CHIRADURGA NEWS | 04 FEBRUARY 2026
ಚಿತ್ರದುರ್ಗ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಆಯ್ದ ದಿನಗಳಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಜಿಲ್ಲೆಯ ರೈತರಿಗೆ 12.40 ಕೋಟಿ ಬೆಳೆ ಪರಿಹಾರ
ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 220/66/11 ಕೆ.ವಿ ಚಿತ್ರದುರ್ಗದಿಂದ ಬರುವ 220 ಕೆ.ವಿ ಹಿರೆಮಲ್ಲನಹೊಳೆ-ಚಿತ್ರದುರ್ಗ ಮಾರ್ಗ ಮತ್ತು 66 ಕೆ.ವಿ ತುರುವನೂರು-ಚಿತ್ರದುರ್ಗ ಮಾರ್ಗದಲ್ಲಿ ವಿ.ಜೆ.ಎನ್.ಎಲ್ ಅವರು ಭದ್ರಾ ಮೇಲ್ದಂಡೆ ಯೋಜನೆಯ ಅಕ್ವಡಕ್ಟ್ ನಿರ್ಮಾಣ ಕಾಮಗಾರಿ ನಿರ್ವಹಿಸುವುದರಿಂದ ಈ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 220 ಕೆ.ವಿ ಹಿರೆಮಲ್ಲನಹೊಳೆ-ಚಿತ್ರದುರ್ಗ ಮಾರ್ಗ ಮತ್ತು 66 ಕೆ.ವಿ ತುರುವನೂರು-ಚಿತ್ರದುರ್ಗ ಮಾರ್ಗಗಳ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಇದೇ ಫೆ.5, 8, 16, 22, 26 ಹಾಗೂ ಮಾರ್ಚ್ 1 ಮತ್ತು 5ರಂದು ಅಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.
ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು :
ಮಾಡನಾಯಕನಹಳ್ಳಿ, ಸಿ.ಜಿ.ಹಳ್ಳಿ, ಯಳವರ್ತಿ, ಮುದ್ದಾಪುರ, ಹೊಸಗೊಲ್ಲರಹಟ್ಟಿ, ಬಂಗಾರಕ್ಕನಹಳ್ಳಿ, ರಾಯನಹಳ್ಳಿ, ಸೂರೇನಹಳ್ಳಿ, ಐನಹಳ್ಳಿ, ತುರುವನೂರು, ಬೋಮ್ಮಕ್ಕನಹಳ್ಳಿ, ಕೂನಬೇವು, ಅವಳೇನಹಳ್ಳಿ, ದೊಡ್ಡಘಟ್ಟ, ಕರಿಯಮ್ಮನಹಟ್ಟಿ, ಕೋಟೆಹಟ್ಟಿ, ಹುಣಸೇಕಟ್ಟೆ, ಯಳಗೋಡು, ಇಸಾಮುದ್ರ, ನೆಲ್ಲಿಕಟ್ಟೆ , ಕಾಲಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಗೃಹಲಕ್ಷ್ಮೀ ಡಿಜಿಟಲ್ ಮಾರ್ಕೆಟಿಂಗ್ App ಜಾರಿ | ಗೃಹಿಣಿಯರು ಉದ್ಯಮಿಗಳಾಗಲು ಅವಕಾಶ ! ನೋಂದಣಿ ಹೇಗೆ?
ಗ್ರಾಹಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

