳದೊಂದಿಗೆ ಉದ್ಯೋಗಾವಕಾಶಗಳು. ಈ ಅವಧಿಯು ನಿಮ್ಮ ವೃತ್ತಿಪರ ಜೀವನಕ್ಕೆ ಬಹಳ ಮಂಗಳಕರವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ನಿಮ್ಮ ಪತ್ನಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.
ಧನು ರಾಶಿಯವರ ಜೀವನದಲ್ಲಿ ಆರ್ಥಿಕ ಪ್ರಗತಿ ಕಾಣುತ್ತದೆ. ಈ ಸಮಯದಲ್ಲಿ ಉದ್ಯಮಿಗಳು ಮಾಡುವ ಹೂಡಿಕೆಯು ಭವಿಷ್ಯದಲ್ಲಿ ದೊಡ್ಡ ಲಾಭವನ್ನು ನೀಡುತ್ತದೆ. ಒಳ್ಳೆಯ ಸುದ್ದಿಯನ್ನು ತರುತ್ತದೆ. ನೆಮ್ಮದಿಯಿಂದ ಬದುಕು ನಿಮ್ಮದಾಗಲಿದೆ. ವೈವಾಹಿಕ ಜೀವನವು ಸಂತಸದಿಂದ ಕೂಡಿರುತ್ತದೆ. ಪತಿ-ಪತ್ನಿಯರ ನಡುವೆ ಪ್ರೀತಿ ಚಿಗುರುತ್ತದೆ.