CHITRADURGA NEWS | 14 SEPTEMBER 2026
ಸಾಮಾನ್ಯವಾಗಿ ತುಪ್ಪ, ಸಾಸಿವೆ ಎಣ್ಣೆ, ಕರ್ಪೂರವನ್ನು ದೇವರ ಪೂಜೆಗೆ ಬಳಸುತ್ತಾರೆ. ಆದರೆ ಇವುಗಳಲ್ಲಿ ಔಷಧೀಯ ಗುಣಗಳು ಸಮೃದ್ಧವಾಗಿರುವುದರಿಂದ ಇವುಗಳನ್ನು ಮನೆಮದ್ದುಗಳಲ್ಲಿಯೂ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಶೀತ, ಮೂಗು ಕಟ್ಟಿಕೊಳ್ಳುವುದು, ತಲೆನೋವು ಅಥವಾ ಸೈನಸ್ ಸಮಸ್ಯೆಗಳು ಹೆಚ್ಚು ಕಾಡುತ್ತಿರುತ್ತದೆ. ಹಾಗಾಗಿ ಜನರು ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಹೆಚ್ಚಾಗಿ ಮನೆಮದ್ದುಗಳತ್ತ ತಿರುಗುತ್ತಾರೆ. ಅಂತವರು ತುಪ್ಪ, ಕರ್ಪೂರ ಮತ್ತು ಸಾಸಿವೆ ಎಣ್ಣೆಯನ್ನು ಬಳಸಬಹುದು. ಇವುಗಳನ್ನು ಮಿಕ್ಸ್ ಮಾಡಿ ಮೂಗು ಮತ್ತು ತಲೆಗೆ ಹಚ್ಚುವುದರಿಂದ ಮೂಗಿನ ಶುಷ್ಕತೆ ಮತ್ತು ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆಯಂತೆ. ಹಾಗಾದ್ರೆ ಇದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ.
ಕರ್ಪೂರ
ಕರ್ಪೂರವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದನ್ನು ಮೂಗಿಗೆ ಹಚ್ಚಿದಾಗ ಬಾಹ್ಯ ಅಲರ್ಜಿನ್ ಅಥವಾ ಬ್ಯಾಕ್ಟೀರಿಯಾಗಳನ್ನು ತೊಡೆದುಹಾಕಲು ಮತ್ತು ತಕ್ಷಣದ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ.
ತುಪ್ಪ
ತುಪ್ಪವು ಉತ್ತಮ ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಮೂಗಿನೊಳಗೆ ತೂರಿಕೊಂಡು ಒಣ ಮೂಗಿನ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಒಣ ಮೂಗು ಆಗಾಗ್ಗೆ ಸೀನುವಿಕೆ ಮತ್ತು ಕೆಮ್ಮುವಿಕೆಗೆ ಕಾರಣವಾಗಬಹುದು.
ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ ಮತ್ತು ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಮುಚ್ಚಿಹೋಗಿರುವ ಮೂಗುಗಳನ್ನು ತೆರೆಯಲು ಮತ್ತು ಮಾರ್ಗಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಈ ಮೂರನ್ನೂ ಒಟ್ಟಿಗೆ ಬಳಸುವುದರಿಂದ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.
ಈ ಮನೆಮದ್ದನ್ನು ಬಹಳ ಹಿಂದಿನಿಂದಲೂ ನಮ್ಮ ಹಿರಿಯರು ಬಳಸುತ್ತಾ ಬಂದಿದ್ದರು. ಹಾಗಾಗಿ ವಾರಕ್ಕೊಮ್ಮೆ ಇದನ್ನು ಮೂಗಿಗೆ ಹಚ್ಚಿಕೊಳ್ಳುವುದು ಸೂಕ್ತ. ಮಲಗುವ ಮುನ್ನ ಒಂದೊಂದು ಹನಿ ಹಚ್ಚಿ, ನಂತರ ಮೂಗು ಮತ್ತು ತಲೆಗೆ ಮೃದುವಾದ ಮಸಾಜ್ ಮಾಡಿ, ಇದರಿಂದ ನೀವು ತಕ್ಷಣ ನಿದ್ರೆಗೆ ಜಾರುತ್ತೀರಿ. ಬೆಳಗಿನ ಹೊತ್ತಿಗೆ ಶೀತ ಮತ್ತು ತಲೆನೋವಿನಿಂದ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

