Connect with us

ಫೆ.26 ರಂದು ಶ್ರೀಕತ್ತಿಕಲ್ಲಾಂಭ ದೇವಿಯ ನೂತನ ರಥ ಲೋಕರ್ಪಾಣೆ

ಹೊಸದುರ್ಗ

ಫೆ.26 ರಂದು ಶ್ರೀಕತ್ತಿಕಲ್ಲಾಂಭ ದೇವಿಯ ನೂತನ ರಥ ಲೋಕರ್ಪಾಣೆ

CHITRADURGA NEWS | 19 FEBRUARY 2025

ಹೊಸದುರ್ಗ: ತಾಲೂಕಿನ ಕಬ್ಬಳ ಗ್ರಾಮದ ಗ್ರಾಮ ದೇವತೆ ಶ್ರೀಕತ್ತಿಕಲ್ಲಾಂಭ ದೇವಿಯ ನೂತನ ರಥ ನಿರ್ಮಾಣ ಕೆಲಸ ಪೂರ್ಣವಾಗಿದ್ದು ಫೆ.26 ರಂದು ಲೋಕರ್ಪಾಣೆ ನೆರವೇರಲಿದೆ.

Also Read: ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ

ಗ್ರಾಮದಲ್ಲಿ ಸುಮಾರು ಏಳುನೂರು ವರ್ಷಗಳ ಹಿಂದಿನದು ಎನ್ನಲಾದ ರಥ ಶಿಥಿಲಗೊಂಡಿದ್ದನ್ನು ಮನಗಂಡು ಗ್ರಾಮದ ಸಮಸ್ಥರು ದೇವಿಯ ಅಪ್ಪಣೆಯ ಅಣತಿಯಂತೆ ತೀರ್ಮಾನಿಸಿ ಕಳೆದ ಎರಡು ವರ್ಷದಲ್ಲಿ ರಥ ನಿರ್ಮಾಣದ ಕೆಲಸಗಳಿಗೆ ಚಾಲನೆ ನೀಡಿದ್ದರು ಸುಮಾರು ಒಂದೂವರೆ ಕೋಟಿ ರೂಗಳಿಗೂ ಅಧಿಕ ವೆಚ್ಚದಲ್ಲಿ ರಥ ಅಕರ್ಷಕವಾಗಿ ಸುಂದರವಾಗಿ ನಿರ್ಮಾಣವಾಗಿದೆ.

ಚಿಗಟೇರಿ, ಅನಗೋಡು,ಗಂಜಿಗೆರೆ, ಗರ್ಜಿ, ಎಸ್.ಬಿದರೆ ಸೇರಿದಂತೆ ರಾಜ್ಯದ ನಾನಾ ಬಾಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ತೇರು ರಥದ ನಿರ್ಮಾಣದ ಕೆತ್ತನೆ ಮಾಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ ಗ್ರಾಮದ ಶಿಲ್ಪಿಗಳಾದ ಲೇ,ಚಂದ್ರಚಾರ್ ವಕ್ಕಳಾದ ಜಗನ್ನಾಥಚಾರ್, ವೀರಾಚಾರ್, ಮಾರ್ಗದರ್ಶನದಲ್ಲಿ ಎಂಟು ಮಂದಿ ಕಳೆದ ಎಂಟು ತಿಂಗಳಿನಿಂದ ನಿರ್ಮಾಣದ ಕೆಲಸವನ್ನು ನಿರ್ವಹಿಸಿದ್ದಾರೆ.

Also Read: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

ರಥ ನಿರ್ಮಾಣಕ್ಕೆ ಬೇಕಾದ ಮರವನ್ನು ಚಿಕ್ಕಮಗಳೂರು ಕಳಸ ಬಾಗದಿಂದ ಹೊನ್ನೆ, ಸಾಗುವಾನಿ, ಹೆಬ್ಬಲ್ಸ್ ಮತ್ತಿ ಮರವನ್ನು ಹಾಗೂ ದಾನಿಗಳಿಂದ ಸಂಗ್ರಹಿಸಿ ತಂದು ನಿರ್ಮಾಣಕ್ಕೆ ಬಳಸಲಾಗಿದ್ದು ಚಕ್ರಗಳ ಅಚ್ಚಿಗೆ ಮಾತ್ರ ಮತ್ತಿ ಮರವನ್ನು ಬಳಕೆಮಾಡಲಾಗಿದೆ.

ಈ ರಥವನ್ನು ಹೊಯ್ಸಳ ಹಾಗೂ ಚೋಳರ ಕಾಲದ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ರಥದ ಎತ್ತರ 35 ಅಡಿಯಲ್ಲಿದ್ದು, ಅಮ್ಮನವುರ ಕುಳಿತ ಕೊಳ್ಳವ ಜಾಗಕ್ಕೆ 12 ಎತ್ತರ 12 ಅಡಿ ಅಗಲ ಹೊಂದಿರುತ್ತದೆ.

ರಥದಲ್ಲಿ ಪ್ರದಾನ ವಿಗ್ರಹಗಳಾದ ಗಣಪತಿ ಕತ್ತಿಕಲ್ಲಾಂಭ ದೇವಿ, ಶ್ರೀ ವಿಷ್ಣ ರಾಜರಾಜೇಶ್ವರಿ ಶ್ರೀ ಅಂಜನೇಯ, ಶ್ರೀ ಲಕ್ಷ್ಮೀದೇವಿ ಶ್ರೀ ಉಮಾಮಹೇಶ್ವರಿ, ಶ್ರೀ ಪರಮೇಶ್ವರಿ ಶ್ರೀ ಸರಸ್ವತಿ, ಶ್ರೀ ವೀರಭದ್ರಸ್ವಾಮಿ, ಶ್ರೀ ಮಹಕಾಳಿ ಶ್ರೀ ಭುವನೇಶ್ವರಿ ಹಾಗೂ ರಥದಲ್ಲಿ ಅಷ್ಟ ದಿಕ್ಕಾಪಾಲಕರು, ಅಷ್ಟ ಲಕ್ಷ್ಮೀಯರು ಸಪ್ತ ಮಾತ್ರಿಕೆಯರು, ನವಗ್ರಹಗಳು, ರಥ ಮಂಟಪದಲ್ಲಿ ಶಾರ್ದಲೊಗಳನ್ನು ಅಲಂಕಾರಿಕ ಕೆತ್ತನೆಯೊಂದಿಗೆ ಬಳ್ಳಿ ಸಾಲುಗಳು, ಅಷ್ಟ ದಿಗ್ಗಜಗಳು, ಸಿಂಹ, ಹಂಸ, ಅಶ್ವಗಳು ಚಿತ್ರಗಳೂ ಸೇರಿದಂತೆ ಸುಂದರವಾದ ನಾನಾ ಕಲಾ ಶೈಲಿಗಳೊಂದಿಗೆ ನಿರ್ಮಾಣ ಮಾಡಲಾಗಿದೆ.

Also Read: ಶೀಘ್ರದಲ್ಲಿ ಮೂರು ಸಾವಿರ ಲೈನ್‍ಮೆನ್‍ ನೇಮಕ | ಸಚಿವ ಕೆ.ಜೆ.ಜಾರ್ಜ್

ಈರಥದ ವೀಶೆಷತೆ ಕಾಶಪಾ ಶಿಲ್ಪ ಶಾಸ್ತ್ರದ ಅದಾರದ ಮೇಲೆ ಕೆತ್ತನೆ ಮಾಡಲಾಗಿದೆ. ತೇರಿಗೆ ಚಿತ್ರ, ಕಲ್ಪರಥ ಎಂದು ಕರೆಯುತ್ತಾರೆ ಎಂದು ಶಿಲ್ಪಿ ಜಗನ್ನಾಥಚಾರ್ ಹೇಳುತ್ತಾರೆ.

Click to comment

Leave a Reply

Your email address will not be published. Required fields are marked *

More in ಹೊಸದುರ್ಗ

To Top
Exit mobile version