ಮುಖ್ಯ ಸುದ್ದಿ
ಚಿತ್ರದುರ್ಗ ನಗರಸಭೆ ಬಜೆಟ್ | ಯಾವ ಕೆಲಸಕ್ಕೆ ಎಷ್ಟು ಅನುದಾನ ಮೀಸಲು | ಇಲ್ಲಿದೆ ಪೂರ್ಣ ವಿವರ
CHITRADURGA NEWS | 18 FEBRUARY 2025
ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ 2025-26ನೇ ಸಾಲಿಗೆ 1.2 ಕೋಟಿ ರೂ ಉಳಿತಾಯ ಬಜೆಟ್ ಮಂಡನೆ ಮಾಡಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಹಾಗೂ ಆಯವ್ಯಯ ಮಂಡನೆ ಸಭೆಯಲ್ಲಿ 146.80 ಕೋಟಿ ರೂ. ಬಜೆಟ್ ಮಂಡನೆ ಮಾಡಿದರು.
ಇದನ್ನೂ ಓದಿ: ಐಮಂಗಲ ಪೊಲೀಸರಿಂದ ಅಂತಾರಾಜ್ಯ ಕಳ್ಳನ ಬಂಧನ | 351 ಗ್ರಾಂ ಚಿನ್ನಾಭರಣ ವಶಕ್ಕೆ
66.17 ಕೋಟಿ ರೂ. ಆದಾಯ, 64.58 ಕೋಟಿ ರೂ.ಖರ್ಚು ಸೇರಿದಂತೆ ವಿವಿಧ ಮೂಲಗಳಿಂದ ಆದಾಯದ ನಿರೀಕ್ಷೆ ಮಾಡಲಾಗಿದೆ ಎಂದು ವಿವರಿಸಿದರು.
- ನಗರಸಭೆ ಆದಾಯ ಮತ್ತು ಸರ್ಕಾರದ ಅನುದಾನದಿಂದ ನಗರದ ವಿವಿಧ ವಾರ್ಡ್‍ಗಳಲ್ಲಿ ನೀರಿನ ಅವಶ್ಯಕತೆ ಇರುವ ಕಡೆ ಬೋರ್‍ವೆಲ್, ಶುದ್ಧ ನೀರಿನ ಘಟಕ, ಪೈಪ್‍ಲೈನ್ ಅಳವಡಿಕೆ, ನಿರ್ವಹಣೆ ಇತ್ಯಾದಿ ಕಾರ್ಯಗಳಿಗೆ 11.25 ಕೋಟಿ ರೂ. ಮೀಸಲಿಡಲಾಗಿದೆ.
- ನಗರದಲ್ಲಿನ ಒಳಚರಂಡಿಗಳ ಸಮರ್ಪಕ ನಿರ್ವಹಣೆ, ಅಭಿವೃದ್ಧಿಗಾಗಿ 3 ಕೋಟಿ ರೂ.
- ಪೂರ್ಣಗೊಳ್ಳುವ ಹಂತದಲ್ಲಿರುವ ತ್ಯಾಗರಾಜ ಮಾರುಕಟ್ಟೆ, ಮಾಂಸ ಮಾರುಕಟ್ಟೆ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ 2.5 ಕೋಟಿ ಮೀಸಲಿಡಲಾಗಿದೆ.
ಇದನ್ನೂ ಓದಿ: ಬೆಳೆ ವಿಮೆ ತಿರಸ್ಕೃತ ಪಟ್ಟಿ ಪ್ರಕಟ | ಆಕ್ಷೇಪಣೆ ಸಲ್ಲಿಸಲು ಮಾರ್ಚ್ 4 ಕೊನೆ ದಿನ
- ನಗರಸಭೆ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಾಣ, ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ, ಕಸ ವಿಂಗಡಣೆ, ಯಂತ್ರಗಳ ಅಳವಡಿಕೆ, ಸ್ಮಶಾನಗಳ ಅಭಿವೃದ್ಧಿ, ಮುಕ್ತಿ ವಾಹನ ಖರೀದಿ, ಆಧುನಿಕ ವಧಾಗಾರ ಸೇರಿದಂತೆ ನೈರ್ಮಲೀಕರಣಕ್ಕಾಗಿ ಒಟ್ಟು 20 ಕೋಟಿ ರೂ.ಗಳನ್ನು ತೆಗೆದಿಡಲಾಗಿದೆ.
- ಹಾಲಿ ಇರುವ ವಿದ್ಯುತ್ ದೀಪಗಳ ಬದಲು ಎಲ್‍ಇಡಿ ದೀಪ ಅಳವಡಿಕೆ, ವಾರ್ಡ್‍ಗಳಲ್ಲಿ ಹೊಸದಾಗಿ ವಿದ್ಯುತ್ ಕಂಬ ಅಳವಡಿಸಲು 4 ಕೋಟಿ ನಿಗಧಿ ಮಾಡಲಾಗಿದೆ.
- 2025-26ನೇ ಸಾಲಿನ 15ನೇ ಹಣಕಾಸು ಯೋಜನೆ, ಎಸ್‍ಎಫ್‍ಸಿ ಅನುದಾನ ಸೇರಿದಂತೆ ಇತರೆ ಮೂಲಗಳಿಂದ ನಗರದಲ್ಲಿನ ಹಾಳಾಗಿರುವ ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ಪಾದಾಚಾರಿ ರಸ್ತೆ ನಿರ್ಮಾಣಕಕೆ 10 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ಇದನ್ನೂ ಓದಿ: 34 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳ ಬಂಧನ | ಸೈಬರ್ ಪೊಲೀಸ್ ಕಾರ್ಯಚರಣೆ
- ನಗರದಲ್ಲಿನ ಟ್ರಾಫಿಕ್ ನಿಯಂತ್ರಣ, ಆಟೋ ನಿಲ್ದಾಣ, ಪಾರ್ಕಿಂಗ್ ಸ್ಥಳಗಳ ಅಭಿವೃದ್ಧಿಗೆ 50 ಲಕ್ಷ ರೂ,
- ನಗರದ ವಾರ್ಡ್‍ಗಳಿಗೆ ಆಧುನಿಕ ನಾಮಫಲಕ ಅಳವಡಿಕೆಗೆ 2 ಕೋಟಿ ರೂ,
- ಮುಖ್ಯ ವೃತ್ತಗಳ ಅಭಿವೃದ್ಧಿಗೆ 1 ಕೋಟಿ ರೂ. ಮೀಸಲಿಡಲಾಗಿದೆ.
- ನಗರದಲ್ಲಿ ಹಸಿರೀಕರಣ, ವಿವಿಧ ಬಡಾವಣೆಗಳ ಉದ್ಯಾನವನ ಅಭಿವೃದ್ಧಿಗೆ 3 ಕೋಟಿ ಮೀಸಲಿಡಲಾಗಿದೆ.
- ಪರಿಶಿಷ್ಟ ವರ್ಗದವರ ಕಲ್ಯಾಣ ಅಭಿವೃದ್ಧಿಗಾಗಿ 80 ಲಕ್ಷ ರೂ,
- ಇತರೆ ಬಡ ವರ್ಗದವರ ಅಭಿವೃದ್ಧಿಗೆ 25 ಲಕ್ಷ ರೂ,
- ವಿಕಲಚೇತನರ ಕಲ್ಯಾಣಕ್ಕೆ 15 ಲಕ್ಷ ರೂ,
- ಕ್ರೀಡಾ ಚಟುವಟಿಕೆಗಳ ಪ್ರೋತ್ಸಾಹಕ್ಕೆ 2 ಲಕ್ಷ, ನಲ್ಮ್ ಯೋಜನೆಯಡಿ ತರಬೇತಿ, ಸಹಾಯಧನ ಪಾವತಿಗೆ 50 ಲಕ್ಷಗಳನ್ನು ಸರ್ಕಾರದ ವಿವಿಧ ಅನುದಾನಗಳಲ್ಲಿ ಒದಗಿಸಲಾಗಿದೆ.
ಇದನ್ನೂ ಓದಿ: ಓವರ್ ಲೋಡಿಂಗ್ | 1 ಗಂಟೆ ವಿದ್ಯುತ್ ಕಡಿತ
- ಸ್ವಯಂ ಉದ್ಯೋಗಕ್ಕೆ ಬ್ಯಾಂಕ್ ಸಾಲ ಪಡೆದಿರುವ ಫಲಾನುಭವಿಗಳಿಗೆ ಸಹಾಯಧನ ನೀಡಲು 10 ಲಕ್ಷ ರೂ,
- ವೃತ್ತಿಪರ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿಗೆ 10 ಲಕ್ಷ,
- ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ಆರೋಗ್ಯ ತಪಾಸಣೆಗೆ 10 ಲಕ್ಷ ರೂ ಮೀಸಲಿಡಲಾಗಿದೆ.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ, ಪೌರಾಯುಕ್ತೆ ರೇಣುಕಾ ಸೇರಿದಂತೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.