ಮುಖ್ಯ ಸುದ್ದಿ
ಚಂದ್ರವಳ್ಳಿಯಲ್ಲಿ ಶ್ರೀ ಹುಲೆಗೊಂದಿ ಸಿದ್ದೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವ | ಜನಪದ ಕಲಾ ತಂಡದೊಂದಿಗೆ ಅದ್ದೂರಿ ಅಡ್ಡ ಪಲ್ಲಕ್ಕಿ ಉತ್ಸವ
CHITRADURGA NEWS | 23 DECEMBER 2024
ಚಿತ್ರದುರ್ಗ: ನಗರದ ಚಂದ್ರವಳ್ಳಿಯಲ್ಲಿ ಶ್ರೀ ಹುಲೆಗೊಂದಿ ಸಿದ್ದೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು.
ಕ್ಲಿಕ್ ಮಾಡಿ ಓದಿ: ದುರ್ಗದ ಪ್ರೀತಿಗೆ ಶರಣಾದ ಕಿಚ್ಚ ಸುದೀಪ್ | ಕುಟುಂಬ ಸಮೇತ ಕೋಟೆನಾಡಿಗೆ ಆಗಮನ
ಅಡ್ಡ ಪಲ್ಲಕ್ಕಿಯಲ್ಲಿ ಶ್ರೀ ಹುಲೆಗೊಂದಿ ಸಿದ್ದೇಶ್ವರ ಸ್ವಾಮಿಯ ರತದೊಂದಿಗೆ ಜನಪದ ಕಲಾ ಮೇಳ ವೀರಗಾಸೆ, ಭಕ್ತಾದಿಗಳು ಸಹ ಹೆಜ್ಜೆ ಹಾಕುತ್ತಾ ಸಾಗಿದರು.
ಶ್ರೀ ಬಸವ ಕುಮಾರ ಸ್ವಾಮೀಜಿ ಕಾರ್ತಿಕ ಮಹೋತ್ಸವದಲ್ಲಿ ದೀಪ ಬೆಳಗುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಯಿತು, ಕ್ಷೇತ್ರದ ಮಹಿಮೆಯ ಬಗ್ಗೆ ಶ್ರೀ ಭಕ್ತರು ಅನೇಕ ಬಾರಿ ನನಗೆ ತಿಳಿಸಿದರು, ಶ್ರೀಮಠದಿಂದ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಐತಿಹಾಸಿಕ ಸ್ಥಳದ ಜೊತೆಗೆ ಪ್ರವಾಸೋದ್ಯಮ ಸ್ಥಳವಾಗಿದೆ, ಸ್ವಚ್ಛತೆ ಮತ್ತು ಪರಿಸರವನ್ನು ಕಾಪಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಗಿಸಿದರು.
ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್
ಈ ಸಂದರ್ಭದಲ್ಲಿ ಅಧ್ಯಕ್ಷ ಬಿ.ಎಸ್ ಸಿದ್ದಪ್ಪ, ಉಪಾಧ್ಯಕ್ಷ ಬಿ.ಎಸ್ ಮುರುಗೇಶ್, ಅರ್ಚಕರು ಕೆ.ಎನ್. ಶಿವಕುಮಾರ್, ಡಾ. ಎಸ್ ಬಸವರಾಜ್, ಡಾ.ಎಚ್.ನಾಗರಾಜ್, ಡಾ. ಜಗದೀಶ್. ಎನ್. ಪ್ರಸನ್ನ ಕುಮಾರ್, ಹೆಚ್.ಚಂದ್ರಶೇಖರ್, ಗಿರೀಶ್ ಉಪಸ್ಥಿತರಿದ್ದರು.