ಹೊಸದುರ್ಗ
ನಾಳೆ ಹೊಸದುರ್ಗ ಪಟ್ಟಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಕರೆಂಟ್ ಕಟ್
CHITRADURGA NEWS | 10 DECEMBER 2024
ಹೊಸದುರ್ಗ: ಹೊಸದುರ್ಗ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮತ್ತು ಒಳಚರಂಡಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ (ನಾಳೆ)ಡಿ.11 ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ(Power outage)ವಾಗಲಿದೆ.
ಕ್ಲಿಕ್ ಮಾಡಿ ಓದಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನಕ್ಕೆ ಕಂಬನಿ ಮಿಡಿದ ಕೋಟೆನಾಡು
ವಿದ್ಯುತ್ ಅಡಚಣೆಗೊಳಪಡುವ ಪ್ರದೇಶಗಳು:
ಹೊಸದುರ್ಗ ಪಟ್ಟಣ, ಕೆಲ್ಲೋಡು, ಹುಣವಿನೋಡು, ಕಂಗುವಳ್ಳಿ ಮತ್ತು ಬೋಕಿಕೆರೆ ಪಂಚಾಯಿತಿಯ ಎಲ್ಲಾ ಗ್ರಾಮಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೊಸದುರ್ಗ ಬೆ.ವಿ.ಕಂ. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.