CHITRADURGA NEWS | 07 May 2026
ಚಿತ್ರದುರ್ಗ: ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರ ತಂದೆ ಕೆ.ಆರ್.ಶಿವಪ್ರಕಾಶ್(86) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಇದನ್ನೂ ಓದಿ: 6ನೇ ತರಗತಿ ಪ್ರವೇಶಾತಿಗೆ ಮೇ.12 ರಂದು ಅರ್ಹತಾ ಪರೀಕ್ಷೆ
ಗುರುವಾರ ನಸುಕಿನಲ್ಲಿ ಬೆಂಗಳೂರಿನ ವಸಂತನಗರದ ತಮ್ಮ ನಿವಾಸನದಲ್ಲಿ ನಿಧನ ಹೊಂದಿದ್ದಾರೆ.ಮೃತ ಶಿವಪ್ರಕಾಶ್ ಅವರು MLC ಕೆ.ಎಸ್.ನವೀನ್ ಸೇರಿದಂತೆ ಓರ್ವ ಪುತ್ರಿ ಹಾಗೂ ಅಪಾರ ವಂಧುಗಳನ್ನು ಅಗಲಿದ್ದಾರೆ.
ಒಮ್ಮೆ ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಹೊಸದುರ್ಗ ಎಪಿಎಂಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಚಿತ್ರದುರ್ಗದ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷರಾಗಿ, ಪಂಚಾಚಾರ್ಯ ಕಲ್ಯಾಣ ಮಂಟಪದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಎನ್.ಜಿ.ಹಳ್ಳಿ ಮಂಡಲ ಪ್ರಧಾನರಾಗಿಯೂ ಆಯ್ಕೆ ಆಗಿದ್ದರು. ಶ್ರೀ ಜಯಪದ್ಮ ಮೋಟಾರ್ ಸರ್ವಿಸ್ ಮಾಲಿಕರಾಗಿದ್ದರು. ಚಿತ್ರದುರ್ಗದ ಪ್ರತಿಷ್ಠಿತ ವೀರಶೈವ ಸಮಾಜದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ: ಅಡಿಕೆ ಧಾರಣೆ | 6 ಮೇ | ರಾಶಿ ಅಡಿಕೆ ಬೆಲೆ ಏರಿಕೆ
ಇಂದು (ಗುರುವಾರ)ಸಂಜೆ 5.30 ರಿಂದ ಶುಕ್ರವಾರ ಬೆಳ್ಳಗೆ 10 ಗಂಟೆ ವರೆಗೂ ಚಿತ್ರದುರ್ಗದ ವಿ ಪಿ ಬಡಾವಣೆ RTO ಆಫೀಸ್ ರಸ್ತೆ ನಿವಾಸದಲ್ಲಿ ಮಧ್ಯಾಹ್ನ 3 ಘಂಟೆಯಿಂದ ಮರುದಿನ ಬೆಳ್ಳಗೆ 10 ಘಂಟೆ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೇ.9 ಶನಿವಾರ ಮಧ್ಯಾಹ್ನ 3 ಗಂಟೆಗೆ ಸ್ವಗ್ರಾಮ ಹೊಳಲ್ಕೆರೆ ತಾಲೂಕಿನ ಎನ್.ಜಿ.ಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಕೆ.ಆರ್.ಶಿವಪ್ರಕಾಶ್ ನಿಧನಕ್ಕೆ ವಿಜಯೇಂದ್ರ ಸಂತಾಪ:
ಬೆಂಗಳೂರು: ಶಾಸಕ ಕೆ.ಎಸ್. ನವೀನ್ ರವರ ತಂದೆ ಮತ್ತು ಚಿತ್ರದುರ್ಗದ ಶ್ರೀ ಜಯಪದ್ಮ ಮೋಟಾರ್ ಸರ್ವಿಸ್‍ನ ಮಾಲೀಕರಾದ ಕೆ.ಆರ್. ಶಿವಪ್ರಕಾಶ್ ಅವರು ಲಿಂಗೈಕ್ಯರಾದ ವಿಷಯ ಅತ್ಯಂತ ಬೇಸರ ತಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸಂತಾಪ ಸೂಚಿಸಿದ್ದಾರೆ.ಅವರ ಕುಟುಂಬ, ಅಭಿಮಾನಿಗಳು ಮತ್ತು ಬಂಧುಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
