ಹಿಂದೂಗಳ ಹೊಸ ವರ್ಷ ಯುಗಾದಿ | ಸಡಗರ ಸಂಭ್ರಮದ ಸಮ್ಮಿಲನ

ಚಂದ್ರ ದರ್ಶನ

CHITRADURGA NEWS | 31 MARCH 2025

ಚಿತ್ರದುರ್ಗ: ಹಿಂದುಗಳ ಪಾಲಿನ ಹೊಸ ವರ್ಷ ಯುಗಾದಿ ಹಬ್ಬ ಸಂಭ್ರಮದಿoದ ನಡೆಯಿತು. ಬಿರು ಬಿಸಿಲಿನಲ್ಲೂ ವರ್ಷಾರಂಭದಲ್ಲಿ ಎಣ್ಣೆ ಸ್ನಾನದೊಂದಿಗೆ ಹಬ್ಬ ಸೋಮವಾರ ಸಂಜೆ ಚಂದ್ರದರ್ಶನದ ಮೂಲಕ ಸಂಪನ್ನವಾಯಿತು.

Also Read: ಯುಗಾದಿ ಹಬ್ಬ | ಶ್ರೀ ನೀಲಕಂಠೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ

ಹಳ್ಳಿ ಹಳ್ಳಿಗಳಲ್ಲೂ ಯುವಕರು, ಮಕ್ಕಳು ಮೈ ತುಂಬಾ ಎಣ್ಣೆ ಹಚ್ಚಿಕೊಂಡು ಓಡಾಡುತ್ತಿದ್ದರು. ಮಧ್ಯಾಹ್ನದ ನಂತರ ಸ್ನಾನ ಮಾಡಿ ದೇವರ ಪೂಜೆ, ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಹೊಸ ಸಂವತ್ಸರವನ್ನು ಸ್ವಾಗತಿಸಿದರು.

ಇನ್ನೂ ಸೋಮವಾರ ಎರಡನೇ ಹಬ್ಬ ಚಂದ್ರ ದರ್ಶನವೂ ಸಂಭ್ರಮದಿoದ ನಡೆಯಿತು. ಸಂಜೆಯಾಗುತ್ತಲೇ ಎಲ್ಲರ ದೃಷ್ಟಿ ಆಗಸದತ್ತ ನೆಟ್ಟಿತ್ತು.

6 ಗಂಟೆ ಸುಮಾರಿಗೆ ಸಣ್ಣ ಗೆರೆಯಂತೆ ಚಂದ್ರ ದರ್ಶನವಾಗುತ್ತಲೇ ಕೈ ಮುಗಿದು, ತಂದೆ, ತಾಯಿ, ಹಿರಿಯರ ಆಶೀರ್ವಾದ ಪಡೆದುಕೊಳ್ಳುವ ದೃಶ್ಯಗಳು ಎಲ್ಲೆಲ್ಲೂ ಕಂಡು ಬಂದವು.

Also Read: 2 ಅಂಗಡಿಗೆ ಆಕಸ್ಮಿಕ ಬೆಂಕಿ | ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಚಂದ್ರದರ್ಶನ ಆಗುತ್ತಿದ್ದಂತೆ ಎಲ್ಲರೂ ದೇವಸ್ಥಾನಗಳತ್ತ ದೌಡಾಯಿಸಿದರು. ದೇವಸ್ಥಾನಗಳಲ್ಲಿ ಜನವೋ ಜನ ಎನ್ನುವಂತೆ ತುಂಬಿ ತುಳುಕಿದವು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

Share This Article
Leave a Comment

Leave a Reply

Your email address will not be published. Required fields are marked *

Exit mobile version