ಮುಖ್ಯ ಸುದ್ದಿ
ಭಾರ್ಗವಿ ದ್ರಾವಿಡ್ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ
CHITRADURGA NEWS | 22 FEBRUARY 2024
ಚಿತ್ರದುರ್ಗ: ಚಿತ್ರದುರ್ಗದ ಯುವ ನಾಯಕಿ ಭಾರ್ಗವಿ ದ್ರಾವಿಡ್ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದಾರೆ.
ಫೆಬ್ರವರಿ 22 ರಂದು ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾರ್ಗವಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಜಗದೊಡಯ ತಿಪ್ಪೇಶನ ಮಹಾರಥೋತ್ಸವ ವೈಭವಕ್ಕೆ ದಿನಗಣನೆ
ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜ್ ಈ ಆಯ್ಕೆ ಮಾಡಿದ್ದು, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಭಾರ್ಗವಿ ದ್ರಾವಿಡ್ ಅವರಿಗೆ ನಿಯುಕ್ತಿ ಮಾಡಿರುವ ಪತ್ರ ನೀಡಿದ್ದಾರೆ.
ಮೂಲತಃ ಎಬಿವಿಪಿ ಕಾರ್ಯಕರ್ತೆಯಾಗಿ ಜಿಲ್ಲೆ, ರಾಜ್ಯ ಮಟ್ಟದ ಜವಾಬ್ದಾರಿ ನಿರ್ವಹಿಸಿದ್ದ ಭಾರ್ಗವಿ, ಕಳೆದ ಅವಧಿಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ್ದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ದಿನಗಣನೆ | ಚಿತ್ರದುರ್ಗದಲ್ಲಿ ಶುರುವಾಯ್ತು ಟಿಕೇಟ್ ಅಂದರ್-ಬಾಹರ್ ಆಟ