ಮುಖ್ಯ ಸುದ್ದಿ
ಹಸುವಿನ ಕೆಚ್ಚಲು ಕತ್ತರಿಸಿದವರ ವಿರುದ್ಧ ನಾಳೆ ಚಿತ್ರದುರ್ಗದಲ್ಲಿ ಪ್ರತಿಭಟನೆ
CHITRADURGA NEWS | 19 JANUARY 2025
ಚಿತ್ರದುರ್ಗ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕತ್ತರಿಸಿ ವಿಕೃತಿ ಮೆರೆದ ದುಷ್ಟರ ಅಮಾನವೀಯ ಕೃತ್ಯವನ್ನು ಖಂಡಿಸಿ ಗೋ ಸಂರಕ್ಷಣ ಸಂವರ್ಧನ ಸಮಿತಿ – ಚಿತ್ರದುರ್ಗ ವತಿಯಿಂದ ಜನವರಿ 20(ನಾಳೆ) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
Also Read: 13ನೇ ಶರಣ ಸಾಹಿತ್ಯ ಸಮ್ಮೇಳನ | ಕೋಟೆ ನಾಡಲ್ಲಿ ವಿದ್ಯುಕ್ತ ಚಾಲನೆ | ಯಾರು ಏನು ಹೇಳಿದ್ರು ?
ಹಸುವಿನ ಕೆಚ್ಚಲು ಕತ್ತರಿಸಿದ ರಾಕ್ಷಸರಿಗೆ ಉಗ್ರ ಶಿಕ್ಷೆಯನ್ನು ನೀಡಿ ಗೋಸಂಕುಲವನ್ನು ಸಂರಕ್ಷಿಸಲು ಕಠಿಣ ಕಾನೂನನ್ನು ಜಾರಿಗೆ ಆಗ್ರಹಿಸಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ಆನೆ ಬಾಗಿಲಿನಿಂದ ಒನಕೆ ಓಬವ್ವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಗೋ ಪೂಜೆ ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು, ಗೋ ಪ್ರೇಮಿಗಳು ಭಾಗವಹಿಸಲು ಗೋ ಸಂವರ್ಧನಾ ಸಂರಕ್ಷಣಾ ಸಮಿತಿ ಮನವಿ ಮಾಡಿದೆ.
Also Read: ಮೋಟಾರ್ ಪಂಪ್, ಕೇಬಲ್ ಕಳ್ಳನ ಬಂಧನ