Connect with us

S.M.Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಕಂಬನಿ ಮಿಡಿದ ಕೋಟೆನಾಡು

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ

ಮುಖ್ಯ ಸುದ್ದಿ

S.M.Krishna: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಕಂಬನಿ ಮಿಡಿದ ಕೋಟೆನಾಡು

CHITRADURGA NEWS | 10 DECEMBER 2024

ಚಿತ್ರದುರ್ಗ: ಧೀಮಂತ ನಾಯಕ, ಮುತ್ಸದ್ಧಿ ರಾಜಕಾರಣಿ. ದೂರದೃಷ್ಟಿಯ ನೇತಾರ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.

ಕ್ಲಿಕ್ ಮಾಡಿ ಓದಿ: ಚಿತ್ರದುರ್ಗಕ್ಕೆ ನೀರು ಕೊಟ್ಟ ಪುಣ್ಯಾತ್ಮ ಎಸ್.ಎಂ.ಕೃಷ್ಣ | ಜಿ.ಎಚ್.ತಿಪ್ಪಾರೆಡ್ಡಿ

ಎಸ್.ಎಂ.ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಈ ನಾಡಿನಲ್ಲಿ ಆಗಿರುವ ಅಭಿವೃದ್ಧಿ ಯೋಜನೆಗಳನ್ನು ಮೆಲುಕು ಹಾಕಿದ್ದಾರೆ.

ಮುರುಘಾ ಮಠದ ಸಂತಾಪ

ರಾಜ್ಯ ಕಂಡ ಅದ್ಭುತ ರಾಜಕಾರಣಿ, ಮರೆಯಲಾಗದ ವ್ಯಕ್ತಿತ್ವ, ದೇಶ ಕಂಡ ಮೇಧಾವಿ, ನಾಡಿನ ಜನಪ್ರಿಯ ಯೋಜನೆಗಳ ಹರಿಕಾರ, ಶಿಸ್ತು ಮತ್ತು ಪ್ರಬುದ್ಧ ಆಡಳಿತದ ರೂವಾರಿ, ಸಜ್ಜನಿಕೆ, ಸದಾಚಾರ, ಸನ್ನಡತೆಗೆ ಮತ್ತೊಂದು ಹೆಸರೇ ಎಸ್.ಎಂ. ಕೃಷ್ಣ. ಅವರು ಮನುಷ್ಯ ಹೇಗಿರಬೇಕೆಂದು ತೋರಿಸಿಕೊಟ್ಟವರು. ಎಲ್ಲ ಹುದ್ದೆಗಳನ್ನು ಅಲಂಕರಿಸಿ ತಮ್ಮದೇ ಛಾಪು ಮೂಡಿಸಿದ್ದರು. ಸಾರ್ವಜನಿಕ ಜೀವನದಲ್ಲಿ ಕೀರ್ತಿ, ಗೌರವ ಹೆಚ್ಚಿಸಿದ ಸುಸಂಸ್ಕೃತ ರಾಜಕಾರಣಿ. ಶಾಸಕರಾಗಿ, ಮುಖ್ಯಮಂತ್ರಿಗಳಾಗಿ, ಸಂಸದರಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಅವರು ಮಾಡಿದ ಸೇವೆ ಅನುಕರಣೀಯ. ಇಂತಹ ಪ್ರಬುದ್ಧ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡು ನಾಡು ಬಡವಾಗಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಪ್ರಮಥರು ಕರುಣಿಸಲಿ ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ ವಿದ್ಯಾಪೀಠ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಂತಾಪ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಗಲಿಕೆ ದುಃಖದ ಸಂಗತಿಯಾಗಿದೆ ಎಂದು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಮಂಗಳವಾರದ ಹತ್ತಿ ರೇಟ್

3-4 ತಿಂಗಳ ಹಿಂದೆ ಎಸ್.ಎಂ.ಕೃಷ್ಣ ಅವರನ್ನು ವಿಮಾನ ಪ್ರಯಾಣದಲ್ಲಿ ಭೇಟಿ ಮಾಡಿದ್ದೆ. ಆಗ ಎಸ್.ಎಂ.ಕೃಷ್ಣ ಅವರು ನನಗೆ ಸಾಕಷ್ಟು ರಾಜಕೀಯ ಮಾರ್ಗದರ್ಶನ ಮತ್ತು ಜನಸೇವೆಯ ಬಗ್ಗೆ ಹಿತವಚನ ನೀಡಿ, ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನಾನು ಅವರಿಂದ ಆಶೀರ್ವಾದ ಪಡೆದ ನಾನೇ ಪುಣ್ಯವಂತ ಎಂದು ಭಾವಿಸುತ್ತಾ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ತಿಳಿಸಿದ್ದಾರೆ.

ಸಂಸದ ಗೋವಿಂದ ಕಾರಜೋಳ ಕಂಬನಿ

ಚಿತ್ರದುರ್ಗ: ಆಯಾ ಕಾಲಘಟ್ಟದಲ್ಲಿ, ಈ ರಾಜ್ಯದ ಘನತೆ, ಹಿರಿಮೆ, ಗೌರವವನ್ನು ಎತ್ತಿ ಹಿಡಿಯುವ ಕಾಯಕವನ್ನು ಈ ನಾಡು ಕಂಡ ಪ್ರತಿಯೊಬ್ಬ ಮುತ್ಸದ್ದಿ ರಾಜಕಾರಣಿಗಳು ಕೂಡ ಮಾಡುತ್ತಾ ಬಂದಿದ್ದಾರೆ. ಇದಕ್ಕೆ ನಮ್ಮನ್ನಗಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕೂಡ ಹೊರತಾಗಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಸ್ಮರಿಸಿದ್ದಾರೆ.

92 ವರ್ಷಗಳ ತುಂಬು ಜೀವನ ನಡೆಸಿ, ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ಮಾದರಿಯಾಗಿ ಬದುಕಿ ಹೋಗಿರುವ ಎಸ್.ಎಂ.ಕೃಷ್ಣ ಅವರ ಸಾವು ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲು ಎಸ್.ಎಂ.ಕೃಷ್ಣ ಅವರ ದೂರದೃಷ್ಟಿ ನಿಲುವುಗಳೇ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು. ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರನ್ನು ಸಿಲಿಕಾನ್ ಸಿಟಿಯಾಗಿ ಬದಲಾಯಿಸಿದ ಬದ್ದತೆಯುಳ್ಳ ರಾಜಕಾರಣಿ ಅವರು.

ಕ್ಲಿಕ್ ಮಾಡಿ ಓದಿ: ಚಿತ್ರದುರ್ಗದಲ್ಲಿ ವಕೀಲರ ರಾಜ್ಯಮಟ್ಟದ ಸಮಾವೇಶ | ಒಳಮೀಸಲಾತಿ ಕುರಿತ ಚರ್ಚೆಗೆ ನಿರ್ಣಯ

ದೊರೆತ ಹುದ್ದೆಗಳಿಗೆ ಗೌರವವನ್ನು ದೊರಕಿಸಿಕೊಟ್ಟು, ತಾವೂ ಬೆಳೆದು, ಇತರರನ್ನೂ ಬೆಳೆಸಿದ ಮಹಾನ್ ನಾಯಕರು ಶ್ರೀಯುತರು. ಅಭಿವೃದ್ದಿಯೊಂದನ್ನೇ ಮಾನದಂಡವಾಗಿಟ್ಟುಕೊಂಡು ರಾಜಕಾರಣದಲ್ಲಿ ದಾಪುಗಾಲಿಟ್ಟ ಮಹಾಚೇತನ ನಮ್ಮನ್ನಗಲಿರುವುದು ಅಭಿವೃದಿಯ ರಾಯಭಾರಿಯೊಬ್ಬರನ್ನು ಕಳೆದುಕೊಂಡಾAತಾಗಿದೆ. ಭಗವಂತ ಅವರ ಅನುಯಾಯಿಗಳಿಗೆ ಮತ್ತು ಕುಟುಂಬ ವರ್ಗಕ್ಕೆ ಶ್ರೀಯುತರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಮಾಜಿ ಸಚಿವ ಎಚ್.ಆಂಜನೇಯ ಸಂತಾಪ

ಚಿತ್ರದುರ್ಗ: ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಎಲ್ಲ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ, ಸಮರ್ಥವಾಗಿ ನಿಭಾಯಿಸಿದ ಬೆರಳೆಣಿಕೆ ರಾಜಕಾರಣಿಗಳಲ್ಲಿ ಎಸ್.ಕೆ.ಕೃಷ್ಣ ಪ್ರಮುಖರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಡೀ ಜಗತ್ತು ಕರ್ನಾಟಕದ ಕಡೆ ತಿರುಗಿ ನೋಡುವ ರೀತಿ ಐಟಿ-ಬಿಟಿ ಮೂಲಕ ಬೆಂಗಳೂರನ್ನು ಕಟ್ಟಿದ ರೀತಿ, ಜೊತೆಗೆ ಉದ್ಯೋಗ ಸೃಷ್ಠಿಗೆ ಅಗತ್ಯ ಯೋಜನೆ ರೂಪಿಸಿದ ದೂರದೃಷ್ಟಿ ರಾಜಕಾರಣಿ. ಅವರು ಬೆಂಗಳೂರನ್ನು ಐಟಿ-ಬಿಟಿ ಹೆಬ್ಬಾಗಿಲು ಆಗಿಸುವಲ್ಲಿ ಶ್ರಮಿಸಿದ್ದು ವಿಶೇಷ.

ಕ್ಲಿಕ್ ಮಾಡಿ ಓದಿ: ಹಿರಿಯೂರು, ಚಳ್ಳಕೆರೆಯಲ್ಲಿ ಲೋಕಾಯುಕ್ತ ದಾಳಿ | ಅರಣ್ಯ ಇಲಾಖೆ ACF ಸುರೇಶ್‍ಗೆ ಬೆಳ್ಳಂ ಬೆಳಗ್ಗೆ ಶಾಕ್

ಸೌಮ್ಯ ರಾಜಕಾರಣಿ ಎಸ್.ಎಂ.ಕೃಷ್ಣ ಅಗಲಿಕೆ ತೀವ್ರ ನೋವುಂಟು ಮಾಡಿದ್ದು, ಅತ್ಯುತ್ತಮ ಸಂಸದೀಯ ಹಿರಿಯ ಪಟು ಆಗಿದ್ದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಎಸ್.ಎಂ.ಕೃಷ್ಣ, ಇಂದಿರಾಗಾಂಧಿ ಅವರ ಜನಪರ ಆಡಳಿತಕ್ಕೆ ಆಕರ್ಷಿತರಾಗಿ ಕಾಂಗ್ರೆಸ್ ಸೇರಿ ಲೋಕಸಭೆ, ವಿಧಾನಸಭೆ ಸದಸ್ಯರು, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಸೇರಿ ರಾಷ್ಟ್ರದ ಬಹುತೇಕ ಎಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮರ್ಥವಾಗಿ ನಿಭಾಯಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹೀಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಕೊಟ್ಟ ಮಹಾನ್ ನಾಯಕ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ.

ಕೆಂಗಲ್ ಹನುಮಂತಯ್ಯ ವಿಧಾನಸಭೆ ಕಟ್ಟಿದರೆ, ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಾಣ ಮಾಡುವ ಮೂಲಕ ದೂರದೃಷ್ಟಿಯ ರಾಜಕಾರಣಿ ಎಂಬುದನ್ನು ತಮ್ಮ ಆಡಳಿತದ ಮೂಲಕ ದೃಢಪಡಿಸಿದ ರಾಜಕಾರಣಿ.

ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಡಿಸೆಂಬರ್ 10 | ಧನ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗ, ಆರೋಗ್ಯದಲ್ಲಿ ಎಚ್ಚರ

ಕಾಡುಗಳ್ಳ ವೀರಪ್ಪನ್ ನಾಡಿನ ವರನಟ ಡಾ.ರಾಜಕುಮಾರ್ ಅವರನ್ನು ಅಪಹರಣ ಮಾಡಿದ ಸಂದರ್ಭ ಆ ಸವಾಲನ್ನು ಮೆಟ್ಟಿನಿಂತು ಕನ್ನಡದ ಕಣ್ಮಣಿಯನ್ನು ನಾಡಿಗೆ ಕರೆತಂದಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತ ಘಟನೆ. ಇಂತಹ ಅಪರೂಪದ ರಾಜಕಾರಣಿಯ ಮಾಗದರ್ಶನ ನಾಡಿಗೆ ಇನ್ನಷ್ಟು ಕಾಲ ಬೇಕಿತ್ತು ಎಂದು ಎಚ್.ಆಂಜನೇಯ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version