ಹೊಸದುರ್ಗ
ಹೊಸ ರಥದಲ್ಲಿ ವಿರಾಜಮಾನಳಾದ ಶ್ರೀ ಕತ್ತಿಕಲ್ಲಾಂಭ | ಕಣ್ತುಂಬಿಕೊಂಡ ಕಬ್ಬಳದ ಭಕ್ತಗಣ
CHITRADURGA NEWS | 26 FEBRUARY 2025
ಹೊಸದುರ್ಗ: ತಾಲೂಕಿನ ಕಬ್ಬಳ ಗ್ರಾಮದ ಗ್ರಾಮ ದೇವತೆ ಶ್ರೀಕತ್ತಿಕಲ್ಲಾಂಭ ದೇವಿಯ ನೂತನ ರಥರೋಹಣ ಬುಧವಾರ ಬೆಳೆಗ್ಗೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರಗಿತು.
Also Read: ಜಗದ್ಗುರು ಮುರುಘರಾಜೇಂದ್ರ ಶ್ರೀ ಹೆಸರಿನಲ್ಲಿ ನೂತನ ಸರ್ಕಲ್ ಅನಾವರಣ
ನೂತನ ರಥರೋಹಣದ ಅಂಗವಾಗಿ ಕಳೆದ ಬುಧವಾರದಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅರಂಭಗೊಂಡು ಮಂಗಳವಾರ ರಾತ್ರಿ ಕತ್ತಿ ಕಲ್ಲಾಂಭದೇವಿ, ಪಾಂಡುರಂಗ ರುಕ್ಮಿಣಿ ದೇವರಗಳು ಸಮ್ಮುಖದಲ್ಲಿ ಹೊಸಹಟ್ಟಿ ಅಂಜನೇಯ ಸ್ವಾಮಿ, ಮಲ್ಲೇನಹಳ್ಳಿ ತಿರುಮಲ್ಲೇಶ್ವರ ಸ್ವಾಮಿ, ಬೊಮ್ಮೇನಹಳ್ಳಿ ಗ್ರಾಮದ ಕರಿಯಮ್ಮ, ಹಾಗೂ ಶ್ರೀಲಕ್ಷ್ಮೀರಂಗನಾಥಸ್ವಾಮಿ ದೇವರಗಳ ರಾತ್ರಿ ರಾಜ ಬೀದಿ ಉತ್ಸವ ಜರಗಿತು.
ಗ್ರಾಮದ ನೂರಾರು ಮಹಿಳೆಯರು ಕಾಖಡ ಅರತಿ ಹೊತ್ತು ಚಂಡೆ ವಾದ್ಯ, ಚಿಟ್ಟಿ ಮೇಳ ಸೇರಿದಂತೆ ನಾನಾ ಜಾನಪದ ಕಲಾ ಮೇಳದೊಂದಿಗೆ ಅಂಜನೇಯ ಸ್ವಾಮಿಯ ಗರುಡ ಕಂಭಕ್ಕೆ ಮೇಲು ದೂಪಹಚ್ಚಿದ ನಂತರ ಅಶ್ವ ಸಮೇತದೊಂದಿಗೆ ಅಂಜನೇಯ ಸ್ವಾಮಿಯ ಗರುಡ ಕಂಭಕ್ಕೆ ಮೇಲು ದೂಪ ಹಚ್ಚಿದ ನಂತರ ಅಶ್ವ ಸಮೇತದೊಂದಿಗೆ ರಾಜ ಬೀದಿ ಉತ್ಸವದೊಂದಿಗೆ ರಥ ಬೀದಿಗೆ ಅಗಮಿಸಿ ಮಕರ ಲಗ್ನದಲ್ಲಿ ಕತ್ತಿಕಲ್ಲಾಂಭ ದೇವಿಯ ನೂತನ ರಥ ಪ್ರತಿಷ್ಠಾಪನೆ ಪಂಚಾಮೃತ ಅಭಿಷೆಕ ಮಹಾ ಮಂಗಳಾರತಿಯೊಂದಿಗೆ ರಥರೋಹಣ ನೆರವೇರಿತು.
Also Read: ಬಸವೇಶ್ವರ ಮೆಡಿಕಲ್ ಕಾಲೇಜಿಗೆ 7 ರ್ಯಾಂಕ್
ಅರಕೆ ಹೊತ್ತ ರೈತ ಬಾಂಧವರು ಪಾನ ಗಾಡಿ ಸುತ್ತಾಡಿಸಿ ಸೇರಿದ್ದ ಭಕ್ತ ಸಮ್ಮೂಹಕ್ಕೆ ಪಾನಕ ಪಲಹಾರ ವಿತರಿಸಿ ಭಕ್ತಿ ಸಮರ್ಪಿಸಿದರೆ ಗ್ರಾಮಸ್ಥರು ರಥರೋಹಣ ಅಂಗವಾಗಿ ಗ್ರಾಮದಲ್ಲಿ ಕಳೆದ ಎರಡು ದಿವಸ ಅನ್ನ ಸಂತರ್ಪಣೆ ಜರಗಿತು.