Connect with us

ಗಾನ ಸಂಗಮ ಸ್ಪರ್ಧೆ | MLC ಕೆ.ಎಸ್.ನವೀನ್ ಉದ್ಘಾಟನೆ 

Gana Sangam Competition | Inauguration by MLC KS Naveen

ಮುಖ್ಯ ಸುದ್ದಿ

ಗಾನ ಸಂಗಮ ಸ್ಪರ್ಧೆ | MLC ಕೆ.ಎಸ್.ನವೀನ್ ಉದ್ಘಾಟನೆ 

CHITRADURGA NEWS | 11 JANUARY 2025

ಚಿತ್ರದುರ್ಗ: ಕಠಿಣ ಪರಿಶ್ರಮ, ನಿರಂತರ ಅಭ್ಯಾಸದ ಮೂಲಕ ಸ್ವರದಲ್ಲಿ ಮಾಂತ್ರಿಕತೆಯನ್ನು ಸೃಷ್ಟಿಸುವವರು ಮಾತ್ರ ದೊಡ್ಡ ಕಲಾವಿದರಾಗಿ ಬೆಳೆಯುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

Also Read: ಕೋಡಿ ಬಿತ್ತು ವಿವಿ ಸಾಗರ‌ | 118 ವರ್ಷಗಳ ಇತಿಹಾಸದಲ್ಲಿ 3ನೇ ಬಾರಿ‌ ದಾಖಲೆ

ಪ್ರಜಾ ಕಲ್ಯಾಣ ಸಮಿತಿಯಿಂದ ನಗರದ ತ.ರಾ.ಸು. ರಂಗಮಂದಿರದಲ್ಲಿ ಆಯೋಜಿಸಿರುವ ಗಾನ ಸಂಗಮ ರಾಜ್ಯ ಮಟ್ಟದ ಸಂಗೀತ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೊಸ ಪ್ರತಿಭೆಗಳಿಗೆ ಪ್ರಜಾ ಕಲ್ಯಾಣ ಸಮಿತಿ ವೇದಿಕೆ ಒದಗಿಸಿರುವುದು ನಿಜಕ್ಕೂ ಸಂತೋಷದ ಸಂಗತಿ. ಬೆಳೆದ ಮೇಲೆ ಗುರುತಿಸಿಕೊಳ್ಳುವುದು ಸುಲಭ. ಅಲ್ಲಿಯವರೆಗೂ ಕಲಾವಿದರ ಬದುಕು ಸಂಕಷ್ಟದಲ್ಲಿರುತ್ತದೆ. ಕಲಾವಿದರು ತಮ್ಮ ಕಂಠ ಸಿರಿಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಬೆಳೆಯಬೇಕು ಎಂದರು.

ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಸಂಗೀತಕ್ಕೆ ಸ್ವರ ಇಲ್ಲ. ಮಗು ಅಳುತ್ತಿದ್ದರೆ ತಾಯಿ ಹಾಡುತ್ತ ಸಮಾಧಾನ ಪಡಿಸುವುದು ಒಂದು ಸಂಗೀತ. ಹೃದಯ ತುಂಬಿ ಹಾಡಬೇಕು. ಸಂಗೀತಕ್ಕೆ ಕೆಲವು ನಿಯಮಗಳಿವೆ. ಕಲಾವಿದನಲ್ಲಿ ಸಂಗೀತ ಸಿರಿಯಿದ್ದರೆ ಜಗತ್ತನ್ನು ಮಂತ್ರಮುಗ್ದವನ್ನಾಗಿಸುತ್ತದೆ ಎಂದರು.

Also Read: ಆರ್ಥಿಕ ಸಂಕಷ್ಟದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ | ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ

ಲೇಖಕ ಹೆಚ್.ಆನಂದಕುಮಾರ್ ಮಾತನಾಡಿ, ಮಾತಂಗ ಮುನಿಗಳು ಸಂಗೀತ ಕೊಟ್ಟಿದ್ದು, ಸಮಸ್ತ ಜೀವರಾಶಿಗಳಲ್ಲಿಯೂ ಸಂಗೀತ ಹೊರಹೊಮ್ಮುತ್ತದೆ. ಸಂಗೀತಕ್ಕೆ ಎಲ್ಲಾ ಪರ್ವಗಳನ್ನು ದಾಟಿ ನಿಲ್ಲುವ ಶಕ್ತಿಯಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸುವ ಮಧ್ಯದಲ್ಲಿ ಹತ್ತದಿನೈದು ನಿಮಿಷ ಸಂಗೀತವನ್ನು ಆಲಿಸುತ್ತಿದ್ದರು ಎಂದು ತಿಳಿಸಿದರು.

ತೀರ್ಪುಗಾರರಾಗಿ ಚಳ್ಳಕೆರೆ ಗಣೇಶ್, ಗಾಯಕ ಡಿ.ಓ.ಮುರಾರ್ಜಿ ಇದ್ದರು. ಪ್ರಜಾ ಕಲ್ಯಾಣ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಹರೀಶ್ ಟಿ.ಎನ್ ಅಧ್ಯಕ್ಷತೆ ವಹಿಸಿದ್ದರು.

 ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಬೆಳಗಟ್ಟ, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್, ಪ್ರಜಾ ಕಲ್ಯಾಣ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಕೆ.ವಿ. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಮ್ಮ, ದಾವಣಗೆರೆ ಜಿಲ್ಲಾಧ್ಯಕ್ಷೆ ಚೌಡಮ್ಮ ವೇದಿಕೆಯಲ್ಲಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version