Connect with us

ಶಾಸಕರಾದ ಟಿ.ರಘುಮೂರ್ತಿ ಹಾಗೂ ಬಿ.ಜಿ.ಗೋವಿಂದಪ್ಪಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

ಶಾಸಕರಾದ ಟಿ.ರಘುಮೂರ್ತಿ ಹಾಗೂ ಬಿ.ಜಿ.ಗೋವಿಂದಪ್ಪ

ಮುಖ್ಯ ಸುದ್ದಿ

ಶಾಸಕರಾದ ಟಿ.ರಘುಮೂರ್ತಿ ಹಾಗೂ ಬಿ.ಜಿ.ಗೋವಿಂದಪ್ಪಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

CHITRADURGA NEWS | 26 JANUARY 2024

ಚಿತ್ರದುರ್ಗ: ರಾಜ್ಯ ಸರ್ಕಾರ ವಿವಿಧ ನಿಗಮ ಹಾಗೂ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಇಬ್ಬರು ಶಾಸಕರಿಗೆ ಈ ಪಟ್ಟಿಯಲ್ಲಿ ಅವಕಾಶ ಸಿಕ್ಕಿದೆ.

ಜಿಲ್ಲೆಯ ಹಿರಿಯ ಶಾಸಕ ಹೊಸದುರ್ಗ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಬಿ.ಜಿ.ಗೋವಿಂದಪ್ಪ ಹಾಗೂ ಚಳ್ಳಕೆರೆಯ ಹ್ಯಾಟ್ರಿಕ್ ಶಾಸಕ ಟಿ.ರಘುಮೂರ್ತಿಗೆ ನಿಗಮ ಮಂಡಳಿಗಳ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದ ದಿವ್ಯಪ್ರಭು ಜಿ.ಆರ್.ಜೆ

ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜವಾಬ್ದಾರಿ ನೀಡಲಾಗಿದೆ.

ಇನ್ನೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮಂಡಳಿಗಳ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಇಬ್ಬರೂ ಶಾಸಕರಿಗೆ ಇನ್ನು ಮುಂದೆ ಸಂಪುಟ ದರ್ಜೆಯ ಸ್ಥಾನಮಾನ ದೊರೆಯಲಿದೆ. ಸಂಪುಟ ಸಚಿವರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: 9 ತಿಂಗಳಲ್ಲಿ ಜಿಲ್ಲೆಗೆ ಭದ್ರಾ ನೀರು | ಸಚಿವ ಡಿ.ಸುಧಾಕರ್

ನಿಗಮ ಮಂಡಳಿಯ ಅಧಿಕಾರಾವಧಿ ಆದೇಶ ಹೊರಟಿರುವ ಇಂದಿನಿಂದ ಮುಂದಿನ ಎರಡು ವರ್ಷಗಳಿಗೆ ನಿಗಧಿ ಮಾಡಲಾಗಿದೆ.

ಕಾರ್ಯಕರ್ತರಿಗೆ ಕೊಡಿ ಎಂದಿದ್ದ ಗೋವಿಂದಪ್ಪ:

ಹೊಸದುರ್ಗ ಶಾಸಕ ಬಿ.ಜ.ಗೋವಿಂದಪ್ಪ ಕೂಡಾ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಿಗಮ ಮಂಡಳಿ ವಿಚಾರವಾಗಿ ಪತ್ರ ಬರೆದಿದ್ದರು.

ನನಗೆ ಪಕ್ಷ ನಾಲ್ಕು ಬಾರಿ ಟಿಕೇಟ್ ನೀಡಿದೆ, ಶಾಸಕನಾಗುವ ಅವಕಾಶ ಕಲ್ಪಿಸಿದೆ. ಹಾಗಾಗಿ ನಿಗಮ ಮಂಡಳಿ ಅಧಿಕಾರವನ್ನು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಕೊಡಲು ಮನವಿ ಮಾಡಿದ್ದರು.

ಜಿಲ್ಲೆಯ ಇಬ್ಬರೂ ಶಾಸಕರು ನಿಗಮ ಮಂಡಳಿ ಸ್ಥಾನಮಾನ ನಿರಾಕರಿಸಿದ್ದರೂ ಕೂಡಾ ಪಕ್ಷದ ಲೆಕ್ಕಾಚಾರ ಬೇರೆಯೇ ಆಗಿರುವ ಕಾರಣಕ್ಕೆ ಜವಾಬ್ದಾರಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

ಟಿ.ರಘುಮೂರ್ತಿ ನಿರಾಕರಿಸಿದ್ದರು:

ಇತ್ತೀಚೆಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ತಮಗೆ ಯಾವುದೇ ನಿಗಮ ಮಂಡಳಿಗಳಲ್ಲಿ ಅಧಿಕಾರ ಬೇಡ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಯಾವುದೇ ಚ್ಯುತಿ ಬಾರದಂತೆ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಇದನ್ನೂ ಓದಿ: ಪ್ರಪ್ರಥಮ ಅಂತರ್ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಣೇಹಳ್ಳಿ ಶ್ರೀ

ಆದರೆ, ರಘುಮೂರ್ತಿ ಅವರ ಮನವಿಯ ಹೊರತಾಗಿಯೂ ಅವರಿಗೆ ಕೈಗಾರಿಕಾ ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಲಾಗಿದೆ. ಈ ಅಧಿಕಾರವನ್ನು ರಘುಮೂರ್ತಿ ಸ್ವೀಕರಿಸುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version