ಹೊಸದುರ್ಗ
ಅಕ್ಷರದಿಂದ ಸಾಕ್ಷರತೆ | ದೇವರ ಸಂಸ್ಕಾರದಿಂದ ಅಭಿವೃದ್ಧಿ | ಸದ್ಗುರು ಡಿ.ಎಸ್.ಪ್ರದೀಪ್
CHITRADURGA NEWS | 04 MARCH 2025
ಹೊಸದುರ್ಗ: ಮಕ್ಕಳಿಗಾಗಿ ಆಸ್ತಿ ಮಾಡದೇ, ಅವರ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ಆ ಮನೆಗೆ ಉತ್ತಮ ಭವಿಷ್ಯ ಸಿಗುತ್ತದೆ ಎಂದು ಸದ್ಗುರು ಆಯುರ್ವೇದ ಸಂಸ್ಥೆಯ ಡಿ.ಎಸ್.ಪ್ರದೀಪ್ ಅಭಿಪ್ರಾಯಪಟ್ಟರು.
Also Read: APMC: ಮಾರುಕಟ್ಟೆ ಧಾರಣೆ | ಮಂಗಳವಾರದ ಹತ್ತಿ ರೇಟ್ ಎಷ್ಟಿದೆ?
ತಾಲೂಕಿನ ಕಪ್ಪಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ವ್ಯಾಪ್ತಿಯ 500 ಮಕ್ಕಳಿಗೆ ಬ್ಯಾಗ್ ಮತ್ತು ಸ್ವೆಟರ್ ವಿತರಿಸಿ ಮಾತನಾಡಿದರು.
ಸಾಕಷ್ಟು ಜನ ಪೋಷಕರಿಗೆ ಕನಸುಗಳಿರುತ್ತವೆ. ಅವು ಈಡೇರದಿದ್ದರೆ, ಅವನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳಬೇಕು. ದೇವಸ್ಥಾನದ ಗಂಟೆಯ ಜೊತೆಗೆ ಶಾಲೆಯ ಗಂಟೆಯು ಭಾರಿಸಿದರೆ ಆ ಗ್ರಾಮ ಅಭಿವೃದ್ಧಿ ಆಗುತ್ತದೆ.
ದೇವರು ನಂಬಿಕೆ. ದೇವರೇ ಎಲ್ಲವನ್ನೂ ಮಾಡುತ್ತಾನೆ ಎನ್ನುವುದು ಮೂಢ ನಂಬಿಕೆ. ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿದರೆ, ಮುಂದೆ ಎಲ್ಲಾ ಕಡೆಗಳಲ್ಲಿ ನಮಸ್ಕಾರ ಸಿಗುತ್ತದೆ ಎಂದು ತಿಳಿಸಿದರು.
Also Read: ನನ್ನ ವಿರುದ್ಧ ಅಪಪ್ರಚಾರ ಮಾಡೋರಿಗೆ ಸಾಮಾನ್ಯ ಸಭೆಯಲ್ಲಿ ಉತ್ತರ ಕೊಡ್ತಿನಿ | ಮೀಸೆ ಮಹಾಲಿಂಗಪ್ಪ
ಸಾಕಷ್ಟು ಜನ ಹಿಂದುಳಿದವರು, ಪರಿಶಿಷ್ಟರು ಅಬಿವೃದ್ಧಿ ಹೊಂದಬೇಕು ಎಂದು ಹೇಳುತ್ತಾರೆ. ಆದರೆ, ಹೀಗೆ ಮೇಲೆ ಬರಲು ಶಿಕ್ಷಣವೇ ಸರಿಯಾದ ಮಾರ್ಗ ಎಂದರು.
ಮಕ್ಕಳ ಜೀವನ ನಿರ್ಮಾಣ ಮಾಡುವ ಜವಾಬ್ದಾರಿ ತಾಯಿ ಮೇಲಿರುತ್ತದೆ. ಮಕ್ಕಳ ಶಿಕ್ಷಣಕ್ಕಾಗಿ ಧಾರವಾಹಿ ನೋಡುವುದನ್ನು ಬಿಟ್ಟು ಮಕ್ಕಳಿಗೆ ಅಭ್ಯಾಸ ಮಾಡಿಸಿದರೆ ನಿಮಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಂಕರಪ್ಪ ಮಾತನಾಡಿ, ಬಡವರೇ ಹೆಚ್ಚಾಗಿರುವ ಗ್ರಾಮದ ಶಾಲೆಗಳಿಗೆ ದಾನಿಗಳು ನೆರವು ನೀಡುತ್ತಿರುವುದು ಉತ್ತಮ ಕಾರ್ಯ. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಹೊತ್ತು ನೀಡಬೇಕು ಎಂದರು.
Also Read: ಚನ್ನಗಿರಿ ಮಾರುಕಟ್ಟೆ ಅಡಿಕೆ ರೇಟ್
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಪ್ರಕಾಶ್ ಮಾತನಾಡಿ, ನೆಲಕ್ಕೆ ಬಿದ್ದ ಬೀಜ, ವಿದ್ಯಾರ್ಥಿಯ ಎದೆಗೆ ಬಿದ್ದ ಅಕ್ಷರ ಎಂದೂ ನಷ್ಟವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೆರವು ನೀಡುವುದರಿಂದ ಭವಿಷ್ಯದ ಭಾರತಕ್ಕೆ ಅನುಕೂಲವಾಗುತ್ತದೆ.
ದೇಶದಲ್ಲಿ ಕೋಟ್ಯಾಂತರ ಜನ ಶ್ರೀಮಂತರಿದ್ದರೂ ದಾನ ಮಾಡುವವರ ಸಂಖ್ಯೆ ವಿರಳ. ಶಿಕ್ಷಣ ಕ್ಷೇತ್ರಕ್ಕೆ ಸದ್ಗುರು ಆಯುರ್ವೇದ ಸಂಸ್ಥೆಯ ಪ್ರದೀಪ್ ಅವರು ನೀಡುತ್ತಿರುವ ನೆರವನ್ನು ಶ್ಲಾಘಿಸಿದರು.
ಶಾಲೆಯ ಶಿಕ್ಷಕರು, ಗ್ರಾಮಸ್ಥರ ಮನವಿಗೆ ಸ್ಪಂದಿಸಿ ತಕ್ಷಣವೇ ಶಾಲೆಗೆ LED TV, ಮೂರು ಹಸಿರು ಬೋರ್ಡ್ ಒದಗಿಸಿಕೊಟ್ಟರು.
Also Read: ಬೆಲ್ಟ್, ಪರ್ಸ್, ವ್ಯಾನಿಟಿ ಬ್ಯಾಗ್ ಸೇರಿ ಚರ್ಮದ ಉತ್ಪನ್ನಗಳಿಗೆ ರಿಯಾಯಿತಿ
ಕಾರ್ಯಕ್ರಮದಲ್ಲಿ SDMC ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ನಾಗಪ್ಪ, ಶೃತಿ, ಅನುಸೂಯಮ್ಮ, ಮುಖ್ಯ ಶಿಕ್ಷಕರಾದ ಗಂಗಾಧರಪ್ಪ, ಷಫೀವುಲ್ಲಾ ಇತರರಿದ್ದರು.