ಮುಖ್ಯ ಸುದ್ದಿ
ಗೋವಿಂದ ಕಾರಜೋಳ ಭಾಷಣಕ್ಕೆ ಆಕ್ಷೇಪ | ಆರೆಸ್ಸೆಸ್ಸ್, ಮೋಹನ್ ಭಾಗವತ್ ಹೆಸರಿಗೆ ತಕರಾರು

CHITRADURGA NEWS | 5 APRIL 2025
ಚಿತ್ರದುರ್ಗ: ಸಂಸದ ಗೋವಿಂದ ಕಾರಜೋಳ ತಮ್ಮ ಭಾಷಣದಲ್ಲಿ ಆರೆಸ್ಸೆಸ್ ಹಾಗೂ ಮೋಹನ್ ಭಾಗವತ್ ಹೆಸರು ಪ್ರಸ್ತಾಪಿಸಿದ್ದಕ್ಕೆ ಅಸಮಧಾನ ವ್ಯಕ್ತವಾಗಿದೆ.
ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ಡಾ.ಬಾಬು ಜಗಜೀವನ್‌ರಾಂ ಜಯಂತಿ ಕಾಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಭಾಷಣಕ್ಕೆ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.
ಇದನ್ನೂ ಓದಿ: ಬೆಸ್ಕಾಂ ಎಇಇ ಸೇರಿ ಮೂರು ಜನರಿಗೆ ಜೈಲು ಶಿಕ್ಷೆ | ವಿದ್ಯುತ್ ತಗುಲಿ ಬಾಲಕ ಮೃತಪಟ್ಟಿದ್ದ ಪ್ರಕರಣ
ಬಾಬು ಜಗಜೀವನ್‌ರಾಂ ಜಯಂತಿ ಕಾಯಕ್ರಮದಲ್ಲಿ ಭಾಗವಹಿಸಿದ್ದ ಸಂಸದರು, ಒಳಮೀಸಲಾತಿ ವಿಚಾರದಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಈ ಹೇಳಿಕೆಗೆ ಸಭೆಯಲ್ಲಿದ್ದ ಬೀಸನಹಳ್ಳಿ ಜಯ್ಯಣ್ಣ, ಹನುಮಂತಪ್ಪ ದುರ್ಗ, ಮೈಲಾರಪ್ಪ ಸೇರಿದಂತೆ ಕೆಲವರು ಅಸಮಧಾನ ವ್ಯಕ್ತಪಡಿಸಿ, ಆರೆಸ್ಸೆಸ್ ಹಾಗೂ ಮೋಹನ್ ಭಾಗವತ್ ಹೆಸರು ಇಲ್ಲಿ ತರಬೇಡಿ, ಒಳಮೀಸಲಾತಿಗಾಗಿ ಸಮುದಾಯ ಸುಧೀರ್ಘ ಹೋರಾಟ ನಡೆಸಿದೆ ಎಂದು ಭಾಷಣಕ್ಕೆ ಅಡ್ಡಿ ಮಾಡಿದರು.
ಇದನ್ನೂ ಓದಿ: ಮರದ ದಿಮ್ಮಿ ಕಳ್ಳತನ ಯತ್ನ | ಗಿಡ ನೆಟ್ಟು ಬೆಳೆಸುವ ಶಿಕ್ಷೆ ವಿಧಿಸಿದ ನ್ಯಾಯಾಲಯ
ಆದರೆ, ಇಷ್ಟಕ್ಕೆ ಸುಮ್ಮನಾಗದ ಸಂಸದರು, ಒಳಮೀಸಲಾತಿ ವಿಚಾರದಲ್ಲಿ ಆರೆಸ್ಸೆಸ್ಸ್, ಬಿಜೆಪಿ ಹಾಗೂ ಮೋಹನ್ ಭಾಗವತ್ ಅವರನ್ನು ಸ್ಮರಿಸಬೇಕು. ನಮಗೆ ಸಹಾಯ ಮಾಡಿದವರನ್ನು ನೆನೆಯುವುದು ನಮ್ಮ ಕರ್ತವ್ಯ. ಹೀಗೆ ಅಡ್ಡಿ ಮಾಡಿ ಸಮುದಾಯದ ದಿಕ್ಕು ತಪ್ಪಿಸಬೇಡಿ ಎಂದರು.
ತರಾಸು ರಂಗಮಂದಿರದಲ್ಲಿ ನಡೆದ ಘಟನೆಯ ವೀಡಿಯೋ ನೋಡಿ:
ನಾನು ಮೋಹನ್ ಭಾಗವತ್ ಅವರನ್ಳು ಭೇಟಿಯಾಗಿ ಒಳಮೀಸಲಾತಿ ಬಗ್ಗೆ ವಿವರಿಸಿದ್ಅದೆ. ನಮ್ಮ ಅಹವಾಲು ಸ್ವೀಕಾರ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಒಳಮೀಸಲಾತಿ ಭಿಕ್ಷೆಯಲ್ಲ. ಅದು ಅವರ ಹಕ್ಕು ಎಂದು ಹೇಳಿ, ಅಟಾರ್ನಿ ಜನರಲ್, ಸಾಲಿಸಿಟಿರ್ ಜನರಲ್ ಅವರ ಸಭೆ ನಡೆಸಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿ ಆದೇಶ ಬರುವಂತೆ ಮಾಡಿರುವುದನ್ನು ಹೇಳಬೇಕಾಗುತ್ತದೆ. ಈ ಹಿನ್ನೆಲೆ ಎಲ್ಲರಿಗೂ ಗೊತ್ತಾಗಬೇಕು.
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಈ ದೇಶದಲ್ಲಿ ಒಳಮೀಸಲಾತಿಗಾಗಿ 30 ವರ್ಷ ಹೋರಾಟ ಮಾಡಿದ್ದೀರಿ. ಈ ಸಮುದಾಯಕ್ಕೆ ಅನ್ಯಾಯ ಆಗಿದೆ ಎನ್ನುವುದನ್ನು ಕೇಳಲು ಇಲ್ಲೀವರೆಗೆ ಮೋಹನ್ ಭಾಗವತ್ ಅವರು ಬಂದಿದ್ದರು. ಈ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ವಿವರಿಸಿದ್ದಾರೆ. ನಾನು ಇಲ್ಲಿ ಆರೆಸ್ಸೆಸ್ ಸೇರಿ, ಮತ ಹಾಕಿ ಎಂದು ಹೇಳಿಲ್ಲ. ಭಾಗವತ್ ಅವರಿಗೆ ಜಾತಿ ವ್ಯವಸ್ಥೆ ಬಗ್ಗೆ ಚೆನ್ನಾಗಿ ಗೊತ್ತಿರುವುದರಿಂದ ಈ ಅನ್ಯಾಯವನ್ನು ಮೋದಿ ಅವರ ಗಮನಕ್ಕೆ ತಂದಿದ್ದಾರೆ. ನಮಗೆ ಸಹಾಯ ಮಾಡಿದವರನ್ನು ನೆನಪಿಸುವ ಸಲುವಾಗಿ ಇಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು.
ಆದರೆ, ಸಂಸದರ ಭಾಷಣಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾಗ, ಒಂದು ಹಂತದಲ್ಲಿ ಅವರನ್ನು ಹೊರಗೆ ಹಾಕಿ ಎಂದು ಹೇಳಿದರು. ಅಸಮಧಾನಿತರನ್ನು ಕೂರಿಸಲು ಪೊಲೀಸರು ಹರಸಾಹಸ ಮಾಡಿದರು.
ಇದನ್ನೂ ಓದಿ: ಬಿಸಿಲಿಗೆ ನಿಮ್ಮ ಮುಖದ ಚರ್ಮ ಸುಡುತ್ತಿದೆಯೇ? ಹಾಗಾದ್ರೆ ಕಿಚನ್ನಲ್ಲಿ ಸಿಗುವ ಈ 6 ಪದಾರ್ಥಗಳನ್ನು ಮುಖಕ್ಕೆ ಬಳಸಿ
ಆಗಸ್ಟ್ 1 ರಂದೇ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡಲು ಆದೇಶ ಮಾಡದೆ. ಆಂದ್ರಪ್ರದೇಶ, ತೆಲಂಗಾಣ, ಹರಿಯಾಣ, ರಾಜಾಸ್ಥಾನಗಳಲ್ಲಿ ಜಾರಿಯಾಗಿದೆ. ಆದರೆ, ಕರ್ನಾಟಕದಲ್ಲಿ ಜಾರಿ ಆಗುತ್ತಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಎಂದರು.
