ಮುಖ್ಯ ಸುದ್ದಿ
ಕೊಲ್ಕತ್ತಾದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಸಭೆ | ಸಂಸದ ಗೋವಿಂದ ಕಾರಜೋಳ ಭಾಗೀ
CHITRADURGA NEWS | 20 JANUARY 2025
ಚಿತ್ರದುರ್ಗ: ಕೊಲ್ಕತ್ತಾದಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಸಂಸದರಾದ ಗೋವಿಂದ ಎಂ ಕಾರಜೋಳ ಭಾಗವಹಿಸಿದ್ದರು.
Also Read: ಇಂದಿನ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಧಾರಣೆ
ಪರಿಶಿಷ್ಟ ಜಾತಿ, ಪಂಗಡಗಳ ಕ್ಷೇಮಾಭಿವೃದ್ದಿ ಸಂಸದೀಯ ಸಮಿತಿಯ ಅಧ್ಯಯನ ಪ್ರವಾಸವು ದಿನಾಂಕ 17 ಜನವರಿಯಿಂದ 22 ರವರೆಗೆ ರಾಂಚಿ, ಕೊಲ್ಕತ್ತಾ, ಮತ್ತು ರಾಯ್‌ಪುರದಲ್ಲಿ ಏರ್ಪಡಿಸಲಾಗಿತ್ತು.
ಸಂಸದರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರಿಗೆ ವಿವಿಧ ಕಂಪನಿಗಳು, ಇಲಾಖೆಗಳು ತಗೆದುಕೊಂಡಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧಿಕಾರಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿ, ಶಿಕ್ಷಣ, ಮೀಸಲಾತಿ, ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಮೀಸಲಾತಿ ಹೊಂದಿರುವ ಹುದ್ದೆಗಳ ಕುರಿತು ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ಫಗ್ಗನ್ ಸಿಂಗ್ ಕುಲಸ್ತೆ ಅವರು ಅಧ್ಯಕ್ಷತೆ ವಹಿಸಿದ್ದರು.
Also Read: ಮಾರುಕಟ್ಟೆ ಧಾರಣೆ | ಇಂದಿನ ಶೇಂಗಾ, ತೊಗರಿಕಾಳು ರೇಟ್ ಎಷ್ಟಿದೆ?
ಪೂರ್ವ ವಲಯ ರೈಲ್ವೆ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳು, ಕೋಲ್ ಇಂಡಿಯಾ ಕಂಪನಿಯ ಎಸ್ಸಿ, ಎಸ್ಟಿ ಅಧಿಕಾರಿಗಳು, ಪಂಜಾಬ್ ನ್ಯಾಷನಲ್ ಬ್ಯಾಂಕಿನ ಎಸ್ಸಿ, ಎಸ್ಟಿ ಅಧಿಕಾರಿಗಳು, ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಿರಿಯ ಅಧಿಕಾರಿಗಳು, ಸಮಿತಿಯ ಇತರೆ ಲೋಕಸಭಾ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.