Connect with us

ಮುದ್ರಣ ಮಾಧ್ಯಮ ಅಪಾಯದಲ್ಲಿದೆ | ಕೆ.ವಿ.ಪ್ರಭಾಕರ್ | ಸುಭಾಷ್ ಹೂಗಾರ್

Kendhuli magazine 200 edition release

ಮುಖ್ಯ ಸುದ್ದಿ

ಮುದ್ರಣ ಮಾಧ್ಯಮ ಅಪಾಯದಲ್ಲಿದೆ | ಕೆ.ವಿ.ಪ್ರಭಾಕರ್ | ಸುಭಾಷ್ ಹೂಗಾರ್

CHITRADURGA NEWS | 12 JANUARY 2025

ಚಿತ್ರದುರ್ಗ: ಹಿರಿಯ ಪತ್ರಕರ್ತ ತುರುವನೂರು ಮಂಜುನಾಥ್ ಅವರ ಸಂಪಾದಕತ್ವದ ಕೆಂಧೂಳಿ ವಾರ ಪತ್ರಿಕೆಯ 200ನೇ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಭಾನುವಾರ ನಡೆಯಿತು.

ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು ಕೆಂಧೂಳಿಯ 200ನೇ ಸಂಚಿಕೆ ಲೋಕಾರ್ಪಣೆ ಮಾಡಿದರು.

ಇದನ್ನೂ ಓದಿ: ಏಕಲವ್ಯ ಮಾದರಿ ಶಾಲೆಯಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಇದೇ ವೇಳೆ ಕೆಂಧೂಳಿ ಪತ್ರಿಕೆಯ ಡಿಜಿಟಲ್ ಮೀಡಿಯಾವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಉದ್ಘಾಟಿಸಿದರು. ಹಿರಿಯ ಪತ್ರಕರ್ತರಾದ ಸುಭಾಷ್ ಹೂಗಾರ್, ಆರ್.ಜಿ.ಹಳ್ಳಿ ನಾಗರಾಜ್, ಲಕ್ಷ್ಮೀನಾರಾಯಣ, ನರೇನಹಳ್ಳಿ ಅರುಣ್‍ಕುಮಾರ್, ಎಚ್.ಲಕ್ಷ್ಮಣ್ ಸಾಕ್ಷಿಯಾದರು.

ಈ ವೇಳೆ ತಮ್ಮ ಅಭಿಪ್ರಾಯ ಹಂಚಿಕೊಂಡ ಕೆ.ವಿ.ಪ್ರಭಾಕರ್, ಸ್ವಾತಂತ್ರ್ಯ ನಂತರ ಅಭಿವೃದ್ಧಿ ಪತ್ರಿಕೋದ್ಯಮ ಅಸ್ತಿತ್ವಕ್ಕೆ ಬಂದಿತ್ತು. ಆನಂತರ ತನಿಖಾ ಪತ್ರಿಕೋದ್ಯಮ ಸೇರಿದಂತೆ ಅನೇಕ ಆಯಾಮಗಳು ಸೇರ್ಪಡೆಯಾದವು. ಪತ್ರಿಕೆಗಳ ವರದಿ ಕಾರಣಕ್ಕೆ ಸರ್ಕಾರಗಳೇ ಬಿದ್ದು ಹೋದವು.

ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

ಆದರೆ, ಇಂದು ಹೇಳಿಕೆಗಳ ಆಧಾರದಲ್ಲಿ ಪತ್ರಿಕೋದ್ಯಮ ನಡೆಯುತ್ತಿದೆ. ಜನರ ಅಭಿಪ್ರಾಯಕ್ಕೆ ಜಾಗವೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಪತ್ರಿಕೆಗಳು ಆತಂಕದ ಸ್ಥಿತಿಯಲ್ಲಿವೆ. ಪತ್ರಿಕೆ ನಡೆಸುವುದು ಕಷ್ಟವಾಗಿದೆ. ಎಐ ಕಾಲಘಟ್ಟದಲ್ಲಿ ಸಾಕಷ್ಟು ಸವಾಲುಗಳು ಎದುರಾಗಿವೆ ಎಂದರು.

ದೃಶ್ಯ ಮಾಧ್ಯಮಗಳಲ್ಲಿ ಇಂದು ಹೇಗೆ ಸುದ್ದಿ ಬರುತ್ತಿದೆ ಎನ್ನುವುದು ಎಲ್ಲರಿಗೂ ಅರ್ಥವಾಗಿದೆ. ಸುದ್ದಿಗಳನ್ನು ಮನರಂಜನೆಯಂತೆ ನೋಡಲಾಗುತ್ತಿದೆ. ಅಲ್ಲಿ ನೋಡುಗರ ಅಭಿಪ್ರಾಯಗಳಿಗೆ ಜಾಗವೇ ಇಲ್ಲದಂತಾಗಿದೆ. ನೋಡುಗರ ಆಲೋಚನೆ ಅರ್ಥ ಮಾಡಿಕೊಂಡು ಪೂರಕ ಸುದ್ದಿಗಳನ್ನು ಕೊಡುವಂತಾಗಲಿ ಎಂದರು.

ಇದನ್ನೂ ಓದಿ: ಜೇನುತುಪ್ಪಕ್ಕೆ ಬ್ರ್ಯಾಂಡ್ ಅಳವಡಿಕೆ | ಮಾರಾಟ ಇನ್ನುಷ್ಟು ಸುಲಭ

25 ವರ್ಷಗಳ ಹಿಂದೆ ಕೋಲಾರದಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಹೇಳುತ್ತಾ, ಮಾಧ್ಯಮ ಸ್ವರೂಪ ಬದಲಾಗಿರುವುದನ್ನು ಕೆ.ವಿ.ಪ್ರಭಾಕರ್ ವಿವರಿಸಿದರು.

ಹಿರಿಯ ಪತ್ರಕರ್ತ ಸುಭಾಷ್ ಹೂಗಾರ್ ಮಾತನಾಡುತ್ತಾ, 2014ರ ನಂತರ ಭಾರತದಲ್ಲಿ ಪತ್ರಿಕೆಯನ್ನು ಮುದ್ರಿಸುವ ನ್ಯೂಸ್‍ಪ್ರಿಂಟ್‍ಗೆ ತೆರಿಗೆ ಹಾಕಲು ಪ್ರಾರಂಭಿಸಲಾಯಿತು. ಇದರಿಂದಾಗಿ ಇಂದು ನ್ಯೂಸ್‍ಪ್ರಿಂಟ್ ದರ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದರು.

ಇದನ್ನೂ ಓದಿ: ST ಪಟ್ಟಿಗೆ ಕಾಡುಗೊಲ್ಲ ಸಮುದಾಯ | ಅನುಸರಣ ವರದಿ ಶೀಘ್ರ ಕೇಂದ್ರಕ್ಕೆ | CM ಭರವಸೆ 

ಭಾರತದ ನ್ಯೂಸ್‍ಪ್ರಿಂಟ್ ಗುಣಮಟ್ಟ ಕಡಿಮೆ ಎಂಬ ಕಾರಣಕ್ಕೆ ರಷ್ಯಾ ಮತ್ತಿತರೆ ದೇಶಗಳಿಂದ ಭಾರತದ ಪತ್ರಿಕೆಗಳು ನ್ಯೂಸ್‍ಪ್ರಿಂಟ್ ಆಮದು ಮಾಡಿಕೊಳ್ಳುತ್ತವೆ. ಒಂದು ವೇಳೆ ಭಾರತದಲ್ಲೇ ನ್ಯೂಸ್‍ಪ್ರಿಂಟ್ ಖರೀಧಿಸುವುದಾದರೆ ಪ್ರತಿ ದಿನ 600 ಎಕರೆ ಅರಣ್ಯ ನಾಶ ಮಾಡಬೇಕಾಗುತ್ತದೆ. ಈ ಸ್ಥಿತಿ ಭಾರತಕ್ಕೆ ಕಷ್ಟ ಎಂದು ಹೇಳಿದರು.

ಇಂದು ಪತ್ರಿಕೆ ನಡೆಸುವವರಿಗೆ ಅವರದ್ದೇ ಆದ ಹಿತಾಸಕ್ತಿ ಇವೆ. ಪತ್ರಿಕಾ ವೃತ್ತಿ ಇತರೆ ವೃತ್ತಿಗಳಂತೆ ಅಲ್ಲ. ಲಾಭ ನೋಡುವ ಉದ್ಯಮವಾದಾಗ ಆಗಬಹುದಾದ ಸಮಸ್ಯೆ ಇಂದು ಕಾಣಿಸುತ್ತಿವೆ. ಪತ್ರಿಕೋದ್ಯಮದ ಮೂಲ ಆಶಯಗಳು ಉಳಿದುಕೊಂಡಾಗ ಮಾತ್ರ ಘನತೆ ಇರುತ್ತದೆ. ಈಗ ಎಐ ಸಾಕಷ್ಟು ಪತ್ರಕರ್ತರ ವೃತ್ತಿಗೆ ಅಪಾಯ ತಂದೊಡ್ಡಿದೆ ಎಂದರು.

ಇದನ್ನೂ ಓದಿ: 16. ಬಡಗಿ ಕಂಡ ಗೌನಳ್ಳಿ

ಮುದ್ರಣ ಮಾಧ್ಯಮಕ್ಕೆ ಒಂದು ಘನತೆ ಇದೆ. ಆದರೆ, ಕ್ರಮೇಣ ಘನತೆ ಅದನ್ನು ಕಳೆದುಕೊಳ್ಳುವ ಹಾದಿ ಹಿಡಿದಿವೆ. ಎಲ್ಲದಕ್ಕೂ ಲಾಭದ ದೃಷ್ಟಿ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಎಲೆಕ್ಟ್ರಾನಿಕ್ ಮಾಧ್ಯಮ ಬಹಳ ತಡವಾಗಿ ಆರಂಭವಾಗಿ ಬೇಗ ಸತ್ತು ಹೋಗುತ್ತಿದೆ. ಟಿವಿಗಳಲ್ಲಿ ನ್ಯೂಸ್ ನೋಡುವವರ ಸಂಖ್ಯೆ ಕಡಿಮೆ ಆಗಿದೆ. ನೋಡಿದವರು ಸುದ್ದಿಗಳನ್ನು ನಂಬುವವರ ಸಂಖ್ಯೆ ಕಡಿಮೆ. ಟಿವಿಗಳಲ್ಲಿ ಮನೊರಂಜನಾ ಕಾರ್ಯಕ್ರಮ ನೋಡುವವರೇ ಹೆಚ್ಚು ಎಂದರು.

ಜಾಗತೀಕರಣದ ನಂತರ ನಂತರ ಪತ್ರಿಕೆಗಳ ಸ್ವರೂಪ ಬದಲಾಗಿದೆ. ಪತ್ರಿಕೆಗಳಲ್ಲಿನ ಜಾಹೀರಾತು ಊಟದ ಜೊತೆಗಿನ ಉಪ್ಪಿನಕಾಯಿ ಮಾದರಿಯಲ್ಲಿತ್ತು. ಆದರೆ, ಈಗ ಸುದ್ದಿಯ ರೂಪದಲ್ಲೇ ಜಾಹೀರಾತು ಪ್ರಕಟವಾಗುತ್ತಿದೆ. ಓದುಗರಿಗೆ ಸುದ್ದಿ, ಜಾಹೀರಾತು ಯಾವುದು ಎನ್ನುವ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಿದರು.

ಜಾತಿ ವಿನಾಶ ಸಾಧ್ಯವಿಲ್ಲ | ಬಿ.ಎಲ್.ವೇಣು:

ರಾಜಕಾರಣಿಗಳು ಹಾಗೂ ಮಠಾಧೀಶರು ಇರುವವರೆಗೆ ಜಾತಿ ನಾಶ ಸಾಧ್ಯವಿಲ್ಲ. ಒಬ್ಬರು ನೀರು ಹಾಕಿದರೆ ಮತ್ತೊಬ್ಬರು ಗೊಬ್ಬರ ಹಾಕಿ ಬೆಳೆಸುತ್ತಿದ್ದಾರೆ ಎಂದು ಖ್ಯಾತ ಕಾದಂಬರಿಕಾರ ಡಾ.ಬಿ.ಎಲ್.ವೇಣು ಕಿಡಿಕಾರಿದರು.

ಸ್ವಾಮಿಜಿಯೊಬ್ಬರು ಸಂವಿಧಾನ ಗೌರವಿಸಲ್ಲ ಎಂದರೆ, ಮತ್ತೊಬ್ಬರು ಮುಸ್ಲೀಮರ ಮತದಾನದ ಹಕ್ಕು ತೆಗೆಯಬೇಕು ಎನ್ನುತ್ತಾರೆ. ಸಾತ್ವಿಕತೆ, ನೈತಿಕತೆ ಬಿಟ್ಟಿದ್ದಾರೆ ಎಂದರು.

ಇದನ್ನೂ ಓದಿ: ಕೋಡಿ ಬಿತ್ತು ವಿವಿ ಸಾಗರ‌ | 118 ವರ್ಷಗಳ ಇತಿಹಾಸದಲ್ಲಿ 3ನೇ ಬಾರಿ‌ ದಾಖಲೆ

ಇಂದು ಪತ್ರಿಕೆ ನಡೆಸುವುದು ಹುಡುಗಾಟದ ಮಾತಲ್ಲ. ಒದುಗರು ಕಡಿಮೆ ಆಗುತ್ತಿದ್ದಾರೆ, ನೋಡುವುದು, ಕೇಳುವುದು ಹೆಚ್ಚಾಗಿದೆ. ಪುಸ್ತಕ ಹಿಡಿಯಬೇಕಾದ ಕೈಯಲ್ಲಿ ಮೊಬೈಲ್ ಬಂದಿದೆ. ಮುದ್ರಣ ಮಾಧ್ಯಮಗಳಿಗೆ ಇರುವ ಬದ್ಧತೆ ಟಿವಿ ಮಾಧ್ಯಮಗಳಿಗೆ ಇಲ್ಲ. ಕೆಲ ಮಾಧ್ಯಮಗಳು ಪಕ್ಷಗಳಿಗೆ ತುತ್ತೂರಿಯಂತೆ ಕೆಲಸ ಮಾಡುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಲಂಕೇಶ್ ಪತ್ರಿಕೆಯಂತೆಯೇ ಜಾಹೀರಾತುಗಳಿಲ್ಲದೆ ಕೆಂಧೂಳಿ ಪತ್ರಿಕೆ ನಡೆದು ಬರುತ್ತಿದೆ. ತುರುವನೂರು ಮಂಜುನಾಥ್ ಸಾಕಷ್ಟು ಪರಿಶ್ರಮ ಹಾಕಿ ಉತ್ತಮವಾಗಿ ಪತ್ರಿಕೆ ನಡೆಸುತ್ತಿದ್ದಾರೆ. ಹೊಸ ವರ್ಷದಿಂದ ಕೆಂಧೂಳಿ ಭ್ರಷ್ಟರು, ವಂಚಕರ ಧೂಳು ಜಾಢಿಸುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಜ.14 ರಂದು ಮೇದೆಹಳ್ಳಿಯ ಶ್ರೀ ಅಯ್ಯಪ್ಪಸ್ವಾಮಿ ಲಕ್ಷ ದೀಪೋತ್ಸವ

ಸಾಹಿತಿ, ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್, ಕೋವಿಡ್ ಸಂದರ್ಭದಲ್ಲಿ ಪತ್ರಿಕೆಗಳ ಬಗ್ಗೆ ಅಪಪ್ರಚಾರ ನಡೆಯಿತು. ಅಂದಿನಿಂದ ಪತ್ರಿಕೆಗಳ ಪ್ರಸರಣ ಕುಸಿಯತೊಡಗಿತು. ಪುಟಗಳು ಕಡಿಮೆಯಾದವು. ಓದುಗರಿಗೆ ಜ್ಞಾನ ಉಣಬಡಿಸುತ್ತಿದ್ದ ಪುರವಣಿಗಳು ಕಣ್ಮರೆಯಾಗಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version