ಮುಖ್ಯ ಸುದ್ದಿ
ಜಕಾತಿ ಶುಲ್ಕ ಕಡಿಮೆ ಮಾಡುವಂತೆ |ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ
CHITRADURGA NEWS | 22 FEBRUARY 2024
ಚಿತ್ರದುರ್ಗ :ತರಕಾರಿ ಮಾರುಕಟ್ಟೆಯಲ್ಲಿ ಜಕಾತಿ ಶುಲ್ಕ ಕಡಿಮೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಗರಸಭೆ ಎದುರು ಗುರುವಾರ ಪ್ರತಿಭಟನೆ ನಡೆಸಿ ವ್ಯವಸ್ಥಾಪಕಿ ಮಂಜುಳರವರಿಗೆ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಭಾರ್ಗವಿ ದ್ರಾವಿಡ್ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ
ರೈತರು ಮಾರುಕಟ್ಟೆಗೆ ಹೂವು, ಹಣ್ಣು, ತರಕಾರಿ, ಸೊಪ್ಪುಗಳನ್ನು ದಿನನಿತ್ಯವು ತರುತ್ತಾರೆ. ನಗರಸಭೆಯವರು ದುಬಾರಿ ಜಕಾತಿ ವಸೂಲು ಮಾಡುತ್ತಿದ್ದು, ಮೊದಲೆ ಬರಗಾಲದಲ್ಲಿ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಇದನ್ನೂ ಓದಿ: ಜಗದೊಡೆಯ ತಿಪ್ಪೇಶನ ಮಹಾರಥೋತ್ಸವ ವೈಭವಕ್ಕೆ ದಿನಗಣನೆ| 24 ರಂದು ಪೂರ್ವಸಿದ್ದತಾ ಸಭೆ
ನಗರದ ಹೊರ ವಲಯ ಚಳ್ಳಕೆರೆ ಬೈಪಾಸ್ ಸಮೀಪ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಚಳ್ಳಕೆರೆ, ಬೆಂಗಳೂರು, ಹಿರಿಯೂರು ಕಡೆ ಪ್ರಯಾಣಿಸುವವರು ಇಲ್ಲಿ ಶೌಚಾಲಯವಿಲ್ಲದ ಪರದಾಡುವಂತಾಗಿದೆ.
ರೈತರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳಿಗೂ ತೊಂದರೆಯಾಗುತ್ತಿದೆ. ನಗರಸಭೆಯವರು ಇತ್ತ ಗಮನ ಹರಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಇದನ್ನೂ ಓದಿ: ಪ್ರಭಾವಿ ಮಠಮಾನ್ಯಗಳಿಗೆ ಮಾತ್ರ ಅನುದಾನ| ಸರ್ಕಾರ ನಡೆಗೆ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ಅಸಮಾಧಾನ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೋಲಾಕ್ಷಮ್ಮ, ತಾಲ್ಲೂಕು ಅಧ್ಯಕ್ಷೆ ಪವಿತ್ರ ಬಿ.ಕೆ. ನಗರ ಘಟಕದ ಅಧ್ಯಕ್ಷೆ ಮಂಜುಳ, ಜಯಲಕ್ಷ್ಮಿ ಎನ್. ವಿಜಯಮ್ಮ, ರುದ್ರಮ್ಮ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ನಾಗರಾಜ, ಮಂಜುನಾಥ, ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.