Connect with us

ಜ.14 ರಂದು ಮೇದೆಹಳ್ಳಿಯ ಶ್ರೀ ಅಯ್ಯಪ್ಪಸ್ವಾಮಿ ಲಕ್ಷ ದೀಪೋತ್ಸವ

Shri Ayyappaswamy temple chitradurga

ಮುಖ್ಯ ಸುದ್ದಿ

ಜ.14 ರಂದು ಮೇದೆಹಳ್ಳಿಯ ಶ್ರೀ ಅಯ್ಯಪ್ಪಸ್ವಾಮಿ ಲಕ್ಷ ದೀಪೋತ್ಸವ

CHITRADURGA NEWS | 12 JANUARY 2025

ಚಿತ್ರದುರ್ಗ: ನಗರದ ಮೇದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿಯ 25 ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಜ.14 ರಂದು ಸಂಜೆ 5.30ಕ್ಕೆ ನೆರವೇರಲಿದೆ.

Also Read: Kannada Novel: 16. ಬಡಗಿ ಕಂಡ ಗೌನಳ್ಳಿ

ಜ.13 ಸೋಮವಾರ ಸಂಜೆ 6 ಗಂಟೆಗೆ ಚಿತ್ರದುರ್ಗದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ನಾದಸ್ವರ ಬೆಳ್ಳಿ ಪಲ್ಲಕ್ಕಿಯಲ್ಲಿ ಸಾವಿರಾರು ಅಯ್ಯಪ್ಪ ಸ್ವಾಮಿಗಳು ಭಕ್ತಾದಿಗಳು ಇರುಮುಡಿ ಹೊತ್ತು ನಗರದ ಬೀದಿಗಳಲ್ಲಿ ಸ್ವಾಮಿಯ ಆಭರಣಗಳ ಮೆರವಣಿಗೆ ನೆಡೆಸಲಿದ್ದಾರೆ.

ದೀಪೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವಿರೇಂದ್ರ(ಪಪ್ಪಿ) ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ನೇರವೇರಿಸಲಿದ್ದಾರೆ.

ಜ.14 ರಂದು ಸಂಜೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನಡೆಸಲಿದ್ದಾರೆ.  ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನಾ ಅಧ್ಯಕ್ಷ ಶರಣ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರ್ಚೆಂಟ್ ಬ್ಯಾಂಕ್‍ನ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತ್ ರೆಡ್ಡಿ, ಡಿಸಿಸಿ ಬ್ಯಾಂಕ್‍ನ ನಿರ್ದೇಶಕ ಟಿ.ಮಹಾಂತೇಶ್, ಎಚ್. ಎಂ.ದ್ಯಾಮಣ್ಣ, ವರ್ತಕರಾದ ಉದಯ್ ಶೆಟ್ಟಿ, ಐಶ್ವರ್ಯ ಗ್ರೂಪ್ಸ್ ಹೋಟೆಲ್ ಮಾಲಿಕರಾದ ಅರುಣ್ ಕುಮಾರ್, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ದೀಪಾ ನಂದ, ಕನ್ನಿಕಾ ಪರಮೇಶ್ವರಿ ಸೌಹಾರ್ದ ಅಧ್ಯಕ್ಷ ಎಂ.ಎಸ್ ಪ್ರಾಣೇಶ್, ವಿಶ್ವ ಹಿಂದು ಪರಿಷತ್‍ನ ನಗರ ಅಧ್ಯಕ್ಷ ಸಿ.ಅಶೋಕ್, ಮೇದೆಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ವಿಜಯಕುಮಾರ್ ಉಪಸ್ಥಿತರಿರುವರು.

Also Read: ST ಪಟ್ಟಿಗೆ ಕಾಡುಗೊಲ್ಲ ಸಮುದಾಯ | ಅನುಸರಣ ವರದಿ ಶೀಘ್ರ ಕೇಂದ್ರಕ್ಕೆ | CM ಭರವಸೆ 

ಭಕ್ತಿ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಕರ್ನಾಟಕ ಹಿನ್ನೆಲೆ ಗಾಯಕಿ ಮಾಲಿನಿ ಕೇಶವ ಪ್ರಸಾದ್ ಮತ್ತು ಸಂಗಡಿಗರು ಮಂಗಳೂರು ಸುರಭಿ ಸೌಂಡ್ ಸಿಸ್ಟಮ್ ಇದರ ಅಡಿಯಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸುವಂತೆ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನಾ ಅಧ್ಯಕ್ಷ ಶರಣ್ ಕುಮಾರ್, ಉಪಾಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ಎಂ.ಪಿ.ವೆಂಕಟೇಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ 9342310634 ಸಂಪರ್ಕಿಸಬಹುದಾಗಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version