Connect with us

ST ಪಟ್ಟಿಗೆ ಕಾಡುಗೊಲ್ಲ ಸಮುದಾಯ | ಅನುಸರಣ ವರದಿ ಶೀಘ್ರ ಕೇಂದ್ರಕ್ಕೆ | CM ಭರವಸೆ 

Home Office in Siddaramaiah

ಮುಖ್ಯ ಸುದ್ದಿ

ST ಪಟ್ಟಿಗೆ ಕಾಡುಗೊಲ್ಲ ಸಮುದಾಯ | ಅನುಸರಣ ವರದಿ ಶೀಘ್ರ ಕೇಂದ್ರಕ್ಕೆ | CM ಭರವಸೆ 

CHITRADURGA NEWS | 11 JANUARY 2025

ಚಿತ್ರದುರ್ಗ: ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಡತದ ಅನುಸರಣ ವರದಿಯನ್ನು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Also Read: ಪೊಲೀಸ್ ಕ್ರಿಕೆಟ್ ಕಪ್ | ಸಚಿವ ಡಿ.ಸುಧಾಕರ್ ಚಾಲನೆ

ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ನೇತೃತ್ವದಲ್ಲಿ ಜ.10 ರಂದು ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ.ಶಿವುಯಾದವ್, ತುಮಕೂರು ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಚಂಗಾವರದ ಕರಿಯಪ್ಪ ಮತ್ತಿತರೆ ಮುಖಂಡರು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಿದರು.

ನಮ್ಮ ಸರ್ಕಾರವು ಕಾಡುಗೊಲ್ಲರನ್ನು ಗುರುತಿಸಿ ಕುಲಶಾಸ್ತç ಅಧ್ಯಯನ ವರದಿಯನ್ನು ಅಂಗೀಕರಿಸಿ ಭಾರತ ಸರ್ಕಾರಕ್ಕೆ ಕಳುಹಿಸಿ ಸುಮಾರು 9-10ವರ್ಷಗಳಾಗಿವೆ.

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಎಲ್ಲಾ ಗುಣಲಕ್ಷಣಗಳಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಬಿಜೆಪಿ ಸರ್ಕಾರಕ್ಕೆ ಕಾಡುಗೊಲ್ಲರನ್ನು ಎಸ್.ಟಿ ಪಟ್ಟಿಗೆ ಸೇರಿಸುವ ಇಚ್ಛಾಶಕ್ತಿ ಇಲ್ಲ ಎಂದು ಹೇಳಿದ್ದಾರೆ.

Also Read: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

ಎಲ್ಲರ ಸಲಹೆಯಂತೆ ಅನುಸರಣ ವರದಿಯನ್ನು ಶೀಘ್ರದಲ್ಲಿಯೇ ಭಾರತ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಸಿ.ಶಿವುಯಾದವ್, 2010ರಲ್ಲಿ ಸರ್ಕಾರವು ಕಾಡುಗೊಲ್ಲರ ಕುಲಶಾಸ್ತç ಅಧ್ಯಯನ ನಡೆಸಿ 2014ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನವಶಾಸ್ತçಜ್ಞರಾದ ಡಾ.ಅನ್ನಪೂರ್ಣಮ್ಮ ಅವರ ವರದಿಯನ್ನು ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಅನುಮೋದಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಭಾರತ ಸರ್ಕಾರ 2014ರಿಂದ 2025ರವರೆಗೆ ಅನಾವಶ್ಯಕ ಪ್ರಶ್ನೆಗಳನ್ನು ಎತ್ತಿ ಮೂರು ಬಾರಿ ಕರ್ನಾಟಕ ಸರ್ಕಾರಕ್ಕೆ ಅನುಸರಣ ವರದಿ ಕೇಳಿದೆ. ಈಗಾಗಲೇ ಎರಡು ಸಲ ಅನುಸರಣ ವರದಿ ಕಳುಹಿಸಿದ್ದರು, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಲಾಗುತ್ತಿದೆ.

ಮೀಸಲಾತಿ ವಿರೋಧಿಯಾದ ಕೇಂದ್ರ ಸರ್ಕಾರವು ಕಾಡುಗೊಲ್ಲರಿಗೆ ಎಸ್.ಟಿ ಪಟ್ಟಿಗೆ ಸೇರುವ ಎಲ್ಲಾ ಬುಡಕಟ್ಟು ಲಕ್ಷಣಗಳಿದ್ದರೂ, ಕಾಡುಗೊಲ್ಲರನ್ನು ಎಸ್‌ಟಿಗೆ ಸೇರಿಸಲು ಮೀನಾಮೇಶ ಎಣಿಸುತ್ತಿರುವುದು ದುರಾದೃಷ್ಟಕರ ಎಂದು ಶಿವುಯಾದವ್ ತಿಳಿಸಿದ್ದಾರೆ.

Also Read: ಏಕಲವ್ಯ ಮಾದರಿ ಶಾಲೆಯಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಮಾತನಾಡಿ, ರಾಜ್ಯದ ಎಲ್ಲಾ ಕಾಡುಗೊಲ್ಲ ಸಂಘಟನೆಗಳ ಮುಖಂಡರ ಒತ್ತಾಯದ ಮೇರೆಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ.

ಕರ್ನಾಟಕದ ಕಾಡುಗೊಲ್ಲರು ಸಮಾಜದ ಮುಖ್ಯವಾಹಿನಿಯಿಂದ ಬಹುದೂರ ಉಳಿದಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಬೇಕೆಂದರೆ ಕೂಡಲೇ ಎಸ್‌ಟಿ ಪಟ್ಟಿಗೆ ಸೇರಿಸಬೇಕು. ಕಾಡುಗೊಲ್ಲರನ್ನು ಅಲೆಮಾರಿ ಪಟ್ಟಿಗೆ ಸೇರಿಸಿ ಸರ್ಕಾರದ ಸೌಲಭ್ಯಗಳನ್ನು ಹಂಚಿಕೆ ಮಾಡಬೇಕು. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಈ ಕೂಡಲೇ ಕಾಡುಗೊಲ್ಲರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದರು.

ಚಂಗಾವರದ ಕರಿಯಪ್ಪ ಮಾತನಾಡಿ, ಎಸ್‌ಟಿ ಸೇರ್ಪಡೆ ಕಡತ ನನೆಗುದಿಗೆ ಬಿದ್ದಿರುವುದು ವಿಪರ್ಯಾಸ. ಕಾಡುಗೊಲ್ಲರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಹಿಂದುಳಿದವರಾಗಿದ್ದಾರೆ.

Also Read: ಕೋಡಿ ಬಿತ್ತು ವಿವಿ ಸಾಗರ‌ | 118 ವರ್ಷಗಳ ಇತಿಹಾಸದಲ್ಲಿ 3ನೇ ಬಾರಿ‌ ದಾಖಲೆ

ತಾವುಗಳು ಕಾಡುಗೊಲ್ಲರಿಗೆ ಎಲ್ಲಾ ಶಕ್ತಿಗಳನ್ನು ಕೊಟ್ಟು ಮುನ್ನಡೆಸಬೇಕು, ಈಗಾಗಲೇ ಅನ್ನಪೂರ್ಣಮ್ಮನವರು ಸರ್ಕಾರಕ್ಕೆ ಸಲ್ಲಿಸಿರುವ ಅನುಸರಣ ವರದಿಯು ಸ್ಪಷ್ಟವಾಗಿದ್ದು, ಸರಿಯಾಗಿದ್ದು, ಅದನ್ನು ತಾವು ಈ ಕೂಡಲೇ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.

ವನಕಲ್ ಮಠದ ಶ್ರೀ ರಮಾನಂದ ಸ್ವಾಮೀಜಿ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version