Connect with us

FUNDOOS ವಾಟರ್ ಪಾರ್ಕ್‍ನಲ್ಲಿ ಮಸ್ತ್ ಮಜಾ ಮಾಡಿದ ಮಹಾನಟಿ ಗಗನ

Actor Gagana visit Fundoos

ಮುಖ್ಯ ಸುದ್ದಿ

FUNDOOS ವಾಟರ್ ಪಾರ್ಕ್‍ನಲ್ಲಿ ಮಸ್ತ್ ಮಜಾ ಮಾಡಿದ ಮಹಾನಟಿ ಗಗನ

CHITRADURGA NEWS | 18 DECEMBER 2024

ಚಿತ್ರದುರ್ಗ: ಕನ್ನಡ ಜನಪ್ರಿಯ ವಾಹಿನಿಯ ಎರಡು ಶೋಗಳಲ್ಲಿ ಮಿಂಚಿದ ಚಿತ್ರದುರ್ಗದ ಯುವತಿ ಗಗನ ಬಾರಿ ಈಗ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ.

ಮುದ್ದು ಮುದ್ದು ಮಾತುಗಳಿಂದ, ಮುದ್ದಾದ ನಟನೆಯಿಂದ ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿದ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೆಡಗಿ ಗಗನ.

ಇದನ್ನೂ ಓದಿ: ಅಡಿಕೆ ಧಾರಣೆ | ಡಿಸೆಂಬರ್ 17 | ಯಾವ ಅಡಿಕೆಗೆ, ಎಷ್ಟು ರೇಟ್

ಈಗ ಗಗನ ಎಲ್ಲಿಗೆ ಹೋದರೂ ಹತ್ತಾರು ಅಭಿಮಾನಿಗಳು ಸುತ್ತುವರೆಯುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಾರೆ.

ವಾಟರ್ ಪಾರ್ಕ್‍ನಲ್ಲಿ ಮಸ್ತ್ ಮಜಾ ಮಾಡಿದ ಮಹಾನಟಿ ಗಗನ

ZEE ಕನ್ನಡ ವಾಹಿನಿಯ ಜನಪ್ರಿಯ ಶೋ ಮಹಾನಟಿ ಕಾರ್ಯಕ್ರಮದಲ್ಲಿ ಗಗನ ಬಾರಿ ರನ್ನರ್ ಆಫ್ ಆಗಿ ಹೊರಹೊಮ್ಮಿದರು.

ಇದನ್ನೂ ಓದಿ: ದಿನ ಭವಿಷ್ಯ | 18 ಡಿಸೆಂಬರ್ 2024 | ಮನೆಯಲ್ಲಿ ಶುಭ ಕಾರ್ಯ, ವಾಹನ ಸಂಚಾರದಲ್ಲಿ ಎಚ್ಚರ, ಉದ್ಯೋಗಗಳಲ್ಲಿ ಅಡೆತಡೆ

ಆನಂತರ ಇದೇ ವಾಹಿನಿಯ ಮತ್ತೊಂದು ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಫೈನಲಿಸ್ಟ್ ಆಗಿದ್ದರು.

ಫಂಡೂಸ್‍ನಲ್ಲಿ ಮಿಂಚಿದ ಗಗನ:

ಕಳೆದ ವಾರ ಗಗನ ಬಾರಿ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ್ದರು. ಹಿರಿಯೂರು ಸಮೀಪದಲ್ಲಿ ವಾಣಿವಿಲಾಸ ಸಾಗರ ರಸ್ತೆಯಲ್ಲಿರುವ ಫಂಡೂಸ್ ವಾಟರ್ ಪಾರ್ಕ್‍ಗೆ (Fundoos water park )ಭೇಟಿ ನೀಡಿ ಮಸ್ತ್ ಮಜಾ ಮಾಡಿದ್ದಾರೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಚಿರತೆಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಸಾವು

ಸದ್ಗುರು ಆಯುರ್ವೇದ ಸಂಸ್ಥೆಯ ಹೊಸದುರ್ಗದ ಪ್ರದೀಪ್ ಅವರ ಫಂಡೂಸ್ ದಿನೇ ದಿನೇ ಜನಪ್ರಿಯ ಆಗುತ್ತಿದ್ದು, ಇಲ್ಲಿಗೆ ಝೀ ಕನ್ನಡದ ಸೆಲೆಬ್ರಿಟಿ ಆಗಿರುವ ಗಗನ ಬಂದು ಹೋಗಿದ್ದು ಸುದ್ದಿಯಾಗಿದೆ.

ವಾಟರ್ ಪಾರ್ಕ್‍ನಲ್ಲಿ ಮಸ್ತ್ ಮಜಾ ಮಾಡಿದ ಮಹಾನಟಿ ಗಗನ

ಫಂಡೂಸ್ ವಾಟರ್ ಪಾರ್ಕ್‍ಗೆ ಗಗನ ಬಂದ ತಕ್ಷಣ ನೂರಾರು ಅಭಿಮಾನಿಗಳು ಸುತ್ತುವರೆದು ಪೋಟೋ ತೆಗೆಸಿಕೊಂಡಿದ್ದಾರೆ. ಮಕ್ಕಳು ಕೂಡಾ ಗಗನ ಅವರನ್ನು ಗುರುತಿಸಿದ್ದಾರೆ.

ಇದನ್ನೂ ಓದಿ: ನವೋದಯ ಶಾಲೆಯ ಹಳೆಯ ವಿದ್ಯಾರ್ಥಿ ಸಮ್ಮಿಲನ | ಬುದ್ದನ ಪ್ರತಿಮೆ ಸ್ಥಾಪನೆ | ಬೆಳದಿಂಗಳ ಊಟದ ಸವಿ

ಕುಟುಂಬ ಸಮೇತ ಫಂಡೂಸ್ ವಾಟರ್ ಪಾರ್ಕ್‍ಗೆ ಆಗಮಿಸಿದ್ದ ಗಗನ ಬಾರಿ ಇಲ್ಲಿನ ವಿವಿಧ ಕ್ರೀಡೆಗಳಲ್ಲಿ ಮಿಂದೆದ್ದು ಮಸ್ತ್ ಮಜಾ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version